Advertisement
ಬುಧವಾರ ನಡೆದ ಕೇರಳ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿಗಳ ವಿರುದ್ಧ ಕ್ರಿಮಿನಲ್, ವಿಜಿ ಲೆನ್ಸ್ ಪ್ರಕರಣ ದಾಖಲಿಸಲು ನಿರ್ಧ ರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ್ದ ನ್ಯಾ| ಜಿ. ಶಿವರಾಜನ್ ಆಯೋಗದ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Related Articles
Advertisement
ಆಯೋಗದ ವರದಿ ಅನ್ವಯ ಕ್ರಮ: ತಮ್ಮ ನಡೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಪಿಣರಾಯಿ “ಹಗರಣದ ರೂವಾರಿ ಗಳೆನಿಸಿರುವ ಸೋಲಾರ್ ಪ್ಯಾನಲ್ ಸಂಸ್ಥೆಯ ಮುಖ್ಯಸ್ಥರಾದ ಸರಿತಾ ನಾಯರ್ ಹಾಗೂ ಬಿಜು ರಾಧಾ ಕೃಷ್ಣನ್‌ಗೆ ಈ ಬಹುಕೋಟಿ ರೂ. ಹಗರಣ ನಡೆಸಲು ಚಾಂಡಿ, ಅವರ ಸಂಪುಟದ ಸಚಿವರು,ಚಾಂಡಿ ಆಪ್ತರಾದ ಟೆನ್ನಿ ಜೊಪ್ಪೆನ್, ಜಿಕ್ಕುಮನ್ ಜೋಸೆಫ್, ಚಾಂಡಿ ಗನ್ ಮ್ಯಾನ್ ಸಲೀಮ್ ರಾಜ್, ದಿಲ್ಲಿಯ ಒಬ್ಬ ಸಹಾಯಕ ಕುರುವಿಲ್ಲಾ ನೆರವು ನೀಡಿದ್ದರು. ಖುದ್ದು ಚಾಂಡಿ, ಅವರ ಸಂಪುಟ ಸದಸ್ಯರು ಭಾರೀ ಪ್ರಮಾಣದಲ್ಲಿ ಲಂಚವನ್ನೂ ಸ್ವೀಕರಿಸಿದ್ದಾರೆಂದು ಆಯೋಗದ ವರದಿಯಲ್ಲಿ ಹೇಳಲಾಗಿದೆ. ಇದರನ್ವಯ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳ ವಿರುದ್ಧ ಮೊದಲು ಕ್ರಿಮಿನಲ್ ಪ್ರಕರಣ ದಾಖಲಿಸಿ ಅನಂತರ ತನಿಖೆ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಹೊಸ ಎಸ್‌ಐಟಿಯಿಂದ ತನಿಖೆ: ಈ ಹಿಂದೆ ಈ ಹಗರಣ ಬಯಲುಗೊಂಡಿದ್ದಾಗ ಆಗ ಅಧಿಕಾರದಲ್ಲಿದ್ದ ಚಾಂಡಿ ಸರಕಾರ ಎಸ್‌ಐಟಿ ರಚಿಸಿ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಣರಾಯ್, ಹಿಂದಿನ ಎಸ್‌ಐಟಿ ನಡೆಸಿರುವ ತನಿಖೆಯಲ್ಲಿ ಆಗಿರಬಹುದಾದ ಲೋಪ ಪತ್ತೆ ಹಚ್ಚಿ ಇದೇ ಪ್ರಕರಣದಲ್ಲಿ ಮತ್ತೂಮ್ಮೆ ಕೂಲಂಕಷ ತನಿಖೆ ನಡೆಸಲು ಡಿಜಿಪಿ ರಾಜೇಶ್ ದೇವನ್ ನೇತೃತ್ವದಲ್ಲಿ ಹೊಸ ಎಸ್‌ಐಟಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ಎಸ್‌ಐಟಿ ತಂಡದಲ್ಲಿದ್ದ ಐಜಿಪಿ ಕೆ. ಪದ್ಮಕುಮಾರ್ ಹಾಗೂ ಡಿವೈಎಸ್‌ಪಿ ಕೆ. ಹರಿಕೃಷ್ಣನ್ ಅವರು ಹಲವಾರು ಸಾûಾÂಧಾರಗಳನ್ನು ನಾಶ ಮಾಡಿರುವ ಆರೋಪಗಳೂ ಕೇಳಿಬಂದಿರುವುದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪಿಣರಾಯಿ ತಿಳಿಸಿದ್ದಾರೆ. ವೇಣುಗೋಪಾಲ್ ವಿರುದ್ಧ ಕಿರುಕುಳ ಆರೋಪ
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಇತರರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರಿತಾ ಅವರು ನ್ಯಾ| ಶಿವರಾಜನ್ ಆಯೋಗಕ್ಕೆ ದೂರು ನೀಡಿದ್ದು ಆ ಪ್ರಕರಣದ ತನಿಖೆಯನ್ನೂ ಹೊಸ ಎಸ್‌ಐಟಿಗೆ ವಹಿಸುವುದಾಗಿ ಪಿಣರಾಯಿ ತಿಳಿಸಿ ದ್ದಾರೆ. ಕಾಂಗ್ರೆಸ್ ನಾಯಕರಾದ ಎ.ಪಿ. ಅನಿಲ್ ಕುಮಾರ್, ಜೋಸ್ ಕೆ. ಮಣಿ, ಅಡೂರ್ ಪ್ರಕಾಶ್, ಪಳನಿ ಮಾಣಿಕ್ಯಂ, ಕೆಪಿಸಿಸಿ ಮಹಾ ಕಾರ್ಯ ದರ್ಶಿ ಎನ್. ಸುಬ್ರಹ್ಮಣ್ಯನ್, ಹಿಬಿ ಹೆಡಿನ್ ಹೆಸರುಗಳನ್ನು ದೂರಿನಲ್ಲಿ ಸರಿತಾ ಉಲ್ಲೇಖೀಸಿದ್ದಾರೆಂದು ಪಿಣರಾಯಿ ತಿಳಿಸಿದ್ದಾರೆ. ಸೋಲಾರ್ ಪ್ಯಾನಲ್ ಹಗರಣದ ತನಿಖೆ ನಡೆಸಿದ ಆಯೋಗವು ನನ್ನ ಮೇಲಾಗಿರುವ ಅನ್ಯಾಯಗಳ ಬಗ್ಗೆ ಕೊಟ್ಟಿರುವ ದೂರನ್ನು ಪರಿಗಣಿಸಿದೆ. ಆ ದೂರಿನನ್ವಯ ಹಾಲಿ ಸಿಎಂ ತನಿಖೆಗೆ ಆದೇಶಿಸಿರುವುದು ನನಗೆ ನ್ಯಾಯ ದೊರಕಿದಂತಾಗಿದೆ.
– ಸರಿತಾ ನಾಯರ್, ಹಗರಣದ ಆರೋಪಿ ನಾನು ಯಾವುದೇ ತಪ್ಪು ಮಾಡಿಲ್ಲ. ಸೋಲಾರ್ ಪ್ಯಾನಲ್ ಹಗರಣದಲ್ಲಿ ನನ್ನ ಹಾಗೂ ನನ್ನ ಸರಕಾರದ ಪಾತ್ರವಿರಲಿಲ್ಲ. ನಾನು ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ.
– ಉಮ್ಮನ್ ಚಾಂಡಿ, ಕೇರಳದ ಮಾಜಿ ಮುಖ್ಯಮಂತ್ರಿ