Advertisement

Karnataka Election: ಇಡೀ ದಿನ ಪ್ರಿಯಕೃಷ್ಣ ಮತ ಬೇಟೆ

10:03 AM May 08, 2023 | Team Udayavani |

ಬೆಂಗಳೂರು: ಚುನಾವಣೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇದ್ದು, ಗೋವಿಂದರಾಜನಗರದಲ್ಲಿ
ಪ್ರಚಾರ ಕಾವು ಏರಿದೆ. ಭಾನುವಾರ ಇಡೀ ದಿನ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ರೋಡ್‌, ಮನೆ-ಮನೆಗೆ ಭೇಟಿ ಮಾಡಿ ಮತ ಬೇಟೆ ನಡೆಸಿದರು.

Advertisement

ಸೋಮವಾರ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಗೋವಿಂದರಾಜ ನಗರಕ್ಕೆ ಬರಲಿದ್ದು, ಅದರ ಪೂರ್ವಭಾವಿಯಾಗಿ ಎಲ್ಲೆಡೆ ಭರದ ಸಿದ್ಧತೆಗಳು ನಡೆದವು. ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ರ್‍ಯಾಲಿ ನಡೆಯಲಿದೆ. ಜಿಟಿ ಮಾಲ್‌ನಿಂದ ಆರಂಭವಾಗುವ ರ್‍ಯಾಲಿ, ಮಾಗಡಿ ರಸ್ತೆ, ಬನಶಂಕರಿ ದೇವಸ್ಥಾನ ರಸ್ತೆ, ವಿದ್ಯಾರಣ್ಯನಗರ 2ನೇ ಮುಖ್ಯರಸ್ತೆ, 1ನೇ ಮುಖ್ಯ ಕ್ಲಬ್‌ ರಸ್ತೆ, ಮಾರುತಿ ಹಾಸ್ಪಿಟಲ್‌ ವೃತ್ತ ಮತ್ತಿತರ ಕಡೆಗಳಲ್ಲಿ ಹಾದುಹೋಗಲಿದೆ.

ಈ ಪೂರ್ವಸಿದ್ಧತೆಗಳ ಮಧ್ಯೆ ಬಿಡುವು ಮಾಡಿಕೊಂಡು ಪ್ರಿಯಕೃಷ್ಣ ಮನೆ-ಮನೆಗೆ ತೆರಳಿ ಮತಯಾಚಿಸಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸಿದ್ಧಗಂಗಾ ಸ್ಕೂಲ್‌ ಬಳಿಯ ರಸ್ತೆಗಳಲ್ಲಿ ರೋಡ್‌ ಶೋ ಮಾಡಿದ ಅವರು, ಕೈಬೀಸುತ್ತಾ, ಕೈಗೆ ಮತ ಹಾಕಿ ಎಂದು ಕೋರಿದರು. ಈ ವೇಳೆ, ಕಾಂಗ್ರೆಸ್‌ ಕಾರ್ಯಕರ್ತರು ಕೈ ಧ್ವಜಗಳನ್ನು ಹಾಗೂ ಪ್ರಿಯಕೃಷ್ಣ ಅವರ ಕ್ರಮಸಂಖ್ಯೆಯ ಗುರುತನ್ನು ಹಿಡಿದು ಸಾಗಿದರು.

“ಚುನಾವಣೆಗೆ 2 ದಿನ ಬಾಕಿ ಇವೆ. ಇದುವರೆಗೆ ಸಾಕಷ್ಟು ಶ್ರಮ ಹಾಕಿದ್ದೀರಿ. ಇನ್ನು ಮೂರ್‍ನಾಲ್ಕು ದಿನ ಇದೇ ಉತ್ಸಾಹದಲ್ಲಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡಬಾರದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next