Advertisement

ಆಯ್ಕೆಯ ಸ್ವಾತಂತ್ರ್ಯ…ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ಮುಫ್ತಿ, ಒಮರ್ ಹೇಳಿದ್ದೇನು?

02:47 PM Mar 15, 2022 | Team Udayavani |

ನವದೆಹಲಿ: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಅಂತಿಮ ತೀರ್ಪನ್ನು ಪ್ರಕಟಿಸಿದ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಂಗಳವಾರ (ಮಾರ್ಚ್ 15) ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ತುಂಬಾ ನಿರಾಸೆಯಾಗಿರುವುದಾಗಿ ತಿಳಿಸಿದ್ದಾರೆ.

Advertisement

“ಇದೊಂದು ಕೇವಲ ಧಾರ್ಮಿಕ ವಿಚಾರವಲ್ಲ, ಆದರೆ ಆಯ್ಕೆಯ ಸ್ವಾತಂತ್ರ್ಯ ಹಕ್ಕೂ ಕೂಡಾ ಆಗಿದೆ” ಎಂದು ಮುಫ್ತಿ ಪ್ರತಿಪಾದಿಸಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ:ಪಂಜಾಬ್ ಆಯ್ತು…ಮುಂದಿನ ವರ್ಷ ರಾಜಸ್ಥಾನದಲ್ಲಿ ಗದ್ದುಗೆ ಏರಲು ಆಮ್ ಆದ್ಮಿ ಪಕ್ಷದ ಚಿತ್ತ

ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿರುವುದು ನಿರಾಸೆ ತಂದಿದೆ. ಒಂದೆಡೆ ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತೇವೆ, ಈಗ ನಾವು ಸರಳವಾದ ಆಯ್ಕೆಯ ಹಕ್ಕನ್ನೂ ಕೂಡಾ ನಿರಾಕರಿಸುತ್ತಿದ್ದೇವೆ. ಇದು ಕೇವಲ ಧಾರ್ಮಿಕವಾಗಿ ಅಲ್ಲ, ಆದರೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕಸಿದುಕೊಂಡಂತಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮುಫ್ತಿ ಟ್ವೀಟ್ ನಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.

ಒಮರ್ ಅಬ್ದುಲ್ಲಾ ಪ್ರತಿಕ್ರಿಯೆ:

Advertisement

“ಮಹಿಳೆಯೊಬ್ಬಳು ಯಾವ ರೀತಿಯ ಉಡುಗೆಯನ್ನು ಧರಿಸಬೇಕೆಂಬ ಮೂಲಭೂತ ಹಕ್ಕಿನ ಆಯ್ಕೆಯ್ನನೂ ಕೂಡಾ ಹೈಕೋರ್ಟ್ ಎತ್ತಿಹಿಡಿಯದಿರುವುದು ಹಾಸ್ಯಾಸ್ಪದವಾಗಿದೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಈ ಸಂದರ್ಭದಲ್ಲಿ ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ನ ತೀರ್ಪು ತುಂಬಾ ನಿರಾಸೆಗೊಳಪಡಿಸಿದೆ. ಹಿಜಾಬ್ ಬಗ್ಗೆ ನೀವು ಏನಂತ ಯೋಚಿಸಿದ್ದೀರಿ, ಇದೊಂದು ಕೇವಲ ಬಟ್ಟೆಯಲ್ಲ, ಇದು ಮಹಿಳೆಯ ಉಡುಗೆಯ ಆಯ್ಕೆಯ ಹಕ್ಕು. ಮಹಿಳೆಯರ ಮೂಲಭೂತ ಹಕ್ಕನ್ನೂ ಕೂಡಾ ಹೈಕೋರ್ಟ್ ಪರಿಗಣಿಸದಿರುವುದು ವಿಪರ್ಯಾಸದ ಸಂಗತಿ ಎಂದು ಒಮರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next