Advertisement

ಸುರ್ಜೇವಾಲಾ ಅಂದೇ ಯಾಕೆ ಕೇಳಲಿಲ್ಲ?: ಆರೋಪಕ್ಕೆ ಸಿಎಂ ತಿರುಗೇಟು

12:39 PM Nov 14, 2021 | Team Udayavani |

ಬೆಂಗಳೂರು : ಬಿಟ್‌ಕಾಯಿನ್ ಹಗರಣದ ಕುರಿತು ಕಾಂಗ್ರೆಸ್ 2016 ರ ವಿಷಯವನ್ನು ಹೇಳುತ್ತಿದ್ದು, ಕರ್ನಾಟಕಕ್ಕೆ ಸಂಬಂಧಿಸಿದ ಯಾವುದಾದರೂ ವಿಚಾರ ಇದ್ದರೆ, ಸುರ್ಜೇವಾಲಾ ಅವರು ಅಂದಿನ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಏಕೆ ಕೇಳಲಿಲ್ಲ, ಅವರು ಈ ಸಮಸ್ಯೆಯನ್ನು ಏಕೆ ಗಮನಿಸಲಿಲ್ಲ ಎಂದು ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ಕಾಂಗ್ರೆಸ್ ವಕ್ತಾರ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಆರೋಪಕ್ಕೆ ತಿರುಗೇಟು ನೀಡಿದರು. ‘2018 ರಲ್ಲಿಯೇ ನೀವು ಅದನ್ನು ತನಿಖೆ ಮಾಡಬಹುದಿತ್ತು. ಯಾಕೆ ಸರಿಯಾಗಿ ವಿಚಾರಣೆ ಮಾಡಲಿಲ್ಲ? ನೀವು ಅಧಿಕಾರದಲ್ಲಿದ್ದಾಗ, ನೀವು ಅವರನ್ನು ಮುಕ್ತವಾಗಿ ಬಿಟ್ಟಿದ್ದೀರಿ. ಅದರಿಂದಾಗಿ ಸಮಸ್ಯೆ ದೊಡ್ಡದಾಗಿದೆ.. ಈಗ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದೀರಿ, ಸುರ್ಜೇವಾಲಾ ಅವರು ಕೇಳಿರುವ ಆರು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ’ ಎಂದರು.

‘ನಾವು ನ್ಯಾಯಯುತವಾಗಿದ್ದೇವೆ, ನಾವು ತನಿಖೆ ಮಾಡಿದ್ದೇವೆ, ನಾವು ಅಪರಾಧಿಯನ್ನು ಹಿಡಿದಿದ್ದೇವೆ, ನಾವು ಅದನ್ನು ಇಡಿ &ಸಿಬಿಐ ಗೆ ಶಿಫಾರಸು ಮಾಡಿ ಇಂಟರ್‌ಪೋಲ್‌ಗೆ ನೀಡಿದ್ದೇವೆ. ಇಡಿ ತನಿಖೆ ನಡೆಯುತ್ತಿದೆ. ನಾವು ಸಿಬಿಐಗೆ ಬೇಕಾದ ಮಾಹಿತಿ ನೀಡಿದ್ದೇವೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ’ ಎಂದು ಸಿಎಂ ಪುನರುಚ್ಚರಿಸಿದರು.

ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ಸಾಕ್ಷ್ಯಾಧಾರಗಳನ್ನು ತನಿಖೆ ಮಾಡುತ್ತಿರುವ ಇಡಿ ಗೆ ಒದಗಿಸಲಿ ಎಂದರು.

ಚಿಂತನೆಯ ದಿವಾಳಿತನ

Advertisement

ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದರೆ ಅದು ಸುರ್ಜೆವಾಲಾ ಅವರ ಚಿಂತನೆಯ ದಿವಾಳಿತನ ಎಂದರು. ರಾಷ್ಟ್ರೀಯ ಪಕ್ಷದ ವಕ್ತಾರರೊಬ್ಬರಿಗೆ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುವುದು ಶೋಭಿಸುವುದಿಲ್ಲ. ಸಾಂದರ್ಭಿಕ ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದರು.

ವಶಪಡಿಸಿಕೊಂಡಿರುವ ಬಿಟ್ ಕಾಯಿನ್ ಬಗ್ಗೆ ಬಹಳ ಗೊಂದಲವಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಆರೋಪಿ ಶ್ರೀ ಕೃಷ್ಣ ತನ್ನ ಖಾತೆ ಎಂದು ಯಾವುದೋ ಎಕ್ಸ್ ಚೇಂಜ್ ಖಾತೆಯನ್ನು ನೀಡಿದ್ದಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next