ಬೆಂಗಳೂರು: ಖಾತೆ ಹಂಚಿಕೆ ಬಗ್ಗೆ ಎದ್ದಿದ್ದ ಅಸಮಾಧಾನಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಸಿಎಂ ಯಡಿಯೂರಪ್ಪ ಖಾತೆಗಳನ್ನು ಮರುಹಂಚಿಕೆ ಮಾಡಿ, ಅತೃಪ್ತಿ ಶಮನದಲ್ಲಿ ಯಶಸ್ಸು ಕಂಡಿ ದ್ದಾರೆ.
ಸಿಎಂ ಅವರು ಗುರುವಾರ ತಡ ರಾತ್ರಿಯ ವರೆಗೆ ಎಂ.ಟಿ.ಬಿ. ನಾಗರಾಜ್, ಗೋಪಾಲಯ್ಯ, ಆರ್. ಶಂಕರ್ ಮತ್ತು ಕೆ.ಸಿ. ನಾರಾಯಣಗೌಡ ಜತೆಗೆ ಚರ್ಚೆ ನಡೆಸಿ, ಅವರ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ.
ಖಾತೆ ಹಂಚಿಕೆಯಾದ 72 ತಾಸು ಗಳಲ್ಲಿ ಮರು ಹಂಚಿಕೆ ಮಾಡಿರು ವುದು ವಿಶೇಷ. ಅದಲು ಬದಲು ಮಾಡಲಾದ ಖಾತೆಗಳೆಲ್ಲ “ಅತೃಪ್ತ’ ಸಚಿವರದೇ ಆಗಿದ್ದು, ಸಿಎಂ ಅವರು ತಮ್ಮ ಬಳಿಯಿದ್ದ ಯೋಜನೆ ಮತ್ತು ಸಾಂಖೀಕ ಖಾತೆಯನ್ನು ಮಾತ್ರ ಒಬ್ಬರು ಸಚಿವರಿಗೆ ಹೆಚ್ಚುವರಿಯಾಗಿ ನೀಡಿ ಸಮಾಧಾನಪಡಿಸಿದ್ದಾರೆ. ಅಸಮಾ ಧಾನಗೊಂಡಿದ್ದ ಹಿರಿಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಹೆಚ್ಚುವರಿ ಖಾತೆ ನೀಡಿದ್ದರೂ ಇನ್ನೊಂದು ಖಾತೆಯನ್ನು ವಾಪಸ್ ಪಡೆಯಲಾಗಿದೆ.
ಸಚಿವ ಡಾ| ಸುಧಾಕರ್ ಮಾತ್ರ ಅಸಮಾಧಾನದಿಂದಲೇ ಇದ್ದು, ಅವರನ್ನು ಸಮಾಧಾನಪಡಿಸಲು ಸಿಎಂ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಮರುಹಂಚಿಕೆ: ಯಾರಿಗೆ ಯಾವ ಖಾತೆ :
ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ಫ್
ಅರವಿಂದ ಲಿಂಬಾವಳಿ: ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಎಂ.ಟಿ.ಬಿ. ನಾಗರಾಜ್: ಪೌರಾಡಳಿತ ಮತ್ತು ಸಕ್ಕರೆ
ಗೋಪಾಲಯ್ಯ- ಅಬಕಾರಿ
ಆರ್. ಶಂಕರ್: ತೋಟಗಾರಿಕೆ ಮತ್ತು ರೇಷ್ಮೆ
ಕೆ.ಸಿ. ನಾರಾಯಣಗೌಡ:ಯುವ ಜನ ಸೇವೆ ಮತ್ತು ಕ್ರೀಡೆ ಹಾಗೂ ಯೋಜನೆ ಮತ್ತು ಸಾಂಖೀÂಕ ಇಲಾಖೆ.