Advertisement

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

01:59 AM Dec 04, 2021 | Team Udayavani |

ಉಡುಪಿ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರು ಶುಕ್ರವಾರ ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಮಧ್ವಾಚಾರ್ಯ ಪ್ರತಿಷ್ಠಾಪಿತ ಶ್ರೀಕೃಷ್ಣ-ವಾದಿರಾಜ ಪ್ರತಿಷ್ಠಾಪಿತ ಮುಖ್ಯಪ್ರಾಣ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ರಾಜ್ಯಪಾಲರಿಗೆ ದೇವರ ದರ್ಶನ ಮಾಡಿಸಿ ಪ್ರಸಾದ ಮಂತ್ರಾಕ್ಷತೆಯನ್ನು ನೀಡಿದರು.

Advertisement

ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಮಠದ ವ್ಯವಸ್ಥಾಪಕ ಗೋವಿಂದರಾಜ್‌, ಪ್ರದೀಪ್‌ ರಾವ್‌ ಉಪಸ್ಥಿತರಿದ್ದರು. ರಾಜ್ಯಪಾಲರು ಶ್ರೀಕೃಷ್ಣ ಮಠದಲ್ಲಿ ಉಪಾಹಾರ ಸ್ವೀಕರಿಸಿದರು.

ಕೊಲ್ಲೂರು: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಅವರು ಶುಕ್ರವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇಗುಲದ ತಂತ್ರಿ ರಾಮಚಂದ್ರ ಅಡಿಗ, ಅರ್ಚಕರಾದ ಶ್ರೀಧರ ಅಡಿಗ, ಡಾ| ಕೆ.ಎನ್‌. ನರಸಿಂಹ ಅಡಿಗ, ಕೆ.ಎನ್‌. ಗೋವಿಂದ ಅಡಿಗ, ಸುಬ್ರಹ್ಮಣ್ಯ ಅಡಿಗ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ವಿಶೇಷ ಪ್ರಾರ್ಥನೆ ಸಲ್ಲಿಸಿದ ರಾಜ್ಯಪಾಲರು ತುಪ್ಪದ ದೀಪದಿಂದ ಆರತಿ ಬೆಳಗಿದರು. ಬ್ರಹ್ಮಾರ್ಪಣೆ ನೆರವೇರಿಸಿ, ಅರ್ಚನೆ ಮಾಡಿಸಿದರು. ವೀರಭದ್ರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇಗುಲಕ್ಕೆ ಪ್ರದಕ್ಷಿಣೆ ಮಾಡಿದರು. ಬಳಿಕ ಚಿನ್ನದ ರಥ ವೀಕ್ಷಿಸಿದರು.

ಇದನ್ನೂ ಓದಿ:ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

Advertisement

ಪೂರ್ಣಕುಂಭ ಸ್ವಾಗತ
ರಾಜ್ಯಪಾಲರನ್ನು ವಿಶೇಷ ವಾದ್ಯ ಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಎಸಿ ರಾಜು, ದೇಗುಲದ ಕಾರ್ಯ ನಿರ್ವಹಣಾ ಧಿಕಾರಿ ಮಹೇಶ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ್‌, ಸಂಧ್ಯಾ ರಮೇಶ, ರತ್ನಾ ಆರ್‌. ಕುಂದರ್‌, ಜಿಲ್ಲಾ ಧಿಕಾರಿ ಕೂರ್ಮಾ ರಾವ್‌, ಜಿ.ಪಂ.ಸಿಇಒ ಡಾ| ನವೀನ್‌ ಭಟ್‌, ವೈದ್ಯಾ ಧಿಕಾರಿ ಡಾ| ಪ್ರೇಮಾನಂದ, ಗ್ರಾ.ಪಂ. ಅಧ್ಯಕ್ಷ ಶಿವರಾಮ ಕೃಷ್ಣ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ತಹಶೀಲ್ದಾರ್‌ ಶೋಭಾ ಲಕ್ಷ್ಮೀ, ಎಎಸ್‌ಪಿ ಕುಮಾರ ಚಂದ್ರ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ದೇಗುಲದ ಉಪಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ ಉಪಸ್ಥಿತರಿದ್ದರು.

ಟೋಪಿ ಕಳಚಿದ ರಾಜ್ಯಪಾಲರು
ಟೋಪಿ, ಅಂಗಿ ಧರಿಸಿ ದೇವಿಯ ದರ್ಶನ ನಿಷಿದ್ಧವಾಗಿರುವುದರಿಂದ ದೇಗುಲದ ಒಳಾಂಗಣ ಪ್ರವೇಶಿಸುವ ಮೊದಲು ರಾಜ್ಯಪಾಲರು ತನ್ನ ಟೋಪಿಯನ್ನು ಆಪ್ತಸಹಾಯಕನಿಗೆ ನೀಡಿ ಅಂಗಿ ಕಳಚಿ ನಿಯಮ ಪಾಲಿಸಿದರು. ಹೊರಬಂದ ಬಳಿಕ ದೇಗುಲದ ಅಧಿಕಾರಿಗಳು, ಸಿಬಂದಿಯ ಇಚ್ಛೆಯಂತೆ ಅವರೊಡನೆ ನಿಂತು ಫೋಟೊ ಕ್ಲಿಕ್ಕಿಸಲು ಅನುಮತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next