Advertisement
ಕೋವಿಡ್-19 ಜಾಡು ಹಿಡಿದುತೀವ್ರ ಸೋಂಕು ಪೀಡಿತರು ಮಾತ್ರವಲ್ಲದೆ ಕಡಿಮೆ ಅಪಾಯ ಹೊಂದಿರುವವರ ಸಂಪರ್ಕ ಪತ್ತೆಯನ್ನೂ ಮಾಡಿ ರುವ ಕರ್ನಾಟಕ ಅಂಥವರನ್ನು ಕಡ್ಡಾಯ ಕ್ವಾರಂಟೈನ್ ಗೊಳಪಡಿಸಿದೆ. ಹಾಗೆ ಕ್ವಾರಂಟೈನ್‌ಗೆ ಒಳಪಟ್ಟ ಪ್ರತಿ ಯೊಬ್ಬನಿಗೂ ರಾಜ್ಯ ವಿನ್ಯಾಸಗೊಳಿಸಿದ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಲಾಗಿದೆ. 10 ಸಾವಿರಕ್ಕೂ ಅಧಿಕ ಸಿಬಂದಿ ಸಂಪರ್ಕಿತರ ಪತ್ತೆಯ ನಿರ್ದಿಷ್ಟ ಜವಾಬ್ದಾರಿಗಳನ್ನು ಉತ್ತಮವಾಗಿ ಪೂರೈಸಿದ್ದಾರೆ ಎಂದು ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.
ಸಂಪರ್ಕ ಪತ್ತೆಗೆ ಕರ್ನಾಟಕ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್‌ಗಳನ್ನು ವ್ಯಾಪಕವಾಗಿ ಬಳಸಿಕೊಂಡಿದೆ. ಹೀಗಾಗಿ ಅಲ್ಲಿ ಯಾವುದೇ ವ್ಯಕ್ತಿಗೆ ಸೋಂಕನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ಕೊಳೆಗೇರಿಗಳಲ್ಲಿ ಕೋವಿಡ್-19 ಕಾಣಿಸಿಕೊಂಡಾಗ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಿದೆ. ಆದ್ದರಿಂದ ಅಲ್ಲಿನ ಕೊಳೆಗೇರಿ ಗಳಲ್ಲಿ ಹೆಚ್ಚಿನ ಬಾಧಿತರು ಕಾಣಸಿಗುವುದಿಲ್ಲ ಎಂದು ವಿವರಿಸಿದೆ. “ಆಶಾ’ ಕೆಲಸಕ್ಕೂ ಮೆಚ್ಚುಗೆ
ಪೋಲಿಂಗ್ ಬೂತ್ ಮಟ್ಟದ ಆರೋಗ್ಯ ಅಧಿಕಾರಿ ಗಳು ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ. ಆಪ್ತ ಮಿತ್ರ ಸಹಾಯವಾಣಿ (14410) ಮೂಲಕ ಎಲ್ಲ ರಿಗೂ ಅಗತ್ಯ ಮಾರ್ಗದರ್ಶನ ಸಿಕ್ಕಿದೆ. ಆಶಾ ಕಾರ್ಯ ಕರ್ತೆಯರು ಹಳ್ಳಿ ಹಳ್ಳಿಗಳ ಮನೆಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಿ ಕೊರೊನಾವನ್ನು ನಿಯಂತ್ರಿಸಿದ್ದಾರೆ ಎಂದು ಸಚಿವಾಲಯ ಮೆಚ್ಚುಗೆ ಸೂಚಿಸಿದೆ.