ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ಸಭೆ ಗುರುವಾರ ನಡೆದಿದ್ದು, ತಲಾ 10ರೂ. ಮುಖಬೆಲೆಯ 3,34,00,132 ಈಕ್ವಿಟಿ ಷೇರುಗಳನ್ನು ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್, ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್, ಕ್ವಾಂಟ್ ಮ್ಯೂಚುಯಲ್ ಫಂಡ್, ಭಾರ್ತಿ ಆಕ್ಸ ಲೈಫ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ಹಾಗೂ ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್‌ಗಳಿಗೆ (ಪ್ರಸ್ತಾಪಿತ ಹಂಚಿಕೆದಾರರು) ವಿತರಿಸಲು ತೀರ್ಮಾನಿಸಲಾಗಿದೆ.
ಪ್ರತಿ ಈಕ್ವಿಟಿ ಷೇರಿಗೆ 239.52 ರೂ.(ಪ್ರತಿ ಷೇರಿಗೆ 229.52 ರೂ. ಪ್ರೀಮಿಯಂ ಸೇರಿದಂತೆ), ಆದ್ಯತೆಯ ಆಧಾರದ ಮೇಲೆ ಷೇರು ವಿತರಿಸಲು ನಿರ್ಧರಿಸಲಾಗಿದೆ. ಇದರಿಂದ ಒಟ್ಟು
799,99,99,616.64 ರೂ. ಬಂಡವಾಳ ಸಂಗ್ರಹಣೆಯಾಗಲಿದೆ. ಈ ಪ್ರಾಶಸ್ತ್ಯದ ಷೇರು ಹಂಚಿಕೆಗಾಗಿ ಬ್ಯಾಂಕ್ ತನ್ನ ಷೇರುದಾರರಿಂದ ಶೇ 99.79 ಅನುಕೂಲಕರ ಮತಗಳನ್ನು ಪಡೆದುಕೊಂಡಿದೆ.
ಈ ಕುರಿತು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ಮಾತನಾಡಿ, 5 ಪ್ರಮುಖ ಸಾಂಸ್ಥಿಕ ಹೂಡಿಕೆದಾರರಿಗೆ ಆದ್ಯತೆಯ ಆಧಾರದ ಷೇರು ವಿತರಿಸಿ 800 ಕೋಟಿ ರೂ. ಯಶಸ್ವಿ ಬಂಡವಾಳ ಸಂಗ್ರಹಣೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ನಾವು ಸಂತೋಷ ಪಡುತ್ತೇವೆ. ಇದು ಬ್ಯಾಂಕಿನ ಪರಿವರ್ತನೆಯ ಪ್ರಯಾಣದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ನಮ್ಮ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಈ ಬಂಡವಾಳ ಬೆಳವಣಿಗೆಯು ಅನುಕೂಲವಾಗಲಿದೆ. ಈ ಬಂಡವಾಳದ ಒಳಹರಿವು ಬ್ಯಾಂಕಿನ ಪ್ರಯಾಣದ ಪ್ರಮುಖ ಘಟ್ಟವಾಗಿದೆ ಎಂದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಈ ಕಾರ್ಯಕ್ಕೆ ಷೇರುದಾರರು ಅನುಮೋದಿಸಿರುವುದು ಬ್ಯಾಂಕಿನ ಪ್ರಯಾಣದಲ್ಲಿ ಪ್ರಮುಖವಾಗಿದೆ. ಬ್ಯಾಂಕಿನ ಅಭಿವೃದ್ಧಿಯ ಪಯಣವು ಬಂಡವಾಳ ಹೆಚ್ಚಳದಿಂದ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ, ಬ್ಯಾಂಕಿನ ವ್ಯಾಪ್ತಿಯನ್ನು ವಿಸ್ತರಿಸಲು, ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳಲು ಮತ್ತು ಪಾಲುದಾರಿಕೆಗಳನ್ನು ಬೆಂಬಲಿಸಲು,ಹಾಗೂ ಉತ್ತೇಜಿಸಲು ಇದರಿಂದ ನೆರವಾಗಲಿದೆ ಎಂದಿದ್ದಾರೆ.