Advertisement

ಗಿರಿ ಜನರೆಡೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ

11:53 AM Mar 07, 2021 | Team Udayavani |

ಬೆಂಗಳೂರು: ಕರ್ನಾಟಕ ಲಲಿತ ಕಲಾ ಅಕಾಡೆಮಿ ಗಿರಿಜನರನ್ನು ಕೇಂದ್ರೀಕರಿಸಿ ಹೊಸ ಯೋಜನೆ ರೂಪಿಸಿದೆ. ಆ ಮೂಲಕ ಗಿರಿಜನರ ಮಕ್ಕಳಲ್ಲಿರುವ ಕಲೆಯನ್ನು ಹೊರಜಗತ್ತಿಗೆ ತೋರ್ಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ.

Advertisement

ಗಿರಿಜನರಡೆಗೆ ಲಲಿತಕಲಾ ಅಕಾಡೆಮಿ ಎಂಬ ಕಾರ್ಯ ಕ್ರಮ ರೂಪಿಸಿದ್ದು ಗಿರಿಜನರು ಎಲ್ಲಿ ನೆಲ್ಲಿಸಿ ದ್ದಾರೋ ಆ ಪ್ರದೇಶಕ್ಕೆ ತರಳಿ ಆ ಸ್ಥಳದಲ್ಲಿಯೇ ಚಿತ್ರ ಕಲೆಗೆ ಸಂಬಂಧಿಸಿದಂತೆ ಶಿಬಿರ, ಸ್ಥಳದಲ್ಲೇ ಚಿತ್ರ ಬಿಡಿಸು ವುದು ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಿದೆ.

ಗಿರಿಜನರ ಮಕ್ಕಳಲ್ಲೂ ಪ್ರತಿಭೆಯಿದೆ. ಆದರೆ ಅವರಲ್ಲಿರುವ ಕಲೆಯನ್ನು ಗುರುತಿಸುವ ಕೆಲಸ ಆಗಬೇಕು. ಅದು ಹೊರಜಗತ್ತಿಗೂ ತಿಳಿಯಬೇಕು. ಆ ಹಿನ್ನೆಲೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಗಿರಿ ಜನರನ್ನು ಕೇಂದ್ರಿಕರಿಸಿಯೇ ಹಲವು ಕಾರ್ಯಕ್ರಮ ಗಳನ್ನು ರೂಪಿಸಿದೆ ಎಂದು ಲಲಿಕಲಾ ಅಕಾಡೆಮಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಲಿಕೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ ಗಳು ಗಿರಿಜನರು ವಾಸಿಸುವ ಪ್ರದೇಶದಲ್ಲೇ ನಡೆಯಲಿವೆ. ಕಲೆ ಕುರಿತ ವಿಚಾರ ಸಂಕಿರಣಗಳನ್ನು ಕೂಡ ಆಯೋಜಿಸುವ ಕುರಿತಂತೆ ಅಕಾಡೆಮಿ ಈಗಾ ಗಲೇ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ. ಈಗಾಗಲೇ ಕಾರ್ಯಕ್ರಮಗಳು ರೂಪುರೇಷೆಗಳ ಕುರಿತು ಸಿದ್ಧತೆ ನಡೆದಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮಕ್ಕೆ ಸ್ಪಷ್ಟ ಚಿತ್ರಣ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಯೋಜನೆಗೆ ಅನುದಾನ: ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕಾಗಿ ಹಾಗೂ ಆ ಜನಾಂಗಕ್ಕೆ ಸಂಬಂಧಿಸಿದ ಯೋಜನೆ ರೂಪಿಸಲು ಸಲುವಾಗಿ ಅನುದಾನ ನೀಡುತ್ತದೆ. ಹಾಗೆ ನೀಡಿರುವ 1 ಕೋಟಿ ರೂ. ಅನುದಾನ ಹಲವು ವರ್ಷದಿಂದ ಬಳಕೆ ಆಗದೆ ಹಾಗೆಯೇ ಅಕಾಡೆಮಿಯಲ್ಲಿ ಉಳಿದುಕೊಂಡಿದೆ. ಆ ಅನುದಾನವನ್ನು ಈಗ ಅಕಾಡೆಮಿ ಗಿರಿಜನರ ಮಕ್ಕಳ ಕಲಿಕೆಗಾಗಿ ಅಕಾಡೆಮಿ ಬಳಸಿಕೊಳ್ಳಲು ಮುಂದಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದ್ದಾರೆ. ಸಾಧಕ ಕಲಾವಿದರನ್ನು ಗಿರಿಜನರ ಪ್ರದೇಶಕ್ಕೆ ಆಹ್ವಾನಿಸಿ ಆ ಸಮುದಾಯದ ಮಕ್ಕಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಮೂಡಿಸಲಾಗುವುದು ಹಾಗೂ ಕಲಾವಿದರೊಂ ದಿಗೆ ಸಂವಾದ ಸೇರಿದಂತೆ ಮತ್ತಿತರ ಕಾರ್ಯಕ್ರ ಹಮ್ಮಿಕೊಳ್ಳುವ ಆಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾ ಯದಲ್ಲಿ ಕೂಡ ಉತ್ತಮ ಯುವ ಕಲಾವಿದರಿದ್ದಾರೆ.ಅವರನ್ನು ಗುರಿತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾ ಗಿದೆ.ಆ ದಿಕ್ಕಿನಲ್ಲಿ ಲಲಿತಕಲಾ ಅಕಾ ಡೆಮಿ ಹೆಜ್ಜೆಯಿರಿಸಿದೆ ಎಂದು ಹೇಳಿದ್ದಾರೆ.

ಎಲ್ಲೆಲ್ಲಿ ಗಿರಿಜನರು?

Advertisement

ಮೈಸೂರು, ಚಾಮರಾಜನಗರ, ಉತ್ತರ ಕನ್ನಡ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಗಿರಿಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಪ್ರದೇಶದ ಗಿರಿಜನರನ್ನು ಕೇಂದ್ರೀಕರಿಸಿ ಕಾರ್ಯಕ್ರಮ ರೂಪಿಸಲಾಗುವುದು. ಆರಂಭಿಕವಾಗಿ ಮೈಸೂರು ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ನಂತರ ಇತರೆ ಜಿಲ್ಲೆಗಳತ್ತ ಹಂತ ಹಂತವಾಗಿ ವಿಸ್ತರಣೆ ಮಾಡಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್‌ ಬಸವರಾಜ ಹೂಗಾರ್‌ ಹೇಳಿದ್ದಾರೆ. ಉತ್ತರ ಕರ್ನಾಟಕ ಭಾಗದ ಹಲವು ಕಡೆಗಳಲ್ಲೂ ಕೂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿದ್ದಾರೆ. ಅವರಿಗೂ ಕೂಡ ಅಕಾಡೆಮಿ ಚಿತ್ರಕಲೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲಿದೆ ಎಂದು ತಿಳಿಸಿದ್ದಾರೆ.

ಗಿರಿಜನರನ್ನು ಕೇಂದ್ರೀಕರಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿ ಕಾರ್ಯಕ್ರಮ ರೂಪಿಸಿದೆ. ಇದಕ್ಕೆ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಹಂತ-ಹಂತವಾಗಿ ಗಿರಿಜನರು ಹೆಚ್ಚು ನೆಲೆಸಿರುವ ಪ್ರದೇಶಗಳಿಗೆ ಈ ಕಾರ್ಯಕ್ರಮ ವಿಸ್ತರಣೆ ಮಾಡಲಾಗುವುದು. ಗಿರಿಜರ ಮಕ್ಕಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು.

  • ಡಿ.ಮಹೇಂದ್ರ, ಕರ್ನಾಟಕ ಲಲಿತಕಲಾ

ಅಕಾಡೆಮಿ ಅಧ್ಯಕ್ಷ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next