ಪಣಂಬೂರು: ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಮಂತ್ರ ಸಫ್ì ಕ್ಲಬ್ ಸಹಭಾಗಿತ್ವದಲ್ಲಿ ಪಣಂಬೂರು ಕಡಲ ತೀರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸರ್ಫಿಂಗ್ ಕೂಟದಲ್ಲಿ ಗೋವಾದ 16 ವರ್ಷದ
ಶುಗರ್ ಬನಾರ್ಸೆ ಸಹಿತ ಕರ್ನಾಟಕದ ಇಶಿತಾ ಮಾಳವಿಯಾ (6.17) ಮತ್ತು ಸಿಂಚನಾ ಗೌಡ (7.30) ಜತೆಗೆ ತಮಿಳು
ನಾಡಿನ ಸೃಷ್ಟಿ ಸೆಲ್ವಂ (10.37) ಮಹಿಳೆಯರ ಓಪನ್ ಸರ್ಫ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದರು.
ತಮಿಳುನಾಡು ಸಫìರ್‌ಗಳು ಶನಿವಾರ ಕ್ಲೀನ್ ಸ್ವೀಪ್ ಮಾಡಿದರು. ರವಿವಾರ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿರುವ ಇತರರು ತಯಿನ್ ಅರುಣ್ (11.10), ನವೀನ್‌ಕುಮಾರ್ ಆರ್. (10.17) ಮತ್ತು ಜೀವನ್ ಎಸ್. (6.46).
ಕರ್ನಾಟಕದ ರಮೇಶ್ ಬುಧಿಯಾಲ್ ತಮ್ಮ ಕುಶಲತೆ ಮತ್ತು ಸರ್ಫಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದರಲ್ಲದೇ ಸೆಮಿಫೈನಲ್‌ನಲ್ಲಿ 14.33 ಪಾಯಿಂಟ್‌ಗಳೊಂದಿಗೆ ಸ್ಥಾನ ಕಾಯ್ದಿರಿಸಿದರು.
ಪುರುಷರ ಓಪನ್ ಸರ್ಫ್ ವಿಭಾಗದಲ್ಲಿ ತಮಿಳುನಾಡಿನ ಶ್ರೀಕಾಂತ್ ಡಿ. (9.93), ಸೂರ್ಯ ಪಿ. (9.7), ಸತೀಶ್ ಸರ್ವಣನ್ (12), ರುಬನ್ ವಿ. (8.7), ಅಜೀಶ್ ಅಲಿ (9.3), ಮಣಿಕಂದನ್ ಎಂ. (8.34) ಮತ್ತು ಸಂಜಯ್ ಕುಮಾರ್ ಎಸ್. (9.17) ಸೆಮಿಫೈನಲ್‌ಗೆ ಮುನ್ನಡೆದರು.