Advertisement

ಮದ್ಯ ಖರೀದಿ ವಯಸ್ಸು 18ಕ್ಕೆ ಇಳಿಕೆ? ಆಕ್ಷೇಪಣೆ ಸಲ್ಲಿಕೆ ಅವಧಿಯೂ ಪೂರ್ಣ

01:15 AM Feb 24, 2023 | Team Udayavani |

ವಿಧಾನಪರಿಷತ್ತು: ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ 21 ವರ್ಷಗಳ ವಯೋಮಿತಿಯನ್ನು ಸಡಿಲಿಸಿ 18 ವರ್ಷಕ್ಕೆ ಇಳಿಕೆ ಮಾಡಲು ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಮಾರಾಟ ಮತ್ತು ಖರೀದಿಯ ವಯೋಮಿತಿ ಸಡಿಲಿಕೆ ಸಂಬಂಧ 2023ರ ಜ.9ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಆಕ್ಷೇಪಣೆ ಮತ್ತು ಸಲಹೆಗಳಿಗೆ 30 ದಿನ ಕಾಲಾವಕಾಶ ನೀಡಲಾಗಿದೆ ಎಂದರು. ವಿಶೇಷವೆಂದರೆ, ಈಗಾಗಲೇ 30 ದಿನಗಳ ಅವಧಿ ಮುಗಿದಿದೆ.

ಅಬಕಾರಿ ಕಾಯ್ದೆ-1965ರ ಕಲಂ 36 (1) (ಜೆ) ಪ್ರಕಾರ 18 ವರ್ಷದೊಳಗಿನವರು ಮದ್ಯ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅದೇ ರೀತಿ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು-1967ರ ನಿಯಮ 10(1) (ಇ)ರಲ್ಲಿ 21 ವರ್ಷದೊಳಗಿನ ವ್ಯಕ್ತಿ ಮದ್ಯ ಮಾರಾಟ ಮಾಡಬಾರದು ಎಂದು ಹೇಳಲಾಗಿದೆ. ಅಬಕಾರಿ ಇಲಾಖೆಯ ವಿವಿಧ ಕಾರ್ಯಕ್ಷಮಗಳ ಬಗ್ಗೆ ಪರಿಶೀಲಿಸಲು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ-1965 ಮತ್ತು ಅದರಡಿ ರಚಿಸಲಾಗಿರುವ ನಿಯಮಗಳಲ್ಲಿರುವ ಅಪ್ರಸ್ತುತ ಅಂಶಗಳನ್ನು ಗುರುತಿಸಿ ಕೈಬಿಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.

ಈ ಹಿಂದೆಯೇ ಈ ಬಗ್ಗೆ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧವಾಗಿದ್ದರಿಂದ ವಾಪಸ್‌ ತೆಗೆದುಕೊಳ್ಳಲಾಗಿತ್ತು. ಆದರೆ, ಈಗ ಮತ್ತೆ ಸದನದಲ್ಲಿಯೇ ಈ ಬಗ್ಗೆ ಸರ್ಕಾರವೇ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next