Advertisement

ಕರ್ನಾಟಕ ಚಾಂಪಿಯನ್‌ ಕರ್ನಾಟಕ ಚಾಂಪಿಯನ್‌

04:52 PM Feb 22, 2021 | Team Udayavani |

ಗದಗ: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಆಯೋಜನೆಗೊಂಡ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ವೀರಾಗ್ರಣಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.

Advertisement

ಮೊದಲ ದಿನದಿಂದಲೇ ಪದಕಗಳ ಬೇಟೆಯಲ್ಲಿ ತೊಡಗಿದ್ದ ಕನ್ನಡದ ಕಲಿಗಳು ಒಟ್ಟಾರೆ 95 ಅಂಕಗಳಿಸುವ ಮೂಲಕ ನಿರೀಕ್ಷೆಯಂತೆ ಕರ್ನಾಟಕ ಚಾಂಪಿಯನ್‌ ಆಗಲು ಶ್ರಮಿಸಿದರೆ, 48 ಅಂಕ ಗಳಿಸಿದ ಮಹಾರಾಷ್ಟ್ರ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದೆ.

ಇಲ್ಲಿನ ಬಿಂಕದಕಟ್ಟಿಯಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಮೊದಲ ದಿನದಿಂದಲೇ ಕರ್ನಾಟಕದ ಸೈಕ್ಲಿಸ್ಟ್‌ಗಳು ಪದಕಗಳ ಬೇಟೆಯಲ್ಲಿ ತೊಡಗಿದ್ದರು. ಮೊದಲ ದಿನವೇ ಚಿನ್ನ 3, ಬೆಳ್ಳಿ 2 ಹಾಗೂ ಕಂಚು 2, ಎರಡನೇ ದಿನ ಚಿನ್ನ 1, ಬೆಳ್ಳಿ 2 ಹಾಗೂ ಕಂಚು 1 ಹಾಗೂ ಸ್ಪರ್ಧೆಯ ಅಂತಿಮ ದಿನವಾದ ರವಿವಾರ 5 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.

ವಿವಿಧ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿರುವ ಪುರುಷರ ವಿಭಾಗದಲ್ಲಿ ಕರ್ನಾಟಕದ ಅಡೋನಿಸ್ಕ್ ಕೆ. ಟ್ಯಾಂಗ್ಪು ಹಾಗೂ ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಣಿತ ಸೋಮನ್‌ ಚಾಂಪಿಯನ್‌ ಆಗಿ ಮಿಂದ್ದಾರೆ.

ಫಲಿತಾಂಶದ ವಿವರ: ಪುರುಷರ ಕ್ರಾಸ್‌ ಕಂಟ್ರಿ 23 ಕಿಮೀ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಶಿವನ್‌ 1:10:43 ಗಂಟೆಯಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಕರ್ನಾಕಟದ ವೈಶಾಕ ಕೆ.ವಿ. 1:11:03 ಗಂಟೆ ಹಾಗೂ ಉತ್ತರಾಖಂಡ್‌ನ‌ ರಜತ ಪಾಂಡೆ 1:12:20 ಗಂಟೆಯಲ್ಲಿ ಕ್ರಮಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು.

Advertisement

14 ವರ್ಷದೊಳಗಿನ ಬಾಲಕರ ಕ್ರಾಸ್‌ ಕಂಟ್ರಿ 15 ಕಿಮೀ ವಿಭಾಗದಲ್ಲಿ ಕರ್ನಾಟಕದ ಸಮರ್ಪಣ ಜೈನ್‌ 37:38.946 ನಿಮಿಷದಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಮಹರಾಷ್ಟ್ರದ ಅದೀಪ ವಾಘಾ 38:03.811 ನಿಮಿಷ ಹಾಗೂ ಉತ್ತರಾಖಂಡದ ಶಿವಾಂಷ ಸಾಹ 38:59.968 ನಿಮಿಷದಲ್ಲಿ ಗುರಿ ಮುಟ್ಟಿಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

14 ವರ್ಷದ ಬಾಲಕಿಯರ ಕ್ರಾಸ್‌ ಕಂಟ್ರಿ 15 ಕಿಮೀ ವಿಭಾಗದಲ್ಲಿ ಮೊದಲ ಎರಡು ಸ್ಥಾನವನ್ನು ಮಹರಾಷ್ಟ್ರ ಬಾಚಿಕೊಂಡಿದೆ. ಸಿದ್ದಿ ಶಿರ್ಕೆ 47:38.590 ನಿಮಿಷ ಹಾಗೂ ಶ್ರಾವಣಿ ಪರಿತ 48:45.134 ನಿಮಿಷದಲ್ಲಿ ಗುರಿಮುಟ್ಟಿ, ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನಪಡೆದರು. ಕೇರಳದ ಸೃಷ್ಠಿ ಸಂಜಯ ಕುಂಭೋಜೆ 51:36.831 ನಿಮಿಷದಲ್ಲಿ ಗುರಿ ಮುಟ್ಟಿ ತೃತೀಯ ಸ್ಥಾನಕ್ಕೆ ತೃಪ್ತರಾದರು.

16 ವರ್ಷದೊಳಗಿನ ಬಾಲಕ ಕ್ರಾಸ್‌ ಕಂಟ್ರಿ 15 ಕಿಮೀ ವಿಭಾಗದಲ್ಲಿ ಕರ್ನಾಟಕ ಚರಿತ್‌ ಗೌಡ 28:11.357 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡರು. ಪಶ್ಚಿಮ ಬಂಗಾಳದ ಶುದಾಂಶು ಲಂಬಾ 29:18.310 ನಿಮಿಷ ಮತ್ತು ಉತ್ತರಾಖಂಡನ ಅವನೀಶ ರಾಣಾ 30:13.116 ನಿಮಿಷದಲ್ಲಿ ಗುರಿ ಮುಟ್ಟಿ, ದ್ವಿತೀಯಮತ್ತು ತೃತೀಯ ಸ್ಥಾನಕ್ಕೆ ಪಾತ್ರರಾದರು.

16 ವರ್ಷದೊಳಗಿನ ಬಾಲಕಿಯರ ವಿಭಾಗದ ಕ್ರಾಸ್‌ ಕಂಟ್ರಿ 15 ಕಿಮೀ ವಿಭಾಗದಲ್ಲಿ ಕರ್ನಾಟಕದ ಕರೇನ್‌ ಮರ್ಶಲ್‌ 28:46.191 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಗಳಿಸಿದರು. ಕೇರಳದ ಅಗ್ಸಾ ಅನ್ನ ತೊಮಸ್‌ 28:52.884 ನಿಮಿಷ ಮತ್ತು ಕರ್ನಾಟಕದ ಪವಿತ್ರಾ ಕುರ್ತಕೊಟಿ 29:31.413 ನಿಮಿಷದಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯರಾಗಿ ಗುರಿ ತಲುಪಿದರು.

ಪುರುಷರ ವೈಯಕ್ತಿಕ ಟೈಮ್‌ ಟ್ರಾಯಲ್‌ 23 ಕಿಮೀ ವಿಭಾಗದಲ್ಲಿ ಆರ್ಮಿ ಅಡವೇಂಚರ್‌ ವಿಂಗ್‌ನ ಕಮಲೇಶ ರಾಣಾ 1:06:42.462

ಗಂಟೆಯಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನಕ್ಕೆ ಪಾತ್ರರಾದರು. ಹಿಮಾಚಲ ಪ್ರದೇಶದ ಶಿವನ್‌ 1:07:29.840 ಗಂಟೆ ಹಾಗೂ ಆರ್ಮಿ ಅಡವೇಂಚರ್‌ ವಿಂಗ್‌ ನ ಪ್ರಕಾಶ್‌ ಥಾಪಾ ಮಗರ 1:09:29.973 ಗಂಟೆಯಲ್ಲಿ ಗುರಿ ಮುಟ್ಟಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

18 ವರ್ಷದೊಳಗಿನ ಬಾಲಕೀಯರ ಕ್ರಾಸ್‌ ಕಂಟ್ರಿ ಒಲಿಂಪಿಕ 18.5 ಕಿಮೀ ವಿಭಾಗದಲ್ಲಿ ಮೊದಲ ಎರಡು ಸ್ಥಾನಗಳನ್ನು ಕರ್ನಾಟಕ ಬಾಚಿಕೊಂಡಿದೆ. ಸ್ಟಾರ್‌ ನರಜರಿ 1:24:06.888ಗಂಟೆ ಮತ್ತು ಅಕ್ಷತಾ ಬಿರಾದಾರ 1:25:51.754ಗಂಟೆಯಲ್ಲಿ ಗುರಿ ಮೊಟ್ಟಿ, ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದರು. ಕೇರಳದ ಬಿನಿಲಾ ಮೊಲ್‌ ಗಿಬಿ 1:29:22.460 ಗಂಟೆಯಲ್ಲಿ ಗುರಿಮುಟ್ಟಿ ಮೂರನೇ ಸ್ಥಾನದಲ್ಲಿ ತಲುಪಿದರು.18 ವರ್ಷದೊಳಗಿನ ಬಾಲಕರ ಕ್ರಾಸ್‌ ಕಂಟ್ರಿ ಒಲಿಂಪಿಕ್‌ 18.5 ಕಿಮೀ ವಿಭಾಗದಲ್ಲೂ ಮೊದಲ ಎರಡು ಸ್ಥಾನವನ್ನು ಕರ್ನಾಟಕ ಪಡೆದಿದೆ.

ಅಡೊನ್ಸಿ ಕೆ ಟಂಕು 53:07.056 ನಿಮಿಷ ಮತ್ತು ಹರ್ಶಿತ ಕೆ.ಜೆ. 56:52.834 ನಿಮಿಷದಲ್ಲಿ ಸಾಗಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಬಾಚಿಕೊಂಡರು. ಚಂಡೀಘಡದ ಮಾದವದತ್ತ 59:28.009 ನಿಮಿಷದಲ್ಲಿ ಗುರಿ ತಲುಪಿ ತೃತೀಯರಾದರು.

18 ವರ್ಷದ ಪುರುಷರ ಕ್ರಾಸ್‌ ಕಂಟ್ರಿ 27.4 ಕಿಮೀ ವಿಭಾಗದಲ್ಲಿ ಹಿಮಾಚಲ ಪ್ರದೇಶದ 1:22:24.206 ಗಂಟೆಯಲ್ಲಿ ಸಾಗಿಮೊದಲಿಗರಾದರು. ಆರ್ಮಿ ಅಡವೇಂಚರ್‌ ವಿಂಗ್‌ನ ಕಮಲೇಶ ರಾಣಾ 1:22:50.390ಗಂಟೆ ಮತ್ತು ಉತ್ತರಾಖಂಡನ ರಜತ ಪಾಂಡೆ1:23:18.110 ಗಂಟೆಯಲ್ಲಿ ಗುರಿ ಮುಟ್ಟಿ ದ್ವಿತೀ ಮತ್ತು ತೃತೀಯರಾದರು.

18 ವರ್ಷದ ಮಹಿಳೆಯರ ಕ್ರಾಸ್‌ ಕಂಟ್ರಿ 18.5 ಕಿಮೀ ವಿಭಾಗದಲ್ಲಿ ಮಹಾರಾಷ್ಟ್ರದಪ್ರಣೀತಾ ಸೊಮನ್‌ 1:10:29.619 ಗಂಟೆಯಲ್ಲಿಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿದರು.ಕರ್ನಾಟಕದ ಜೊಯ್ಸ್ನಾ ನರಜರಿ 1:14:57.998 ಮತ್ತು ಮಹಾರಾಷ್ಟ್ರದ ಪ್ರಿಯಾಂಕ ಕರಾಂಡೆ 1:17:30.557 ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಬಾಲಕ/ಬಾಲಕೀಯರ ಮಿಕ್ಸಡ್‌ ಟೀಮ್‌ರಿಲೇ 18.5 ಕಿಮೀ ವಿಭಾಗದಲ್ಲಿ ಕರ್ನಾಟಕದ ಅಡೋನ್ಸಿ ಕೆ.ಟಂಕು, ಹರ್ಷಿತ್‌ ಕೆ.ಜೆ., ಸ್ಟಾರ್‌ನರಜರಿ ಮತ್ತು ಅಕ್ಷತಾ ಬಿರಾದಾರ ಅವರತಂಡ 1:07:45.641 ಗಂಟೆಯಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆಯಿತು.

ಕೇರಳದ ನಿಬಿನ್‌ ಬೇಬಿ, ಕಿರಣ ಕನ್ನ, ಬಿನಿಲಾ ಮೊಲ್‌ ಗಿಬಿ, ಅಗಾÕ ಅನ್ನ ತೊಮಸ್‌ ಅವರ ತಂಡ 1:09:35.608 ಗಂಟೆಯಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಗಳಿಸಿತು.

ಮಹಾರಾಷ್ಟ್ರದ ಜತೀನ ಜೋಶಿ, ಸಂಗಾರಾಮ ಗುಲುವೆ, ನಿಶಾಕುಮಾರಿ ಯಾದವ, ಮಾನವಿಪಾಟೀಲ್‌ ಅವರ ತಂಡ 1:20:10.068 ಗಂಟೆಯಲ್ಲಿ ಗುರಿ ಮುಟ್ಟಿ ತೃತೀಯ ಸ್ಥಾನಕ್ಕೆ ಸಮಾಧಾನ ಪಟ್ಟಿತು.

 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next