Advertisement

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ  

06:00 AM Mar 08, 2018 | Team Udayavani |

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2016- 17ನೇ ಸಾಲಿನ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದೆ. ಅಕಾಡೆಮಿ ಅಧ್ಯಕ್ಷ ಕರಂಬಾರ್‌ ಮಹಮ್ಮದ್‌ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗೌರವ ಪ್ರಶಸ್ತಿಗೆ ಸಾಹಿತ್ಯ, ಸಂಶೋಧನೆ ವಿಭಾಗದಲ್ಲಿ ಹಿರಿಯ ಸಾಹಿತಿ ಫಕೀರ್‌ ಮೊಹಮ್ಮದ್‌ ಕಟಾ³ಡಿ, ಜಾನಪದ ಕ್ಷೇತ್ರದಲ್ಲಿ ಅಬೂಬಕ್ಕರ್‌ ಮಣ್ಣಗುಂಡಿ ಮತ್ತು ಬ್ಯಾರಿ ಕಲೆ ವಿಭಾಗದಲ್ಲಿ ಅಬೂಬಕ್ಕರ್‌ ಬಡೂರು ಅವರನ್ನು ಆಯ್ಕೆ ಮಾಡಲಾಗಿದೆ.

Advertisement

2017ನೇ ಸಾಲಿನಲ್ಲಿ ಗೌರವ ಪ್ರಶಸ್ತಿಗೆ ಸಾಹಿತ್ಯ, ಸಂಶೋಧನೆ ವಿಭಾಗದಲ್ಲಿ ಸಾಹಿತಿ, ಪತ್ರಕರ್ತ, ಸಂಘಟಕ ಉಮರ್‌ ಯು.ಎಚ್‌. ಅವರನ್ನು ಆಯ್ಕೆ ಮಾಡಲಾಗಿದೆ. ಬ್ಯಾರಿ ಕಲೆ ವಿಭಾಗದಲ್ಲಿ ಅಝೀಝ್ ಬೈಕಂಪಾಡಿ ಮತ್ತು ಜಾನಪದ ವಿಭಾಗದಲ್ಲಿ ಬಿ.ಎಂ. ಹಸೈನಾರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಮಾ.13ರಂದು ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಿನ ಮೂಡಿಗೆರೆಯ ರೈತ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಚಿವ ರಮಾನಾಥ ರೈ ಸಮಾರಂಭ ಉದ್ಘಾಟಿಸುವರು. ಸಚಿವರಾದ ಯು.ಟಿ. ಖಾದರ್‌ ಮತ್ತು ರೋಶನ್‌ ಬೇಗ್‌ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿಯು ತಲಾ 50,000 ರೂ. ನಗದು ಹಾಗೂ ಸ್ಮರಣಿಕೆ, ಸಮ್ಮಾನ ಪತ್ರಗಳನ್ನು ಒಳಗೊಂಡಿದೆ. ಬೆಳಗ್ಗೆ ಬ್ಯಾರಿ ಗೀತೆ, ಮಧ್ಯಾಹ್ನ 12ರಿಂದ ಬ್ಯಾರಿ ಕವಿಗೋಷ್ಠಿ ನಡೆಯಲಿದೆ ಎಂದರು.

ಇಂದು ವಿಶ್ವ ಮಹಿಳಾ ದಿನ
ಅಕಾಡೆಮಿ ವತಿಯಿಂದ ಮಾ. 8ರಂದು ಬೆಳಗ್ಗೆ 10ರಿಂದ ನಗರದ ಕಂಕನಾಡಿಯ ಟ್ಯಾಲೆಂಟ್‌ ರಿಸರ್ಚ್‌ ಫೌಂಡೇಶನ್‌ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ. ಮುಸ್ಲಿಮ್‌ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫÕನ್‌ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸಂಘದ ಕಾರ್ಯದರ್ಶಿ ರುಕ್ಸಾನಾ, ಪತ್ರಕರ್ತೆ ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ, ಅನುಪಮ ಮಹಿಳಾ ಮಾಸಿಕ ಸಂಪಾದಕಿ ಶಹನಾಝ್, ಫೌಂಡೇಶನ್‌ ಸಲಹೆಗಾರ್ತಿ ಮಮ್ತಾಜ್‌ ಪಕ್ಕಲಡ್ಕ ಭಾಗವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಖೈರುನ್ನೀಸಾ ಸೈಯದ್‌, ಮಫಾಝ ಶರಪುದ್ದೀನ್‌, ಆಯಿಷತ್‌ ರಫೀಝ್ ಅವರನ್ನು ಸಮ್ಮಾನಿಸಲಾಗುವುದು. ಅನಂತರ ಅಕಾಡೆಮಿ ಸದಸ್ಯೆ ಆಯಿಷಾ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದರು.

ಅಕಾಡೆಮಿ ಸದಸ್ಯರಾದ ಬಶೀರ್‌ ಬೈಕಂಪಾಡಿ, ಹುಸೈನ್‌ ಕಾಟಿಪಳ್ಳ, ಬಶೀರ್‌ ಅಹ್ಮದ್‌ ಕಿನ್ಯಾ, ಅಬ್ದುಲ್‌ ರಹ್ಮಾನ್‌, ಮೊಹಮ್ಮದ್‌ ಆರಿಫ್‌ ಪಡುಬಿದ್ರಿ, ರಿಜಿಸ್ಟ್ರಾರ್‌ ಚಂದ್ರಹಾಸ ರೈ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next