Advertisement

ರಾಜ್ಯ ಬಜೆಟ್: ಅಗ್ನಿಶಾಮಕ ದಳಕ್ಕೆ ಹೈಟೆಕ್‌ ಸ್ಪರ್ಶ

06:36 PM Feb 17, 2023 | Team Udayavani |

ಬೆಂಗಳೂರು: ಬೆಂಕಿ ಅನಾಹುತ ಸಂಭವಿಸಿದಾಗ ಆಪ್ತಮಿತ್ರರಂತೆ ಧಾವಿಸಿ, ಜನರ ಪ್ರಾಣ-ಆಸ್ತಿಪಾಸ್ತಿ ಹಾನಿ ತಪ್ಪಿಸುವಂಥ ಅಗ್ನಿಶಾಮಕ ದಳಕ್ಕೆ ಹೈಟೆಕ್‌ ಸ್ಪರ್ಶ ನೀಡುವ ಕೆಲಸವನ್ನು ಸರ್ಕಾರ ಮುಂದುವರಿಸಿದೆ.

Advertisement

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕೆ-ಸೇಫ್-2 ಯೋಜನೆ ಅಡಿ ಕಳೆದ ಮೂರು ವರ್ಷಗಳಲ್ಲಿ 125 ಕೋಟಿ ರೂ. ಒದಗಿಸಲಾಗಿದೆ.

ರಾಜ್ಯದಲ್ಲಿ ಪ್ರಥಮ ಬಾರಿಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಯಲು ಹಾಗೂ ರಕ್ಷಣಾ ಕಾರ್ಯ ನಿರ್ವಹಿಸಲು 90 ಮೀಟರ್‌ ಎತ್ತರ ತಲುಪಬಲ್ಲ “ಏರಿಯಲ್‌ ಲ್ಯಾಡರ್‌ ಫ್ಲಾಟ್‌ಫಾರಂ ವಾಹನ’ ಖರೀದಿಸಲಾಗಿದೆ. ಈ ಕ್ರಮಗಳಿಂದ ಪ್ರಸ್ತುತ ಸಾಲಿನಲ್ಲಿ ಅಗ್ನಿಶಾಮಕ ಇಲಾಖೆಯಿಂದ 3,521 ಮಾನವ ಜೀವ ಹಾಗೂ 794.6 ಕೋಟಿ ರೂ. ಮೊತ್ತದ ಆಸ್ತಿ ಪಾಸ್ತಿ ರಕ್ಷಣೆ ಮಾಡಲು ಸಾಧ್ಯವಾಗಿದೆ.

ಈ ಬಾರಿ ಈ ಯೋಜನೆಗೆ 100 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಇನ್ನು ದಾವಣಗೆರೆ ನಗರದಲ್ಲಿ ಹೊಸ ಎಸ್‌ಡಿಆರ್‌ಎಫ್ ಕಂಪನಿ ಮಂಜೂರು ಮಾಡಲಾಗಿದೆ. ರಾಜ್ಯದಲ್ಲಿನ ಎಸ್‌ಡಿಆರ್‌ಎಫ್ ಪಡೆಗಳಿಗೆ 30 ಕೋಟಿ ರೂ. ಮೊತ್ತದ ಶೋಧನಾ ಮತ್ತು ರಕ್ಷಣಾ ಉಪಕರಣಗಳನ್ನು ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next