Advertisement

ಉದ್ಯೋಗ ಇಲ್ಲದಿದ್ದರೆ ಹುಡುಕಿ ಜೀವನಾಂಶ ನೀಡಿ! ಹೈಕೋರ್ಟ್‌ ಆದೇಶ

11:42 PM Feb 13, 2023 | Team Udayavani |

ಬೆಂಗಳೂರು: ದುಡಿಯುವ ಸಾಮರ್ಥ್ಯ ಹೊಂದಿರುವ ಪತಿಯು ವಿಚ್ಛೇದಿತ ಪತ್ನಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಇತ್ತೀಚೆಗೆ ಆದೇಶಿಸಿದ್ದ ಹೈಕೋರ್ಟ್‌, ಈಗ ಪತ್ನಿ-ಮಗುವಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯ. ಪತಿಗೆ ಉದ್ಯೋಗ ಇಲ್ಲದಿದ್ದರೆ ಹುಡುಕಿಕೊಂಡು ಜೀವನಾಂಶ ನೀಡಬೇಕು ಎಂದು ಮತ್ತೂಂದು ಪ್ರಕರಣದಲ್ಲಿ ಆದೇಶಿಸಿದೆ.

Advertisement

ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡು ವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಪತ್ನಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಪತಿಯ ವಾದ ಹುರುಳಿಲ್ಲದ್ದು ಎಂದು ಹೇಳಿರುವ ಹೈಕೋರ್ಟ್‌, ಒಬ್ಬ ಸಮರ್ಥ ಪುರುಷ ಹೆಂಡತಿ ಮತ್ತು ಮಗುವನ್ನು ನೋಡಿಕೊಳ್ಳಬೇಕು. ಅದಕ್ಕಾಗಿ ಯಾವುದೇ ಕೆಲಸ ಅಥವಾ ಅವಕಾಶವಿಲ್ಲದಿದ್ದರೂ ಅಂತಹ ಕೆಲಸ ಅಥವಾ ಅವಕಾಶವನ್ನು ಹುಡುಕಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ತನ್ನ ಆದೇಶದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next