Advertisement

ರಾಜ್ಯ ಹೂಡಿಕೆದಾರರ ಆದ್ಯತೆಯ ತಾಣ: ಸಿಎಂ

11:57 PM Oct 23, 2020 | mahesh |

ಬೆಂಗಳೂರು: ರಾಜ್ಯವು ಹೂಡಿಕೆದಾರರ ಆದ್ಯತೆಯ ತಾಣ ವಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಶುಕ್ರವಾರ ಯಡಿಯೂರಪ್ಪ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ. ಕರ್ನಾಟಕ ಹೂಡಿಕೆದಾರರಿಗೆ ನೆಚ್ಚಿನ ಮತ್ತು ಆದ್ಯತೆಯ ತಾಣವಾಗಿ ಮುಂದುವರಿದಿದ್ದು, 2020ರ ಎಪ್ರಿಲ್‌- ಜೂನ್‌ ತ್ತೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್ಡಿಐ) ಆಕರ್ಷಿಸಿದೆ. ಕೊರೊನಾ ಸವಾಲುಗಳ ನಡುವೆಯೂ ಈ ತಿಂಗಳಲ್ಲಿ ರಾಜ್ಯದಲ್ಲಿ 10,255 ಕೋ. ರೂ. ಹೂಡಿಕೆಯಾಗಿದೆ ಎಂದಿದ್ದಾರೆ.

ಭಾರತದ ಮೊದಲ ವಲಯ- ನಿರ್ದಿಷ್ಟ 3,540 ಕೋ. ರೂ. ಹೂಡಿಕೆ ಯಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಸರಕುಗಳ ಕ್ಲಸ್ಟರ್‌ ಹುಬ್ಬಳ್ಳಿಯಲ್ಲಿ ತಲೆಯೆತ್ತಲಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಅನುಗುಣವಾಗಿ ಇಲ್ಲಿ ವಿಶ್ವದರ್ಜೆಯ ಸೌಲಭ್ಯ ಲಭ್ಯವಾಗ ಲಿದ್ದು, 20,000 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ.

ಅಭಿವೃದ್ಧಿಗೆ ಪೂರಕವಾಗಿರುವ ಸಂಶೋಧನೆ ಮತ್ತು ನಾವೀನ್ಯಗಳನ್ನು ರಾಜ್ಯ ಪ್ರೋತ್ಸಾಹಿಸುತ್ತಲೇ ಬಂದಿದೆ. ಉಪಗ್ರಹ ತಂತ್ರಜ್ಞಾನ, ಸಾವಯವ ಕೃಷಿ, ಆಗೆ¾ಂಟೆಡ್‌ ರಿಯಾಲಿಟಿ ಇತ್ಯಾದಿ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಕರ್ನಾಟಕದ 15 ನವೋದ್ಯಮಗಳು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next