Advertisement

ವಿಶೃತ್‌,ತಾರಾ ಅನುರಾಧಾ ಶ್ರೇಷ್ಠ ನಟ,ನಟಿ; ಶುದ್ಧಿ ಅತ್ಯುತ್ತಮ ಚಿತ್ರ

06:00 AM Oct 26, 2018 | |

ಬೆಂಗಳೂರು: ಮಂಜರಿ ಹಾಗೂ ಹೆಬ್ಬೆಟ್‌ ರಾಮಕ್ಕ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ನಟ ವಿಶೃತ್‌ ನಾಯಕ್‌ ಮತ್ತು ತಾರಾ ಅನುರಾಧ ಅವರು 2017ನೇ ಸಾಲಿನ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಅದೇ ರೀತಿ ಆದರ್ಶ್‌ ಎಚ್‌.ಈಶ್ವರಪ್ಪ ನಿರ್ದೇಶನದಲ್ಲಿ ಮಾದೇಶ್‌ ಟಿ.ಭಾಸ್ಕರ್‌ ನಿರ್ಮಿಸಿರುವ ಶುದ್ಧಿ ಚಿತ್ರಕ್ಕೆ ಮೊದಲ ಅತ್ಯುತ್ತಮ; ಕೂಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಹರೀಶ್‌ ಶೇರಿಗಾರ್‌ ನಿರ್ಮಿಸಿರುವ ಮಾರ್ಚ್‌ 22 ಚಿತ್ರಕ್ಕೆ ಎರಡನೇ ಅತ್ಯುತ್ತಮ ಹಾಗೂ ಅಭಯ್‌ ಸಿಂಹ ನಿರ್ದೇಶನದಲ್ಲಿ ನಿತ್ಯಾನಂದ ಪೈ ನಿರ್ಮಿಸಿರುವ ಪಡ್ಡಾಯಿ ತುಳು ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಂದಿದೆ.

ಚಲನಚಿತ್ರ ಪ್ರಶಸ್ತಿಗೆ ಸಂಬಂಧಿಸಿದಂತೆ ಎನ್‌.ಆರ್‌.ಶಂಕರ್‌ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸನ್ನು ಅಂಗೀಕರಿಸಿದ ಸರ್ಕಾರ ಗುರುವಾರ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿದೆ. ಆಯ್ಕೆ ಸಮಿತಿಯಲ್ಲಿ ಏಳು ಸದಸ್ಯರಿದ್ದರು. ಒಟ್ಟು 121 ಚಲನಚಿತ್ರ ನಿರ್ಮಾಪಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು, ಸಮಿತಿಯವರು ಅವುಗಳನ್ನು ವೀಕ್ಷಿಸಿ ಸರ್ವಾನುಮತದಿಂದ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಎನ್‌.ಆರ್‌.ನಂಜುಡೇಗೌಡ ನಿರ್ದೇಶನದಲ್ಲಿ ಮೆ:ಸವಿರಾಜ್‌ ಸಿನಿಮಾಸ್‌ ನಿರ್ಮಿಸಿರುವ ಹೆಬ್ಬೆಟ್‌ ರಾಮಕ್ಕ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ವಿಶೇಷವೆಂದರೆ, ಇದೇ ಚಿತ್ರದ ಅಭಿನಯಕ್ಕಾಗಿ ತಾರಾ ಅನುರಾಧ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಮೆ:ಹೊಂಬಾಳೆ ಫಿಲಂಸ್‌ ನಿರ್ಮಿಸಿ, ಸಂತೋಷ್‌ ಆನಂದ್‌ರಾಮ್‌ ನಿರ್ದೇಶಿಸಿರುವ ಪುನೀತ್‌ ರಾಜ್‌ಕುಮಾರ್‌ ಅಭಿನಯದ ರಾಜಕುಮಾರ ಚಿತ್ರ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಆರ್‌.ನಾಗರಾಜ್‌ ನಿರ್ಮಾಣದಲ್ಲಿ ವಿಕ್ರಂ ಸೂರಿ ನಿರ್ದೇಶಿಸಿರುವ ಎಳೆಯರು ನಾವು ಗೆಳೆಯರು ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದಿದೆ. ಮೆ:ಡೀಸ್‌ ಫಿಲಂಸ್‌ ನಿರ್ಮಾಣದಲ್ಲಿ ಗಂಗಾಧರ ಸಾಲಿಮಠ ನಿರ್ದೇಶಿಸಿರುವ ಆಯನ ಚಿತ್ರ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದ್ದರೆ, ಹ್ಯಾರಿ ಫ‌ರ್ನಾಂಡೀಸ್‌ ನಿರ್ದೇಶನದಲ್ಲಿ ಜಿನಿತ್‌ ನರೋನಾ ನಿರ್ಮಿಸಿರುವ ಕೊಂಕಣಿ ಭಾಷಾ ಚಿತ್ರ ಸೋಫಿಯಾ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

Advertisement

ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ ಪ್ರಶಸ್ತಿ ಪಡೆದ ಹೆಬ್ಬೆಟ್‌ ರಾಮಕ್ಕ ಚಿತ್ರ 3 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರೆ, ರಾಜಕುಮಾರ, ಹೆಬ್ಬುಲಿ ಹಾಗೂ ಮಾರ್ಚ್‌ 22 ಚಿತ್ರಗಳು ತಲಾ 2 ಪ್ರಶಸ್ತಿಗಳನ್ನು ಗಳಿಸಿವೆ. ಈ ಬಾರಿಯ ಮತ್ತೂಂದು ವಿಶೇಷತೆ ಎಂದರೆ ಪ್ರಾದೇಶಿಕ ಭಾಷಾ ಚಿತ್ರವೊಂದು (ತುಳು ಭಾಷೆಯ ಪಡ್ಡಾಯಿ ಚಿತ್ರ) ಅತ್ಯುತ್ತಮ ಮೂರು ಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು. ಈ ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ.

ಚಲನಚಿತ್ರ ಪ್ರಶಸ್ತಿಗಳ ವಿವರ
ಮೊದಲ ಅತ್ಯುತ್ತಮ ಚಿತ್ರ– ಶುದ್ಧಿ
ನಿರ್ಮಾಪಕ (ಕೆ.ಸಿ.ಎನ್‌.ಗೌಡ ಪ್ರಶಸ್ತಿ)- ಮಾದೇಶ್‌ ಟಿ.ಭಾಸ್ಕರ್‌
ನಿರ್ದೇಶಕ– (ಎಚ್‌.ಎಲ್‌.ಎನ್‌.ಸಿಂಹ ಪ್ರಶಸ್ತಿ)- ಆದರ್ಶ್‌ ಎಚ್‌.ಈಶ್ವರಪ್ಪ
ಎರಡನೇ ಅತ್ಯುತ್ತಮ ಚಿತ್ರ- ಮಾರ್ಚ್‌ 22
ನಿರ್ಮಾಪಕ
– ಹರೀಶ್‌ ಶೇರಿಗಾರ್‌
ನಿರ್ದೇಶಕ- ಕೂಡ್ಲು ರಾಮಕೃಷ್ಣ
ಮೂರನೇ ಅತ್ಯುತ್ತಮ ಚಿತ್ರ– ಪಡ್ಡಾಯಿ (ತುಳು)
ನಿರ್ಮಾಪಕ– ನಿತ್ಯಾನಂದ ಪೈ
ನಿರ್ದೇಶಕ– ಅಭಯ್‌ ಸಿಂಹ
ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ– ಹೆಬ್ಬೆಟ್‌ ರಾಮಕ್ಕ
ನಿರ್ಮಾಪಕ– ಮೆ:ಸವಿರಾಜ್‌ ಸಿನಿಮಾಸ್‌
ನಿರ್ದೇಶಕ- ಎನ್‌.ಆರ್‌.ನಂಜುಂಡೇಗೌಡ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ– ರಾಜಕುಮಾರ
ನಿರ್ಮಾಪಕ (ನರಸಿಂಹರಾಜು ಪ್ರಶಸ್ತಿ)- ಮೆ: ಹೊಂಬಾಳೆ ಫಿಲಂಸ್‌
ನಿರ್ದೇಶಕ- ಸಂತೋಷ್‌ ಆನಂದರಾಮ್‌
ಅತ್ಯುತ್ತಮ ಮಕ್ಕಳ ಚಿತ್ರ– ಎಳೆಯರು ನಾವು ಗೆಳೆಯರು
ನಿರ್ಮಾಪಕ- ಆರ್‌.ನಾಗರಾಜ್‌
ನಿರ್ದೇಶಕ– ವಿಕ್ರಂ ಸೂರಿ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಆಯನ
ನಿರ್ಮಾಪಕ– ಮೆ:ಡೀಸ್‌ ಫಿಲಂಸ್‌
ನಿರ್ದೇಶಕ– ಗಂಗಾಧರ ಸಾಲಿಮಠ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ– ಸೋಫಿಯಾ (ಕೊಂಕಣಿ)
ನಿರ್ಮಾಪಕ– ಜಿನಿತ್‌ ನರೋನಾ
ನಿರ್ದೇಶನ– ಹ್ಯಾರಿ ಫ‌ರ್ನಾಂಡೀಸ್‌
ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ)- ವಿಶೃತ್‌ ನಾಯ್ಕ (ಚಿತ್ರ: ಮಂಜರಿ)
ಅತುತ್ತಮ ನಟಿ– ತಾರಾ ಅನುರಾಧ (ಚಿತ್ರ: ಹೆಬ್ಬೆಟ್‌ ರಾಮಕ್ಕ)
ಅತ್ಯುತ್ತಮ ಪೋಷಕ ನಟ (ಕೆ.ಎಸ್‌.ಅಶ್ವಥ್‌ ಪ್ರಶಸ್ತಿ)- ಮಂಜುನಾಥ ಹೆಗಡೆ (ಚಿತ್ರ: ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಕಥೆ- ಹನುಮಂತ ಬಿ.ಹಾಲಿಗೇರಿ (ಚಿತ್ರ: ಕೆಂಗುಲಾಬಿ) ಮತ್ತು ಅಮರೇಶ್‌ ನುಗಡೋಣಿ (ಚಿತ್ರ: ನೀರು ತಂದವರು)
ಅತ್ಯುತ್ತಮ ಚಿತ್ರಕಥೆ- ವೆಂಕಟ್‌ ಭಾರದ್ವಾಜ್‌ (ಚಿತ್ರ: ಕೆಂಪಿರ್ವೆ)
ಅತ್ಯುತ್ತಮ ಸಂಭಾಷಣೆ– ಪ್ರೊ.ಎಸ್‌.ಜಿ.ಸಿದ್ದರಾಮಯ್ಯ (ಚಿತ್ರ: ಹೆಬ್ಬೆಟ್‌ ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ- ಸಂತೋಷ್‌ ರೈ ಪಾತಾಜೆ (ಚಿತ್ರ: ಚಮಕ್‌)
ಅತ್ಯುತ್ತಮ ಸಂಗೀತ ನಿರ್ದೇಶಕ– ವಿ.ಹರಿಕೃಷ್ಣ (ಚಿತ್ರ: ರಾಜಕುಮಾರ)
ಅತ್ಯುತ್ತಮ ಸಂಕಲನ- ಹರೀಶ್‌ ಕೊಮ್ಮೆ (ಚಿತ್ರ: ಮಫ್ತಿ)
ಅತ್ಯುತ್ತಮ ಬಾಲನಟ– ಮಾಸ್ಟರ್‌ ಕಾರ್ತಿಕ್‌ (ಚಿತ್ರ: ರಾಮರಾಜ್ಯ)
ಅತ್ಯುತ್ತಮ ಬಾಲನಟಿ– ಶÉಘ ಸಾಲಿಗ್ರಾಮ (ಚಿತ್ರ: ಕಟಕ)
ಅತ್ಯುತ್ತಮ ಕಲಾ ನಿರ್ದೇಶನ- ರವಿ ಎಸ್‌.ಎ. (ಚಿತ್ರ: ಹೆಬ್ಬುಲಿ)
ಅತ್ಯುತ್ತಮ ಗೀತರಚನೆ– ಜೆ.ಎಂ.ಪ್ರಹ್ಲಾದ್‌ (ಹಾಡು: ಮುತ್ತು ರತ್ನದ ಪ್ಯಾಟ. ಚಿತ್ರ: ಮಾರ್ಚ್‌ 22)
ಅತ್ಯುತ್ತಮ ಹಿನ್ನೆಲೆ ಗಾಯಕ- ತೇಜಸ್ವಿ ಹರಿದಾಸ್‌ (ಹಾಡು: ವಲಸೆ ಬಂದವರೇ. ಚಿತ್ರ: ಹುಲಿರಾಯ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅಪೂರ್ವ ಶ್ರೀಧರ್‌ (ಹಾಡು: ಅಸಾದುಲ್ಲಾ ದಾಡಿ ಬಿಟ್ಟ. ಚಿತ್ರ: ದಯವಿಟ್ಟು ಗಮನಿಸಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರೀದರ್ಶನ್‌ (ಚಿತ್ರ: ಮಹಾಕಾವ್ಯ), ಮಿತ್ರ (ಚಿತ್ರ: ರಾಗ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ– ಸುರೇಶ್‌ ಕೆ. (ಚಿತ್ರ: ಹೆಬ್ಬುಲಿ)

Advertisement

Udayavani is now on Telegram. Click here to join our channel and stay updated with the latest news.

Next