Advertisement
ಕಳೆದ ಒಂದು ತಿಂಗಳಿಂದ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಒಟ್ಟಾರೆ 8,27,064 ಪ್ರಕರಣಗಳೊಂದಿಗೆ ಆಂಧ್ರಪ್ರದೇಶವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. 16.83 ಲಕ್ಷ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕಳೆದ ವಾರವಷ್ಟೇ ಸೋಂಕಿತರ ಸಾವಿನಲ್ಲಿಯೂ ಎರಡನೇ ಸ್ಥಾನಕ್ಕೇರಿಕೆಯಾಗಿತ್ತು. ಒಟ್ಟಾರೆ ಕೊರೊನಾ ಪ್ರಕರಣಗಳಲ್ಲಿ ಈಗಾಗಲೇ 7.65 ಲಕ್ಷ ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. 11,192 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇಂದಿಗೂ 50,592 ಸೋಂಕಿತರು ಆಸ್ಪತ್ರೆ/ಮನೆಗಳಲ್ಲಿ ಆರೈಕೆ ಮತ್ತು ಚಿಕಿತ್ಸೆಯಲ್ಲಿದ್ದಾರೆ.
Related Articles
ರಾಜ್ಯದ ಒಟ್ಟಾರೆ ಕೊರೊನಾ ಸೋಂಕು ಪರೀಕ್ಷೆಗಳ ಸಂಖ್ಯೆ ಭಾನುವಾರ 80.12 ಲಕ್ಷಕ್ಕೆ ತಲುಪಿವೆ. ಈ ಪೈಕಿ 30,04,785 ಪರೀಕ್ಷೆಗಳು ಅಕ್ಟೋಬರ್‌ನಲ್ಲಿಯೇ ನಡೆದಿದ್ದು, ಸರಾಸರಿ ನಿತ್ಯ ಒಂದು ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆಗೊಳಗಾಗಿದ್ದಾರೆ. ಇನ್ನು ಪರೀಕ್ಷೆಗಳಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ.
Advertisement