Advertisement
ಇದನ್ನೂ ಓದಿ:ಗಂಗಾವತಿ: ನಗರಸಭೆ ಉಪಾಧ್ಯಕ್ಷೆ ಸುಧಾ ಸೋಮನಾಥ ಸದಸ್ಯತ್ವ ಅನರ್ಹತೆಗೆ ತಡೆ ನೀಡಿದ ಹೈಕೋರ್ಟ್
Related Articles
Advertisement
*ಸಿಎಂ ಕಚೇರಿಯಿಂದ ವಿಧಾನಸಭೆಗೆ ಆಗಮಿಸಿದ ಬೊಮ್ಮಾಯಿ. ವಿಧಾನಸೌಧಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ.
*2ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿಎಂ ಬೊಮ್ಮಾಯಿ. ಈ ಬಜೆಟ್ ಉತ್ತಮ ಬದುಕಿನ ಭರವಸೆ. ಈ ಬಜೆಟ್ ಮುಂದಿನ 25 ವರ್ಷದ ದೂರದೃಷ್ಟಿ ಹೊಂದಿದೆ.
ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದ ಸಿದ್ದರಾಮಯ್ಯನವರು ಗಮನಿಸಿದ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್ ಜನರ ಕಿವಿ ಮೇಲೆ ಹೂ ಇಟ್ಟಿದೆ ಎಂದು ಟಾಂಗ್ ನೀಡಿದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನೀವು ಇಡೀ ಕರ್ನಾಟಕದ 7 ಕೋಟಿ ಜನರ ಕಿವಿ ಮೇಲೆ ಹೂ ಇಡಲು ಹೊರಟಿದ್ದೀರಿ..ಎಂದಾಗ ಸದನದಲ್ಲಿ ಆಡಳಿತಾರೂಢ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ..ಕೋಲಾಹಲ ನಡೆಯಿತು. ಏತನ್ಮಧ್ಯೆ ಸ್ಪೀಕರ್ ಬಜೆಟ್ ಮಂಡನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.
*ಬಜೆಟ್ ನಲ್ಲಿ ರೈತರಿಗೆ ಭರಪೂರ ಕೊಡುಗೆ. ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂಪಾಯಿ ಸಾಲ ಘೋಷಣೆ. 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 5 ಲಕ್ಷ ರೂ. ಸಾಲ ನೀಡಲಾಗುವುದು.