Advertisement

Karnataka Election ಕರ್ತವ್ಯದಲ್ಲಿ ಚ್ಯುತಿ: ಫ್ಲೈಯಿಂಗ್ ಸ್ಕ್ವಾಡ್ ನ ನಾಲ್ವರು ಸಸ್ಪೆಂಡ್

09:18 PM Apr 21, 2023 | Team Udayavani |

ಮುದ್ದೇಬಿಹಾಳ: ಚುನಾವಣಾ ಕಾರ್ಯದಲ್ಲಿ ಕರ್ತವ್ಯ ಚ್ಯುತಿ ಎಸಗಿರುವ ಹಿನ್ನೆಲೆ ಇಲ್ಲಿನ ವಿವಿಧ ಇಲಾಖೆಗಳ ನಾಲ್ವರು ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ್ ಸೇವೆಯಿಂದ ಅಮಾನತ್ತುಗೊಳಿಸಿ ಶುಕ್ರವಾರ ಸಂಜೆ ಆದೇಶಿಸಿದ್ದಾರೆ.

Advertisement

ಸಹಾಯಕ ತೋಟಗಾರಿಕೆ ಅಧಿಕಾರಿ ಶಿವನಿಂಗಪ್ಪ ಕುಂಬಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಎಸ್‌ಡಿಸಿ ಸಂಜೀವ ಲಮಾಣಿ, ಪಂಚಾಯತ್ ರಾಜ್ ಇಂಜನೀಯರಿಂಗ್ ಉಪ ವಿಭಾಗದ ಕಿರಿಯ ಅಭಿಯಂತರ ವಿಜಯಕುಮಾರ ನಾಯಕ, ಕೋಳೂರು ಗ್ರಾಪಂ ಪಿಡಿಓ ರಂಗರಾಜು ಬಿ.ಆರ್ ಅಮಾನತ್ತುಗೊಂಡವರು.

ಎ.19ರಂದು ಬಿಜೆಪಿ ಕಾರ್ಯಕರ್ತನೊಬ್ಬ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 19ರಂದು ಬೆಳಗಿನ 8 ರಿಂದ ಮದ್ಯಾಹ್ನ 2ರವರೆಗೆ ಇವರೆಲ್ಲರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ರಚಿಸಲಾದ ಫ್ಲೈಯಿಂಗ್ ಸ್ಕ್ವಾಡ್‍ ತಂಡ-6 ಮತ್ತು ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗಿನ ಫ್ಲೈಯಿಂಗ್ ಸ್ಕ್ವಾಡ್‍ ತಂಡ-4ರ ಸದಸ್ಯರಾಗಿದ್ದರು. ಇವರೆಲ್ಲರನ್ನೂ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾಂತ ಪವಾರ ಕಾರ್ಯಾಲಯಕ್ಕೆ ಕರೆಸಿ ವಿಡಿಯೋ ವೈರಲ್ ಆದ ಬಗ್ಗೆ ಎಫ್‌ಐಆರ್ ದಾಖಲಿಸಲು ಸೂಚಿಸಿದರೂ ಇವರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಹೀಗಾಗಿ ಇವರು ಚುನಾವಣಾ ಕರ್ತವ್ಯ ನಿಭಾಯಿಸಲು ನಿರಾಕರಿಸಿದ್ದರಿಂದ ಇವರ ಮೇಲೆ ಸೂಕ್ತ ಕ್ರಮಕ್ಕೆ ಚುನಾವಣಾಧಿಕಾರಿ ಪವಾರ ಶಿಫಾರಸು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next