ಬೆಂಗಳೂರು: ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಯಡಿಯೂರಪ್ಪ ಜನದ್ರೋಹಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ ಆಪರೇಷನ್ ಕಮಲ ಮಾಡಲ್ಲ, ಅಧಿವೇಶನಕ್ಕೂ ಅಡ್ಡಿಪಡಿಸೊಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಅಧಿವೇಶನ ಆರಂಭದಲ್ಲೇ ಗಲಾಟೆ ಆರಂಭಿಸುವ ಮೂಲಕ ಜನದ್ರೋಹಿಯಾಗಿದ್ದಾರೆ.
ಬಿಜೆಪಿ ಶಾಸಕರು ಗದ್ದಲದಿಂದ ರಾಜ್ಯಪಾಲರಿಗೂ, ಸದನಕ್ಕೂ ಅಗೌರವವನ್ನು ತೋರಿದ್ದಾರೆ. ಇದು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯ ಹತಾಶ ಮನಃಸ್ಥಿತಿಯ ಪ್ರತೀಕವಾಗಿದೆ.’ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇಂದು ಬೆಳಗ್ಗೆ ಆರಂಭವಾದ ವಿಧಾನಮಂಡಲ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರು ಉಭಯ ಸದನವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದರು. ಆದರೆ ಭಾಷಣದ ಶುರುವಾತಿನಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ದಕ್ಕೆ ಮೊಟಕು ಗೊಳಿಸಿ ತೆರಳಿದ್ದರು.