Advertisement

ಗಣಿನಾಡಿನ ಬೆಟ್ಟದಷ್ಟು ನಿರೀಕ್ಷೆ ಈಡೇರುವುದೇ?

02:19 PM Mar 04, 2022 | Team Udayavani |

ಬಳ್ಳಾರಿ: ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮಾ.4ರಂದು ಮಂಡಿಸಲಿರುವಚೊಚ್ಚಲ ಬಜೆಟ್‌ ಮೇಲೆ ಗಣಿನಾಡು ಬಳ್ಳಾರಿ,ವಿಜಯನಗರ ಜಿಲ್ಲೆಗಳ ಜನರು ಹಲವು ನಿರೀಕ್ಷೆಗಳನ್ನುಹೊಂದಿದ್ದು, ದಶಕದ ಬೇಡಿಕೆ “ಕೃಷಿ ಪದವಿ ಕಾಲೇಜು’,ಕೆಂಪುಚಿಲ್ಲಿ ಮಾರುಕಟ್ಟೆ, ವಿಮಾನ ನಿಲ್ದಾಣ, ತಂಗಭದ್ರಾಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣಸೇರಿ ಇನ್ನಿತರೆ ಹಲವು ಬೇಡಿಕೆಗಳಿದ್ದು, ಯಾವ್ಯಾವುಸಿಗಲಿದೆ ಎಂಬ ಕುತೂಹಲ ಕಾಡುತ್ತಿದೆ.

Advertisement

ಗಣಿನಾಡು ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ವಿಜ್ಞಾನಕೇಂದ್ರದಲ್ಲಿ “ಕೃಷಿ ಪದವಿ ಕಾಲೇಜು’ ಸ್ಥಾಪಿಸಬೇಕೆಂಬಬೇಡಿಕೆ ಸುಮಾರು ಒಂದು ದಶಕದಿಂದ ಕೇಳಿಬರುತ್ತಿದೆ.ಈ ಕುರಿತು ರಾಜ್ಯ ಸರ್ಕಾರವೇ ರಚಿಸಿದ್ದ ಬಿಸಿಲಯ್ಯಸಮಿತಿಯು ನೀಡಿರುವ ವರದಿಯಲ್ಲೂ ಕೃಷಿ ಪದವಿಕಾಲೇಜು ಸ್ಥಾಪಿಸುವಂತೆ ಶಿಫಾರಸ್ಸು ಮಾಡಿದೆ.ಆದರೆ, ಪಕ್ಕದ ಗಂಗಾವತಿಯಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲದೇ ಭತ್ತ ಸಂಶೋಧನಾ ಕೇಂದ್ರದಲ್ಲಿ ಕೃಷಿಪದವಿ ಕಾಲೇಜನ್ನು ಆರಂಭಿಸಿರುವ ರಾಜ್ಯ ಸರ್ಕಾರ,ಶತಮಾನದ ಹಿನ್ನೆಲೆಯುಳ್ಳ ಹಗರಿ ಕೃಷಿ ವಿಜ್ಞಾನಕೇಂದ್ರದಲ್ಲಿ ಕೃಷಿ ಪದವಿ ಕಾಲೇಜನ್ನು ಸ್ಥಾಪಿಸುವಲ್ಲಿಮೀನಾಮೇಷ ಎಣಿಸುತ್ತಿದೆ.

ಈ ಕುರಿತು ಪ್ರಗತಿಪರಚಿಂತಕ ಸಿರಿಗೇರಿ ಪನ್ನಾರಾಜ್‌ ಅವರು ಹೋರಾಟನಡೆಸಿ, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕೃಷಿ ಸಚಿವರು,ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮನವಿಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿಂದಿನಂತೆಈ ಬಜೆಟ್‌ನಲ್ಲೂ ಜಿಲ್ಲೆಯ ಜನರು ಕೃಷಿ ಕಾಲೇಜುಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next