Advertisement

ಮೂವರು ಮೋದಿಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ|ಕಾಂಗ್ರೆಸ್ ಆರೋಪ

07:43 PM Oct 01, 2021 | Team Udayavani |

ಬೆಂಗಳೂರು: ಮೂವರು ಮೋದಿಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ, ಮೂವರು ಮೋದಿಗಳಿಂದ ದೇಶ ಹಾಳಾಗಿದೆ. ಇಬ್ಬರು ಓಡಿ ಹೋಗಿದ್ದಾರೆ, ಮತ್ತೊಬ್ಬರು ಓಡಿ ಹೋಗಲು ತಯಾರಾಗುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

Advertisement

ಪ್ರಧಾನಿ ಮೋದಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ದೇಶದಲ್ಲಿ ಏರಿಕೆ ಪರ್ವ ನಡೆಯುತ್ತಿದೆ! ಜನಸಾಮಾನ್ಯರಿಗೆ ದರ ಏರಿಕೆ, ಅದಾನಿ ಅಂಬಾನಿಗಳ ಸಂಪಾದನೆ ಏರಿಕೆ, ದೇಶದ ಸಾಲ ಏರಿಕೆ, ನಿರುದ್ಯೋಗ ಏರಿಕೆ, ಬಡತನ ಏರಿಕೆ. ನೈಸರ್ಗಿಕ ಅನಿಲ ದರ ಏಕಾಏಕಿ 62% ಏರಿಸಿದ ಪರಿಣಾಮ ರಸಗೊಬ್ಬರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಲಿದೆ. ದೇಶದಲ್ಲಿ ಜನಸಾಮಾನ್ಯರು ಬದುಕಲೇಬಾರದೆಂದು ಮೋದಿ ತೀರ್ಮಾನಿಸಿದಂತಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ:2ಎ ಮೀಸಲಾತಿ ಹೋರಾಟ ವಿಚಾರ: ಸಿಎಂ ಭೇಟಿಯಾದ ಜಯ ಮೃತ್ಯುಂಜಯ ಸ್ವಾಮೀಜಿ

ಭಾರತ ಬಡವಾಗಿದೆ, ಮೋದಿ ಗೆಳೆಯರು ಸಿರಿವಂತರಾಗಿದ್ದಾರೆ. ಭಾರತದ ಆಸ್ತಿ ಮಾರಲಾಗುತ್ತಿದೆ, ಮೋದಿ ಗೆಳೆಯರ ಆಸ್ತಿ ಬೆಳೆಯುತ್ತಿದೆ. ಬಡವಾದ ಭಾರತವನ್ನು ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ! ಜನತೆ ಬಡವರಾಗಿರುವುದಷ್ಟೇ ಅಲ್ಲ, ಸರ್ಕಾರದ ಖಜಾನೆಯೂ ಖಾಲಿ, ಆದರೆ ಉದ್ಯಮಿಗಳು ಹೇಗೆ ಬೆಳೆದರು ಎಂದು ಜನತೆ ಯೋಚಿಸಿದರೆ ಮೋದಿಯವರ ಆಡಳಿತ ಅರ್ಥವಾಗಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Advertisement

6 ಲಕ್ಷ ಕೋಟಿಗಾಗಿ ದೇಶದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅದೂ ಸಾಲದೆ ವಿತ್ತೀಯ ಕೊರತೆ ನೀಗಿಸಲು 5 ಲಕ್ಷ ಕೋಟಿ ಸಾಲ ಮಾಡಲು ಕೇಂದ್ರ ಮುಂದಾಗಿದೆ, ಉದ್ಯಮಿಗಳ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿದ ಜನರ ಮೇಲೆ ತೆರಿಗೆ ಹೇರಲಾಗುತ್ತಿದೆ. ಜನರನ್ನು ದೋಚಿ, ದೇಶವನ್ನು ಅದಾನಿ, ಅಂಬಾನಿಗಳ ಪಾದತಳಕ್ಕೆ ಇಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next