Advertisement

EXAM ಮಂಗಳೂರಿನಲ್ಲೇ ನ್ಯಾಯಾಂಗ ಪರೀಕ್ಷೆ ಬರೆದ ಗರ್ಭಿಣಿ

11:55 PM Nov 19, 2023 | Team Udayavani |

ಮಂಗಳೂರು: ಎಂಟೂವರೆ ತಿಂಗಳ ಗರ್ಭಿಣಿ ಅಭ್ಯರ್ಥಿಯೋರ್ವರು ಬೆಂಗಳೂರಿನಲ್ಲಿ ಬರೆಯಬೇಕಿದ್ದ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಮಂಗಳೂರಿನಲ್ಲೇ ಬರೆದಿದ್ದಾರೆ.

Advertisement

ಮಂಗಳೂರಿನ ನ್ಯಾಯವಾದಿ ನೇತ್ರಾವತಿ ಅವರು ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದರು. ಪರೀಕ್ಷೆ ಬೆಂಗ ಳೂರಿನಲ್ಲಿ ನಿಗದಿಯಾಗಿತ್ತು. ಆದರೆ ತಾನು ಗರ್ಭಿಣಿಯಾಗಿರುವ ಕಾರಣ ಮಂಗಳೂರಿನಲ್ಲಿಯೇ ಪರೀಕ್ಷೆ ಬರೆ ಯಲು ಅನುಮತಿ ನೀಡುವಂತೆ ಹೈ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಸಿವಿಲ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಹೈಕೋರ್ಟ್‌ನ ಸಮಿತಿಯು ಈ ಅರ್ಜಿಯನ್ನು ಪುರಸ್ಕರಿಸಿ ಅಭ್ಯರ್ಥಿಯ ಮನವಿಯಂತೆ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು. ಮುಖ್ಯ ನ್ಯಾಯ ಮೂರ್ತಿ ಪ್ರಸನ್ನ ಬಿ. ವರಾಳೆ ಕೂಡ ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದ್ದರು. ಅದರಂತೆ ನೇತ್ರಾವತಿ ಅವರು ಶನಿವಾರ ಮತ್ತು ರವಿವಾರ ಪರೀಕ್ಷೆ ಬರೆದಿದ್ದಾರೆ. ಮುನ್ನೆಚ್ಚರಿಕೆಯಾಗಿ ನ್ಯಾಯಾ ಲಯ ದ ಆವರಣದಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಕೂಡ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next