ರಾಮನಗರ: ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಕುಟುಂಬವು ಸದ್ಯ 189.27 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದೆ.
Advertisement
ಕುಮಾರಸ್ವಾಮಿ ಅನಿತಾ ದಂಪತಿ ಒಟ್ಟಾಗಿ 92.84 ಕೋಟಿ ಮೊತ್ತದ ಸ್ಥಿರಾಸ್ತಿ ಹಾಗೂ 96.43 ಕೋಟಿ ಮೊತ್ತದ ಚರಾಸ್ತಿಯನ್ನು ಹೊಂದಿದ್ದಾರೆ. ಒಟ್ಟು 4.130 ಕೆ.ಜಿ. ಚಿನ್ನ ಹಾಗೂ 29 ಕೆ.ಜಿ. ಬೆಳ್ಳಿ, 54 ಕ್ಯಾರಟ್‌ನಷ್ಟು ವಜ್ರವಿದೆ. ಕುಮಾರಸ್ವಾಮಿ ಹೆಸರಿನಲ್ಲಿ ಟ್ರಾÂಕ್ಟರ್ ಮಾತ್ರ ಇದೆ. ಅವರ ಪತ್ನಿ ಬಳಿ ಇನೋವಾ ಕ್ರಿಸ್ಟ ಹಾಗೂ ಎಂಟು ಮಾರುತಿ ಇಕೋ ಕಾರುಗಳಿವೆ. ಕುಮಾರಸ್ವಾಮಿ 48 ಎಕರೆಗೂ ಹೆಚ್ಚು ಕೃಷಿ ಜಮೀನು ಹೊಂದಿದ್ದು, 2020-22ನೇ ಸಾಲಿನಲ್ಲಿ ಇದರಿಂದ 47 ಲಕ್ಷದಷ್ಟು ಕೃಷಿ ಆದಾಯ ತೋರಿಸಿದ್ದಾರೆ. ಅನಿತಾ ಬಳಿ ವಾಣಿಜ್ಯ ಆಸ್ತಿಗಳು ಹೆಚ್ಚಿದ್ದು, ಸಾಕಷ್ಟು ಕಂಪೆನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. 77 ಕೋಟಿಯಷ್ಟು ಸಾಲವೂ ಇವರ ಬೆನ್ನಿಗಿದೆ. ಕುಮಾರಸ್ವಾಮಿ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ.
ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಸ್ತಿ ಒಂದು ಸಾವಿರ ಕೋಟಿ ರೂ.ಗಳ ಗಡಿಯನ್ನು ದಾಟಿದ್ದು, ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಹಾಗೂ ಕುಟುಂಬದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್, ಅವರ ಪತ್ನಿ ಉಷಾ, ಪುತ್ರ ಆಕಾಶ್ ಕೆಂಪೇಗೌಡ, ಪುತ್ರಿ ಆಭರಣ ಸೇರಿ 5 ಮಂದಿಯನ್ನೊಳಗೊಂಡ ಒಟ್ಟು 1,413 ಕೋಟಿ ರೂ. ಆಸ್ತಿಯನ್ನು ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ಡಿ.ಕೆ. ಶಿವಕುಮಾರ್ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿ ಒಟ್ಟು ಮೌಲ್ಯ 1,215 ಕೋಟಿ ರೂ.ಗಳಾದರೆ, ಇವರ ಪತ್ನಿ ಉಷಾ ಅವರ ಬಳಿ ಇರುವ ಆಸ್ತಿ ಮೌಲ್ಯ 133 ಕೋಟಿ ರೂ.ಗಳಾಗಿದೆ. ಉಳಿದಂತೆ ಇವರ ಪುತ್ರ ಆಕಾಶ್ ಕೆಂಪೇಗೌಡ ಬಳಿ 55.6 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಇರುವುದಾಗಿ ಘೋಷಣೆ ಮಾಡಿದ್ದಾರೆ. ಉಳಿದಂತೆ ಇವರ ಪುತ್ರಿ ಆಭರಣ ಬಳಿಯೂ ಸಹ 12.7 ಲಕ್ಷ ಚರಾಸ್ತಿ ಇರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Related Articles
ಹೊಸಕೋಟೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಸಚಿವ ಎಂಟಿಬಿ ನಾಗರಾಜ್ ಒಟ್ಟು 1,510 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. 2019ರ ವಿಧಾನಸಭಾ ಉಪಚುನಾವಣೆಯಲ್ಲಿ ಅವರು 1,015 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದರು. ಕಳೆದ 4ವರ್ಷದಲ್ಲಿ ಅವರ ಆಸ್ತಿ 495 ಕೋಟಿ ರೂ. ಹೆಚ್ಚಳವಾಗಿದೆ.
Advertisement
ಶಾಮನೂರು ಆಸ್ತಿ 292 ಕೋಟಿದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಒಟ್ಟು 292.83 ಕೋಟಿ ಒಡೆಯರಾಗಿದ್ದಾರೆ. ಪುತ್ರ, ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗಿಂತಲೂ 140.11 ಕೋಟಿಯಷ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ. ಕೈಯಲ್ಲಿ 8.01 ಲಕ್ಷ ರೂ. ನಗದು, ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಯಲ್ಲಿ 63.96 ಕೋಟಿ ರೂ. ಠೇವಣಿ ಹಾಗೂ 85.32 ಕೋಟಿ ರೂ. ಮೊತ್ತದ ಷೇರು, ಡಿಬೆಂಚರ್ ಹೂಡಿಕೆ ಮಾಡಲಾಗಿದೆ. ಒಟ್ಟು 292.83 ಕೋಟಿ ರೂ.ಗಳ ಒಡೆಯರಾಗಿದ್ದರೂ ಶಾಮನೂರು ಶಿವಶಂಕರಪ್ಪ ವೈಯಕ್ತಿಕವಾಗಿ 15.71 ಕೋಟಿ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಲ್ಲಿ 2.02 ಕೋಟಿ ರೂ. ಸಾಲ ಹೊಂದಿದ್ದಾರೆ. ಬಿ.ವೈ. ವಿಜಯೇಂದ್ರ ಶತ ಕೋಟಿ ಒಡೆಯ
ಶಿವಮೊಗ್ಗ: ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ 46.82 ಕೋಟಿ ಮೌಲ್ಯದ ಚರಾಸ್ತಿ, 56.57 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ವಿಜಯೇಂದ್ರ ಕೈಯಲ್ಲಿ 6.42 ಲಕ್ಷ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 1.22 ಕೋಟಿ ರೂ. ಠೇವಣಿ ಹೊಂದಿದ್ದು 83.89 ಲಕ್ಷ ರೂ. ಸ್ಥಿರ ಠೇವಣಿ ಹೊಂದಿದ್ದಾರೆ. ಜತೆಗೆ 18.14 ಕೋಟಿ ಸಾಲ ಹೊಂದಿದ್ದಾರೆ. 88.65 ಲಕ್ಷ ಮೌಲ್ಯದ 1.34 ಕೆಜಿ ಬಂಗಾರ, 9.5 ಕ್ಯಾರೆಟ್ ವಜ್ರ, 16.25 ಕೆಜಿ ಬೆಳ್ಳಿ ಸಾಮಗ್ರಿಗಳು ಇವೆ. ಇವರು 44 ಕೋಟಿ ಮೌಲ್ಯದ ಜಮೀನು, ನಿವೇಶನ, ಮನೆಗಳನ್ನು ಶಿಕಾರಿಪುರ, ಶಿವಮೊಗ್ಗ, ಬೆಂಗಳೂರಿನಲ್ಲಿ ಹೊಂದಿದ್ದಾರೆ. ಎರಡು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಪತ್ನಿ ಪ್ರೇಮಾ 7.85 ಕೋಟಿ ಸ್ಥಿರಾಸ್ತಿ, 13.53 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರು ಕೂಡ 16.37 ಕೋಟಿ ಸಾಲ ಮಾಡಿದ್ದು ಇದರಲ್ಲಿ 15 ಕೋಟಿ ಸಾಲವನ್ನು ಪತಿ ವಿಜಯೇಂದ್ರ ಬಳಿಯೇ ಪಡೆದಿರುವುದು ವಿಶೇಷ. ರೆಡ್ಡಿ ಪತ್ನಿ 200 ಕೋಟಿ ರೂ. ಒಡತಿ
ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದ ಕೆಆರ್‌ಪಿ ಪಕ್ಷದ ಅಭ್ಯರ್ಥಿ ಜನಾರ್ದನ ರೆಡ್ಡಿ ಪತ್ನಿ ಲಕ್ಷೀ¾ ಅರುಣಾ ಬರೋಬ್ಬರಿ 200 ಕೋಟಿ ರೂ. ಗೂ ಅ ಧಿಕ ಬೆಲೆಯ ಆಸ್ತಿ ಹೊಂದಿದ್ದಾರೆ. ಬಿಎಸ್‌ಸಿ ಪದವೀಧರೆಯಾಗಿರುವ ಅವರು, ಒಟ್ಟಾರೆಯಾಗಿ 199,61,92,857 ರೂ. ಮೌಲ್ಯದ ಆಸ್ತಿ ಹೊಂದಿದ್ದು, ಗಣಿ ಜಿಲ್ಲೆಯ ಶ್ರೀಮಂತರೆನಿಸಿಕೊಂಡಿದ್ದಾರೆ. 96,23,89,325 ರೂ. ಮೌಲ್ಯದ ಚರಾಸ್ತಿ, 103,38,35,232 ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತಿ ಜನಾರ್ದನ ರೆಡ್ಡಿ ಬಳಿ 34,61,62,127 ರೂ. ಆಸ್ತಿ ಇದೆ. ಲಕ್ಷೀ¾ ಅರುಣಾ ಬಳಿ 38 ಕೆಜಿ ಮೌಲ್ಯದ ಚಿನ್ನಾಭರಣ, 258 ಕೆಜಿ ಬೆಳ್ಳಿ ಒಡವೆ ವಸ್ತು ಇವೆ. ಜನಾರ್ದನ ರೆಡ್ಡಿ ಬಳಿ 46.25 ಕೆಜಿ ಚಿನ್ನ, 178 ಕೆಜಿ ತೂಕದ ಬೆಳ್ಳಿಯ ಒಡವೆ ಇವೆ. ವಿಶೇಷ ಅಂದರೆ ಜನಾರ್ದನ ರೆಡ್ಡಿ ಅಂಚೆ ಉಳಿತಾಯ ಖಾತೆ ತೆರೆದು ಅದರಲ್ಲಿ 10 ಸಾವಿರ ರೂ. ನಿಗದಿತ ಅವ ಧಿಯ ಠೇವಣಿ ಇಟ್ಟುಕೊಂಡು ಬಂದಿದ್ದಾರೆ. ಇಬ್ಬರೂ ಕೋಟಿ ಕೋಟಿ ಆಸ್ತಿ ಹೊಂದಿದ್ದರೂ ಇವರ ಬಳಿ ಯಾವುದೇ ವಾಹನ ಇಲ್ಲ. ಇಬ್ಬರೂ ಯಾವುದೇ ಸಾಲ ಮಾಡಿಲ್ಲ. ನಿಖೀಲ್ ಚರಾಸ್ತಿ 46.51 ಕೋಟಿ ರೂ.
ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಅವರ ವಿದ್ಯಾರ್ಹತೆ ಬಿಬಿಎ. ಚರಾಸ್ತಿ 46.51 ಕೋಟಿ ರೂ. ಇದ್ದರೆ, 28 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.151 ಕೆ.ಜಿ. ಚಿನ್ನ, 38.94 ಕೋಟಿ ರೂ. ಸಾಲ ಇದೆ. ಲ್ಯಾಂಬೋರ್ಗಿನಿ ಸಹಿತ ಒಟ್ಟು 5 ಕಾರುಗಳಿವೆ. ವಾರ್ಷಿಕ ಆದಾಯ: 4.28 ಕೋಟಿ ರೂ. ರೇವಣ್ಣಗಿಂತ ಭವಾನಿ ಸಿರಿವಂತೆ!
ಹಾಸನ: ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗಿಂತ ಅವರ ಪತ್ನಿ ಭವಾನಿ ರೇವಣ್ಣ ಅವರೇ ಹೆಚ್ಚು ಆಸ್ತಿ ಹೊಂದಿದ್ದಾರೆ. ಹೊಳೆನರಸೀಪುರ ಕ್ಷೇತ್ರದಲ್ಲಿ 7ನೇ ಬಾರಿಗೆ ಸ್ಪರ್ಧೆಗಿಳಿಯುತ್ತಿರುವ ಎಚ್.ಡಿ. ರೇವಣ್ಣ ನಾಮಪತ್ರದೊಂದಿಗೆ ಸಲ್ಲಿರುವ ಆಸ್ತಿಯ ಘೋಷಣ ಪತ್ರದಲ್ಲಿ 20.67 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿಕೊಂಡಿದ್ದರೆ, ಭವಾನಿ ಅವರ ಆಸ್ತಿ 22.18 ಕೋಟಿ ರೂ. ಎಂದು ವಿವರ ನೀಡಿದ್ದಾರೆ. ರೇವಣ್ಣ ಅವರು 9.81 ಕೋಟಿ ರೂ. ಸಾಲದ ವಿವರ ನೀಡಿದ್ದರೆ, ಭವಾನಿ ಅವರ ಸಾಲ 5.29 ಕೋಟಿ ರೂ. ಎಂದು ನೀಡಿದ್ದಾರೆ. ರೇವಣ್ಣ ಮತ್ತು ಭವಾನಿ ಅವರು ಸಾಲ ಪಡೆದಿರುವ ವಿವರ ನೀಡಿದ್ದಾರೆ. ಕೋಟಿ ಒಡೆಯನಾದರೂ ಚಿನ್ನ ಇಲ್ಲ!
ವಿಜಯಪುರ : ಜಿಲ್ಲೆಯ ಬಬಲೇಶ್ವರ ವಿಧಾನ ಸಭೆಯಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ-ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಕೋಟಿ ರೂ. ಒಡೆಯನಾದರೂ, ಅವರ ಬಳಿ ಚಿನ್ನವೇ ಇಲ್ಲ. ಅವರ ಪತ್ನಿ ಆಶಾ ಪಾಟೀಲ ಅವರು ಚರಾಸ್ತಿಯಲ್ಲಿ ಅವರಗಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದಾರೆ. ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತವಾಗಿ 94,29,41,500 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಪತ್ನಿ ಆಶಾ ಪಾಟೀಲ ಸ್ವಯಾರ್ಜಿತ-ಪಿತ್ರಾರ್ಜಿತ ಸೇರಿ 24,32,13,600 ರೂ. ಒಡೆಯರಾಗಿದ್ದಾರೆ. ಪತ್ನಿ ಆಶಾ ಪಾಟೀಲ ಬಳಿ 92.80 ಲಕ್ಷ ರೂ. ಮೌಲ್ಯದ ಬಂಗಾರವಿದೆ. ಎಂ.ಬಿ. ಪಾಟೀಲರಿಗೆ ಒಟ್ಟು 34,26,50,980 ರೂ. ಸಾಲವಿದೆ. ಆಶಾ ಪಾಟೀಲ ಸಹ 12,98,49,000 ರೂ. ಸಾಲ ಹೊಂದಿದ್ದಾರೆ. ಸುಧಾ 111 ಕೋ.ರೂ. ಒಡತಿ
ನಾಗಮಂಗಲ: ಇಲ್ಲಿನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಧಾ ಶಿವರಾಮೇಗೌಡ ಅವರು ಬರೋಬ್ಬರಿ 111.43 ಕೋಟಿ ರೂ. ಮೌಲ್ಯದ ಕೌಟುಂಬಿಕ ಆಸ್ತಿ ಘೋಷಿಸಿದ್ದಾರೆ.