Advertisement
ಕಾರವಾರದ ಶಾಸಕ ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ| ಸಂತೋಷ್ ಗಜಾನನ ಭಟ್ ಗುರುವಾರ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ನ್ಯಾಯಾಲಯವು ಹೇಳಿತ್ತು. ಶುಕ್ರವಾರ ಮತ್ತೆ ವಾದ-ಪ್ರತಿವಾದ ನಡೆದ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಶನಿವಾರಕ್ಕೆ ಕಾಯ್ದಿರಿಸಿದೆ.
ಸಿಬಿಐ ಪರ ಶುಕ್ರವಾರ ಹಿರಿಯ ಸರಕಾರಿ ಅಭಿಯೋಜಕಿ ಕೆ.ಎಸ್. ಹೇಮಾ ವಾದ ಮಂಡಿಸಿ, ಆರೋಪಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳ ಸಾಗಣೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸರಕಾರಕ್ಕೆ ಸುಮಾರು 250 ಕೋಟಿ ರೂ.ನಷ್ಟವಾಗಿದೆ. ಪ್ರಕರಣದಲ್ಲಿ ಆರೋಪಿಗಳು ಆರ್ಥಿಕ ಅಪರಾಧ ಎಸಗಿದ್ದಾರೆ. ಹೀಗಾಗಿ ಗರಿಷ್ಠ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದರು. ಶಾಸಕ ಸತೀಶ್ ಸೈಲ್ ಪರ ವಕೀಲ ರವಿ ಬಿ. ನಾ ಯ ಕ್ ವಾದ ಮಂಡಿಸಿ, ಕಳ್ಳತನ, ಭ್ರಷ್ಟಾಚಾರ ಕಾಯ್ದೆಯಡಿ ಗರಿಷ್ಠ ಶಿಕ್ಷೆ 3 ವರ್ಷಗಳಾಗಿದೆ. ಆದ್ದರಿಂದ 3 ವರ್ಷಕ್ಕಿಂತಲೂ ಕನಿಷ್ಠ ಶಿಕ್ಷೆ, ದಂಡ ವಿಧಿಸಬಹುದು. ಇನ್ನು ಸತೀಶ್ ಸೈಲ್ ಅವರಿಗೆ ಅನಾರೋಗ್ಯದ ಸಮಸ್ಯೆಗಳಿವೆ. ಇದರ ಆಧಾರದ ಮೇಲೆ ಜಾಮೀನು ಪಡೆದುಕೊಂಡಿದ್ದರು ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.
Related Articles
ಜೈಲಿನಲ್ಲಿರುವ ಶಾಸಕ
ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಶಾಸಕ ಸತೀಶ್ ಸೈಲ್ ಬೇಲೆಕೇರಿ ಬಂದರಿನ ಉಪ ಸಂರಕ್ಷಣಾಧಿಕಾರಿ (ಡೆಪ್ಯೂಟಿ ಪೋರ್ಟ್ ಕನ್ಸ ರ್‌ವೇಟರ್) ಮಹೇಶ್ ಬಿಳಿಯ, ಲಾಲ್‌ವುಹಲ್ ಕಂಪೆನಿಯ ಮಾಲಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷಿ$¾à ವೆಂಕಟೇಶ್ವರ ಟ್ರೇಡರ್ಸ್ ಮಾಲಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪೆನಿ ಮಾಲಕ ಕೆ.ವಿ. ನಾಗರಾಜ್, ಗೋವಿಂದರಾಜು, ಆಶಾಪುರ ಕಂಪೆನಿ ಮಾಲಕ ಚೇತನ್ ಬಂಧನಕ್ಕೊಳಗಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೀಗ ಶನಿವಾರ ನ್ಯಾಯಾಲಯವು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದು, ಎಲ್ಲರ ಚಿತ್ತ ಇದರತ್ತ ಹೊರಳಿದೆ.
Advertisement
6 ಪ್ರಕರಣಗಳಲ್ಲೂ ದೋಷಿಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಇದೀಗ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿರುವ ಕೋರ್ಟ್, ಶಾಸಕ ಸತೀಶ್ ಸೈಲ್ ಸೇರಿ ಎಲ್ಲ ಆರೋಪಿಗಳು ದೋಷಿ ಎಂದು ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಐಎಲ್‌ಸಿ ಕಂಪೆನಿಯ ಮಾಲಕ ಸೋಮಶೇಖರ್ ಈಗಾಗಲೇ ನಿಧನ ಹೊಂದಿದ್ದಾರೆ. ಏನಿದು ಪ್ರಕರಣ?
ಅಂಕೋಲಾ ತಾಲೂಕಿನ ಬೇಲೆಕೇರಿ ವ್ಯಾಪ್ತಿಯಲ್ಲಿ 2009- 2010ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸುಮಾರು 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಿದ್ದರು. ಈ ಅದಿರನ್ನು ಬೇಲೆಕೇರಿ ಬಂದರಿನ ಅಧಿಕಾರಿ ಮಹೇಶ್ ಬಿಳಿಯ ಅವರ ಸುಪರ್ದಿಗೆ ನೀಡಿದ್ದರು. ಆದರೆ ಮಹೇಶ್ ಬಿಳಿಯ, ಶಾಸಕ ಸತೀಶ್ ಸೈಲ್ ಹಾಗೂ ಇತರ ಆರೋಪಿಗಳು ಈ ಅದಿರು ಕಳವು ಮಾಡಲು ಒಳ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಗಳ ಪೈಕಿ ಕೆಲವರು ಸತೀಶ್ ಸೈಲ್‌ಗೆ ಕಡಿಮೆ ಮೊತ್ತಕ್ಕೆ ಜಪ್ತಿ ಮಾಡಿದ ಅದಿರನ್ನು ಮಾರಾಟ ಮಾಡಿದ್ದರು. ಇನ್ನು ಸತೀಶ್ ಸೈಲ್ ಪ್ರತ್ಯೇಕವಾಗಿ ತಮ್ಮ ಕಂಪೆನಿಗಳ ಮೂಲಕ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದ್ದರು ಎನ್ನಲಾಗಿದೆ.