Advertisement

Karnataka Bypoll Results 2018; ಸೋಲು-ಗೆಲುವಿನ ಕುತೂಹಲಕ್ಕೆ ತೆರೆ

07:10 AM Nov 06, 2018 | Sharanya Alva |

ಬೆಂಗಳೂರು: ಆಡಳಿತಾರೂಢ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಹಾಗೂ ವಿಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಕೈತಪ್ಪಿ ಕಾಂಗ್ರೆಸ್ ವಶವಾಗಿದೆ. ಮಂಡ್ಯ ಲೋಕಸಭೆ ಜೆಡಿಎಸ್ ಪಾಲಾಗಿದ್ದು, ಜಮಖಂಡಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ರಾಮನಗರದಲ್ಲಿ ಜೆಡಿಎಸ್ ಗೆಲುವು ಪಡೆದಿದೆ. ಫಲಿತಾಂಶದ ಕ್ಷಣ, ಕ್ಷಣದ ಮಾಹಿತಿ..

Advertisement

*ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ 1,25,043, ಬಿಜೆಪಿಯ ಚಂದ್ರಶೇಖರ್ 15,906 ಮತ ಪಡೆದಿದ್ದಾರೆ.

*ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ 96,968 ಮತ ಗಳಿಸಿದ್ದು, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ 57,492 ಮತ ಪಡೆದಿದ್ದಾರೆ.

*ಮಂಡ್ಯ ಲೋಕಸಭೆಯ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ 4,94,728 ಮತ ಗಳಿಸಿದ್ದು,ಬಿಜೆಪಿಯ ಡಾ.ಸಿದ್ದರಾಮಯ್ಯ 2,05,357 ಮತ ಪಡೆದಿದ್ದಾರೆ.

*ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ 5,30, 137 ಮತ ಪಡೆದಿದ್ದು,ಜೆಡಿಎಸ್ ನ ಮಧು ಬಂಗಾರಪ್ಪ 4,70,694 ಮತ ಗಳಿಸಿದ್ದಾರೆ.

Advertisement

*ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 5,54,139, ಬಿಜೆಪಿ ಜೆ ಶಾಂತಾ 3,39,313 ಮತ ಪಡೆದಿದ್ದಾರೆ.

*ರಾಮನಗರದಲ್ಲಿ ಅನಿತಾಕುಮಾರಸ್ವಾಮಿ 82,498 ಮತ ಗಳಿಸಿದ್ದಾರೆ.ಬಿಜೆಪಿಯ ಚಂದ್ರಶೇಖರ್(ಕಣದಿಂದ ಹಿಂದೆ ಸರಿದಿದ್ದಾರೆ) 12,052 ಮತ ಪಡೆದಿದ್ದಾರೆ.

*ಶಿವಮೊಗ್ಗದಲ್ಲಿ ಬಿಜೆಪಿಯ ಬಿವೈ ರಾಘವೇಂದ್ರಗೆ 3,29, 630, ಜೆಡಿಎಸ್ ನ ಮಧು ಬಂಗಾರಪ್ಪಗೆ 2,86,544 ಮತ ಪಡೆದಿದ್ದಾರೆ.

*ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡಗೆ(71,787) ಭರ್ಜರಿ ಗೆಲುವು.

*10ನೇ ಸುತ್ತಿನಲ್ಲಿ ರಾಘವೇಂದ್ರಗೆ 36,033 ಮತಗಳ ಮುನ್ನಡೆ, ಮಧು ಬಂಗಾರಪ್ಪಗೆ ಸ್ವಕ್ಷೇತ್ರ ಸೊರಬದಲ್ಲಿಯೇ ಹಿನ್ನಡೆ.

*ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಜಯಭೇರಿ ಬಾರಿಸಿದ್ದಾರೆ.

*ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಗೆಲುವು ಸಾಧಿಸಿದ್ದಾರೆ.

*ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ 2,47,734 ಮತ ಗಳಿಸಿದ್ದು, ಬಿಜೆಪಿಯ ಡಾ.ಸಿದ್ದರಾಮಯ್ಯ 94,194 ಮತ ಪಡೆದಿದ್ದಾರೆ.

*ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿವೈ ರಾಘವೇಂದ್ರ 2,38039, ಮತ ಪಡೆದಿದ್ದು, ಜೆಡಿಎಸ್ ನ ಮಧು ಬಂಗಾರಪ್ಪ 2,12,333 ಪಡೆದಿದ್ದಾರೆ.

*ಬಳ್ಳಾರಿಯಲ್ಲಿ ವಿಎಸ್ ಉಗ್ರಪ್ಪ 2,66, 370 ಮತ ಪಡೆದಿದ್ದರೆ, ಬಿಜೆಪಿಯ ಜೆ.ಶಾಂತಾ 1,47,514 ಮತ ಗಳಿಸಿದ್ದಾರೆ.

*ಜಮಖಂಡಿಯಲ್ಲಿ ಆನಂದ್‌ ನ್ಯಾಮೇಗೌಡಗೆ ಭರ್ಜರಿ ಮುನ್ನಡೆ ಹಿನ್ನಲೆ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚಾರಣೆ ಆರಂಭ.

*ಜಮಖಂಡಿಯಲ್ಲಿ 5 ನೇ ಸುತ್ತಿನ ಬಳಿಕವೂ ಕಾಂಗ್ರೆಸ್‌ನ ಆನಂದ ನ್ಯಾಮೇಗೌಡ ಮುನ್ನಡೆ, 9 ಸಾವಿರಕ್ಕೂ ಹೆಚ್ಚು ಮತಗಳ ಲೀಡ್‌.

*ಶಿವಮೊಗ್ಗದಲ್ಲಿ ಮಧು ಬಂಗಾರಪ್ಪಗಿಂತ  ಬಿಜೆಪಿಯ ಬಿವೈ ರಾಘವೇಂದ್ರ 6 ಸಾವಿರ ಮತಗಳ ಮುನ್ನಡೆ

*ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪಗೆ ಭರ್ಜರಿ ಮುನ್ನಡೆ, ಎಲ್ಲಾ ಸುತ್ತುಗಳಲ್ಲಿ  ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌ ಅಭ್ಯರ್ಥಿ.

*ರಾಮನಗರ ಮತ್ತು ಮಂಡ್ಯದಲ್ಲಿ ಜೆಡಿಎಸ್‌ ಭಾರೀ ಮುನ್ನಡೆ, ಗೆಲುವಿನತ್ತ ದಾಪುಗಾಲು. 

*ಶಿವಮೊಗ್ಗದಲ್ಲಿ ಜೆಡಿಎಸ್ ಮೈತ್ರಿಕೂಟದ ಮಧು ಬಂಗಾರಪ್ಪ ಹಾಗೂ ಬಿಜೆಪಿಯ ಬಿವೈ ರಾಘವೇಂದ್ರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ, ಆರಂಭಿಕ ಹಿನ್ನಡೆ ಬಳಿಕ ಮಧುಗೆ ಅಲ್ಪ ಮುನ್ನಡೆ.

*ಬಳ್ಳಾರಿಯಲ್ಲಿ ಕಾಂಗ್ರೆಸ್ ನ ವಿಎಸ್ ಉಗ್ರಪ್ಪ ಮನ್ನಡೆ , ಬಿಜೆಪಿಯ ಜೆ.ಶಾಂತಾಗೆ ಭಾರೀ ಹಿನ್ನಡೆ.
 ಮಂಡ್ಯದಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ ಭರ್ಜರಿ ಮನ್ನಡೆ, ಗೆಲುವಿನತ್ತ ದಾಪುಗಾಲು.  ಬಿಜೆಪಿಯ ಡಾ.ಸಿದ್ದರಾಮಯ್ಯಗೆ ಭಾರೀ ಹಿನ್ನಡೆ 

*ಜಮಖಂಡಿಯಲ್ಲಿ ಬಿಜೆಪಿಯ ಆನಂದ ಕುಲಕರ್ಣಿಗೆ ಹಿನ್ನಡೆ, ಕಾಂಗ್ರೆಸ್ ನ ಆನಂದ್ ನ್ಯಾಮಗೌಡ ಮುನ್ನಡೆ 

*ರಾಮನಗರದಲ್ಲಿ ಜೆಡಿಎಸ್ ನ ಅನಿತಾಕುಮಾರಸ್ವಾಮಿ ನಿರೀಕ್ಷೆಯಂತೆ ಮುನ್ನಡೆ, ಕಣದಿಂದ ಹಿಂದೆ ಸರಿದರೂ ಬಿಜೆಪಿ ಅಭ್ಯರ್ಥಿಗೆ 1000ಕ್ಕೂ ಹೆಚ್ಚು ಮತಗಳು. 

Advertisement

Udayavani is now on Telegram. Click here to join our channel and stay updated with the latest news.

Next