ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಏ.13ರಂದು ಹೊರಬೀಳಲಿದೆ. ಏತನ್ಮಧ್ಯೆ ಉಪಚುನಾವಣೆ ಫಲಿತಾಂಶದ ಬಗ್ಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ವರದಿ ಸಿಎಂ ಕೈಸೇರಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಉಪಚುನಾವಣೆ ಫಲಿತಾಂಶದ ಕುರಿತಂತೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಭಿನ್ನ, ಭಿನ್ನ ವರದಿ ನೀಡಿದೆ ಎಂದು ವರದಿ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಕಣವಾದ ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಬಿಜೆಪಿ ಪಕ್ಷವೇ ಗೆಲ್ಲಲಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ.
ಅದೇ ರೀತಿ ನಂಜನಗೂಡಿನಲ್ಲಿ ಕಾಂಗ್ರೆಸ್ ಪಕ್ಷ 4ರಿಂದ 5 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಗುಂಡ್ಲುಪೇಟೆಯಲ್ಲೂ ಕೈ ಜಯಗಳಿಸಲಿದೆ ಎಂದು ವರದಿ ನೀಡಿದೆ.
ಮತ್ತೊಂದೆಡೆ ಸಂಜೆ ದೈನಿಕದ ವರದಿಯೊಂದರ ಪ್ರಕಾರ, ನಂಜನಗೂಡು, ಗುಂಡ್ಲುಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ. ಗುಂಡ್ಲುಪೇಟೆಯಲ್ಲಿ ಗೀತಾಮಹಾದೇವ ಪ್ರಸಾದ್ ಅವರಿಗೆ ಅನುಕಂಪದ ಅಲೆ ಮೇಲೆ ಗೆಲುವು ಕಷ್ಟವಾಗಲಿದೆ. ನಂಜನಗೂಡಿನಲ್ಲಿಯೂ ಶ್ರೀನಿವಾಸ್ ಪ್ರಸಾದ್ ಅವರು ಜಯ ಸಾಧಿಸಲಿದ್ದಾರೆ. ತುಂಬಾ ಕಡಿಮೆ ಅಂತರದಲ್ಲಿ ಗೆಲುವು ಸಾಧ್ಯ ಎಂದು ವರದಿ ವಿವರಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆ ವರದಿ ಬೇರೆ, ಬೇರೆಯಾಗಿದ್ದು, ಏ.13ರಂದು ಹೊರಬೀಳಲಿರುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.