Advertisement

Karnataka Election ಕೊರಟಗೆರೆಯಲ್ಲಿ ಪೊಲೀಸ್, ಪ್ಯಾರಾ ಮಿಲಿಟರಿ ಪಥಸಂಚಲನ

09:31 PM Apr 21, 2023 | Team Udayavani |

 ಕೊರಟಗೆರೆ : ವಿಧಾನಸಭಾ ಚುನಾವಣೆಯ ರಂಗು ಎಲ್ಲೆಡೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ  ಭಾರತೀಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರನ್ನು ನಿಯೋಜಿಸಲಾಗಿದ್ದು,  ಈಗಾಗಲೇ ಪಟ್ಟಣ ಹಾಗೂ ಹೋಬಳಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಜೊತೆಗೂಡಿ ಪಥಸಂಚಲನ ನಡೆಸಿದರು.

Advertisement

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಚುನಾವಣಾ ಭದ್ರತೆಗಾಗಿ ಸೈನಿಕರನ್ನು ನಿಯೋಜಿಸಲಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೈನಿಕರು ಮತ್ತು ಪೊಲೀಸರು ಪಥಸಂಚಲನ ಮಾಡುವ ಮೂಲಕ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿ ಜನರೊಂದಿಗೆ ನಾವಿದ್ದೇವೆ, ವಿಧಾನಸಭಾ ಚುನಾವಣೆಯಲ್ಲಿ ಮುಕ್ತವಾಗಿ ಪಾಲ್ಗೊಂಡು ಮತದಾನ ಮಾಡಿ ಎಂಬ ಸಂದೇಶವನ್ನು  ರವಾನಿಸಿದರು.

ಬಿಎಸ್ ಎಫ್  ಹಾಗೂ ಪೊಲೀಸ್ ಇಲಾಖೆಯ ಒಟ್ಟು 100ಕ್ಕೂ ಅಧಿಕ ಸಿಬಂದಿಗಳು ಶಸ್ತ್ರಧಾರಿಗಳಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ರೂಟ್‌ಮಾರ್ಚ್‌ ನಡೆಸುವ ಮೂಲಕ ಸ್ಥಳೀಯರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.

ಈ ಪಥಸಂಚಲದಲ್ಲಿ ಕೊರಟಗೆರೆ ಪೊಲೀಸ್ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಕೆ.ಸುರೇಶ್, ಪಿ.ಎಸ್.ಐ ಪ್ರದೀಪ್ ಸಿಂಗ್, ಹಾಗೂ ಸಿಬಂದಿ ವರ್ಗದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next