Advertisement

ಅಪಘಾತದಲ್ಲಿ ಶಾಸಕ ಸಿದ್ದು ನ್ಯಾಮಗೌಡ ದುರ್ಮರಣ

06:00 AM May 29, 2018 | Team Udayavani |

ಜಮಖಂಡಿ: ಬಾಗಲಕೋಟೆ ತಾಲೂಕಿನ ತುಳಸಿಗೇರಿ ಸಮೀಪ ಬೆಳಗಾವಿ- ರಾಯಚೂರು ರಾಷ್ಟ್ರೀಯ ಹೆದ್ದಾರಿ 
ಯಲ್ಲಿ ಸೋಮವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿ ವಿಧಾನಸಭೆ ಕ್ಷೇತ್ರದ
ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ(69) ಮೃತಪಟ್ಟಿದ್ದಾರೆ.

Advertisement

ದೆಹಲಿಯಿಂದ ಗೋವಾಕ್ಕೆ ಬಂದು ಅಲ್ಲಿಂದ ಕಾರಿನಲ್ಲಿ ಬಾಗಲ ಕೋಟೆಗೆ ಕಾಂಗ್ರೆಸ್‌ ಮುಖಂಡ ರೊಬ್ಬರನ್ನು ಬಿಟ್ಟು, ಮರಳಿ ಜಮಖಂಡಿಗೆ ತೆರಳುವ ವೇಳೆ ತುಳಸಿಗೇರಿ ಸಮೀಪ ಇನ್ನೋವಾ ಕಾರಿನ ಟೈರ್‌ ಸೊ#ಧೀಟ ಗೊಂಡಿದ್ದು, ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಾಸಕ ನ್ಯಾಮಗೌಡರ ಎದೆಗೆ ಜೋರಾದ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜತೆಗಿದ್ದ ಡಾ.ಅಬ್ದುಲ್‌ ರಸೀದ್‌ ಸಾಲಾರ, ಜಮಖಂಡಿ ನಗರಸಭೆ ಸದಸ್ಯ ಅನ್ವರ ಮೋಮಿನ್‌, ಮೌಲಾನಾ
ಮುರ್ತುಜಾ ಹಸನರಜವಿ ಅವರು ಗಂಭೀರವಾಗಿ ಗಾಯ ಗೊಂಡಿದ್ದು,ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ
ದಾಖಲಿಸಲಾಗಿದೆ.ಶಾಸಕರ ಕಾರು ಚಾಲಕ ಪರಮಾನಂದ ಅಂಬಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ.

ಸಚಿವ ಸ್ಥಾನಕ್ಕಾಗಿ ದೆಹಲಿಗೆ: ಶಾಸಕ ಸಿದ್ದು ನ್ಯಾಮಗೌಡ ಅವರು ರವಿವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೊರತುಪಡಿಸಿದರೆ ಜಿಲ್ಲೆಯಿಂದ ಆಯ್ಕೆಯಾದ ಕಾಂಗ್ರೆಸ್‌ನ ಹಿರಿಯ ಶಾಸಕರಾಗಿದ್ದರು. ಅಲ್ಲದೇ ಕಳೆದ ಬಾರಿ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತವಾಗಿದ್ದು, ಈ ಬಾರಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು. ಈ ಕುರಿತು ರಾಹುಲ್‌ ಗಾಂಧಿ  ಅವರೊಂದಿಗೆ ಚರ್ಚಿಸಿ,ಮರಳುತ್ತಿದ್ದರು.

ರವಿವಾರ ರಾತ್ರಿ 9ಕ್ಕೆ ದೆಹಲಿ ಬಿಟ್ಟು, ರಾತ್ರಿ 11ಕ್ಕೆ ಗೋವಾಕ್ಕೆ ಆಗಮಿಸಿದ್ದರು. ಗೋವಾದಿಂದ ಜಮಖಂಡಿಗೆ ಬರಲು, ಜಮಖಂಡಿಯಿಂದ ತರಿಸಿದ ತಮ್ಮ ಇನ್ನೋವಾ ಕಾರಿನ ಮೂಲಕ ಆಗಮಿಸುತ್ತಿದ್ದರು. ಶಾಸಕರೊಂದಿಗೆ ದೆಹಲಿಗೆ ತೆರಳಿದ್ದ ಕಾಂಗ್ರೆಸ್‌ ಮುಖಂಡ ಡಾ.ಸಾಲಾರ ಅವರನ್ನು ಬಾಗಲಕೋಟೆಗೆ ಬಿಟ್ಟು ಜಮಖಂಡಿಗೆ ಬರುತ್ತಿದ್ದರು. ನ್ಯಾಮಗೌಡ ಅವರು ಮುಂದಿನ ಸೀಟಿನಲ್ಲಿ ಕುಳಿತದ್ದರು.

Advertisement

ಏರ್‌ ಬ್ಯಾಗ್‌ ತೆರೆದುಕೊಂಡರೂ ಅಪಘಾತದ ರಭಸಕ್ಕೆ ಒಡೆದು ಹೋಗಿದೆ. 30 ವರ್ಷಗಳಿಂದ ಎಂದೂ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳದ ಶಾಸಕ ಸಿದ್ದು ನ್ಯಾಮಗೌಡ ಅವರು ಅಂದು ಮುಂದೆ ಕುಳಿತಿದ್ದರು ಎನ್ನಲಾಗಿದೆ.

ಶಾಸಕ ನ್ಯಾಮಗೌಡ ಅವರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.ಹಿರಿಯ ಪುತ್ರ ಆನಂದ ನ್ಯಾಮಗೌಡ ಜಮಖಂಡಿ ಶುಗರ್ ಮೇಲುಸ್ತುವಾರಿ ಮತ್ತು ತಂದೆಯೊಂದಿಗೆ ಕ್ಷೇತ್ರದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕಿರಿಯ ಪುತ್ರ ಬಸವರಾಜ ನ್ಯಾಮಗೌಡ ತಮ್ಮ ಸ್ವಂತ ಶಾಲೆ ಮತ್ತು ಇಡೀ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಶಾಸಕ ನ್ಯಾಮಗೌಡ ಅವರಿಗೆ ಮೂವರು ಪುತ್ರಿಯರಿದ್ದು, ಮದುವೆ ಮಾಡಿಕೊಡಲಾಗಿದೆ. ಒಬ್ಬರು ಅಮೆರಿಕದಲ್ಲಿದ್ದರೆ, ಇನ್ನಿಬ್ಬರು ಸಿಂಗಾಪುರ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮಂಗಳವಾರ ಅಂತ್ಯಕ್ರಿಯೆ ರಸ್ತೆ ಅಪಘಾತದಲ್ಲಿ ನಿಧನರಾದ ಶಾಸಕ ಸಿದ್ದು ನ್ಯಾಮಗೌಡ ಪಾರ್ಥೀವ ಶರೀರ ಸೋಮವಾರ ಮಧ್ಯಾಹ್ನ 12ಕ್ಕೆ ನಗರದ ಕಟ್ಟೆಕರೆ ಬಳಿ ಆಗಮಿಸುತ್ತಿದ್ದಂತೆ ತಾಲೂಕಾ ಡಳಿತದಿಂದ ಗೌರವ ನಮನ ಸಲ್ಲಿಸಲಾಯಿತು.

ಸಾವಿರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು, ಮುಖಂಡರು ಅಂತಿಮ ನಮನ ಸಲ್ಲಿಸಿದರು. ಅಲ್ಲಿಂದ ಶಾಸಕರ
ಮನೆಗೆ ಪಾರ್ಥೀವ ಶರೀರ ತರಲಾಯಿತು. ಮನೆಯಲ್ಲಿ ಶ್ರೀಗಳಿಂದ ವಿಧಿ ವಿಧಾನಗಳು ಜರುಗಿದವು. ನಂತರ
ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ 10 ಗಂಟೆಗೆ
ಹಿರೇಪಡಸಲಗಿ ಸಮೀಪದ ಜಮಖಂಡಿ ಶುಗರ್ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next