Advertisement
ಸ್ಥಳೀಯ ಪೊಲೀಸರ ಜತೆಗೆ 250 ಕೆಎಸ್‌ಆರ್‌ಪಿ,105 ಆರ್‌ಎಎಫ್, ಸಿಎಆರ್, ಡಿಎಆರ್ ಹಾಗೂ ಗೃಹ ರಕ್ಷಕ ದಳವನ್ನೂ ನಿಯೋಜಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ತಿಳಿಸಿದ್ದಾರೆ.
Related Articles
ವಾಟಾಳ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ಫಿಲಂ ಚೇಂಬರ್, ಸರಕಾರಿ ನೌಕರರ ಸಂಘ, ಕರ್ನಾಟಕ ತಮಿಳು ಸಂಘಟ ನೆಗಳ ಒಕ್ಕೂಟ, ಕರ್ನಾಟಕ ಜಲ ರಕ್ಷಣ ಸಮಿತಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು ವಕೀಲರ ಸಂಘ, ಕರ್ನಾಟಕ ರಾಜ್ಯ ಹೊಟೇಲ್ ಸಂಘ, ಉತ್ತರ ಕರ್ನಾಟಕ ಸಂಘಟನೆಗಳ ಮಹಾ ಒಕ್ಕೂಟ, ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಹೊಟೇಲ್ ಮಾಲಕರ ಸಂಘ, ಸಾರಿಗೆ ನೌಕರರ ಸಂಘ, ಡಾ| ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕರವೇ ಶಿವರಾಮೇ ಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ದಲಿತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು, ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘ, ಓಲಾ, ಉಬರ್ ಸಂಘ, ಆದರ್ಶ ಆಟೋ ಚಾಲಕರ ಸಂಘ, ಗೂಡ್ಸ್ ವಾಹನ, ಖಾಸಗಿ ವಾಹನ ಮಾಲಕರು, ಲಾರಿ ಮಾಲಕರು ಹಾಗೂ ಚಾಲಕರ ಸಂಘಗಳು, ಖಾಸಗಿ ಶಾಲಾ ವಾಹನ ಚಾಲಕರು, ಕಾವೇರಿ ಹೋರಾಟ ಸಮಿತಿ, ಕನ್ನಡ ಚಳವಳಿ ಕೇಂದ್ರ ಸಮಿತಿ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ, ಕನ್ನಡ ಸೇನೆ, ಜಯ ಕರ್ನಾಟಕ ಸಮರ ಸೇನೆ, ಕರು ನಾಡ ಸೇನೆ, ಖಾಸಗಿ ವಾಹನ ಮಾಲಕರ ಒಕ್ಕೂಟ, ಸ್ವಾಭಿಮಾನಿ ಸೇನೆ, ನಮ್ಮ ಕರುನಾಡು ಯುವ ಸೇನೆ, ಕನ್ನಡ ಸಂಘರ್ಷ ಸಮಿತಿ ಸಹಿತ ನೂರಾರು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
Advertisement
ಚಿತ್ರರಂಗದ ಬೆಂಬಲಕಾವೇರಿಗಾಗಿ ಸೆ.26ರಂದು ನಡೆದ ಬೆಂಗಳೂರು ಬಂದ್ ವೇಳೆ ಕನ್ನಡ ಚಿತ್ರರಂಗ ಅಷ್ಟಾಗಿ ಬೆಂಬಲ ಸೂಚಿಸಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವಂತೆ ಚಲನಚಿತ್ರ ಕಲಾವಿದರಿಗೆ ಮನವಿ ಮಾಡಲಾಗಿದ್ದು, ಫಿಲಂ ಚೇಂಬರ್ ಕೂಡ ಬೆಂಬಲ ಸೂಚಿಸಿರುವುದರಿಂದ ಶುಕ್ರವಾರದ ಪ್ರತಿಭಟನೆಯಲ್ಲಿ ಸಿನೆಮಾ ತಾರೆಯರು ಕೂಡ ಭಾಗವಹಿಸಲಿದ್ದಾರೆ. ಅದು ಚಿತ್ರೀಕರಣ ಹಾಗೂ ಸಿನೆಮಾ ಪ್ರದರ್ಶನ ಇರುವುದಿಲ್ಲ. ಸೆ.29ರಂದು ಪ್ರಾಧಿಕಾರದ ಸಭೆ
ಶುಕ್ರವಾರದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಸಭೆಗೆ ಆನ್‌ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾ ರಿಗಳಿಗೆ ಸೂಚಿಸಲಾಗಿದೆ. ತಮಿಳುನಾಡಿನವರು 11 ಸಾವಿರ ಸಾವಿರ ಕ್ಯುಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿ ಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2 ಸಾವಿರ ಕ್ಯುಸೆಕ್ ನೀರು ಹೋಗುತ್ತಿರಬಹುದು ಎಂದರು. ಬಂದ್‌ಗೆ ಅವಕಾಶವಿಲ್ಲ, ಪ್ರತಿಭಟನೆಗೆ ಅಡ್ಡಿ ಇಲ್ಲ
ಬೆಂಗಳೂರು: ಕಾವೇರಿ ವಿಷಯದಲ್ಲಿ ಶುಕ್ರವಾರ ಪ್ರತಿಭಟಿಸಲು ಯಾರಿಗೂ ಅಡ್ಡಿ ಮಾಡುವುದಿಲ್ಲ. ಆದರೆ ಬಂದ್‌ಗೆ ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಬಂದ್ ವೇಳೆ ಸಾರ್ವಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ, ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿದ್ದು, ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ. ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಅವರು ಮನವಿ ಮಾಡಿದರು. ಹೆದ್ದಾರಿ ತಡೆ; ಸಿಎಂ ನಿವಾಸಕ್ಕೆ ಮುತ್ತಿಗೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣ ಸಮಿತಿ ಸೆ.29ರಂದು ರಾಜ್ಯವ್ಯಾಪಿ ರಾಷ್ಟ್ರೀಯ ಮತ್ತು ರಾಜ ಹೆದ್ದಾರಿ ಬಂದ್‌ಗೆ ಕರೆ ನೀಡಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಹೆದ್ದಾರಿ ಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಮುಖ್ಯ ಮಂತ್ರಿಗಳ ಬೆಂಗಳೂರು ನಿವಾಸಕ್ಕೂ ನಿವಾಸಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಜಲ ಸಂರಕ್ಷಣ ಸಮಿತಿ ಸಂಯೋಜಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಸರಕಾರಿ ಸೇವೆಗಳಲ್ಲಿ ವ್ಯತ್ಯಯ?
ಬಂದ್‌ಗೆ ಸರಕಾರಿ ನೌಕರರ ಸಂಘ ಬೆಂಬಲ ಸೂಚಿಸಿದ್ದು, ಶುಕ್ರವಾರ ಸರಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ನಿರಂತರ ರಜೆಯಿಂದಾಗಿ ಸರಕಾರಿ ಸೇವೆ ವಾರಪೂರ್ತಿ ವ್ಯತ್ಯಯ ಆದಂತಾಗಲಿದೆ. ನ್ಯಾಯಾಲಯ ಕೂಡ ಬಂದ್ ಮಾಡ ಬಾರದು ಎಂದು ಹೇಳಿದೆ. ಆದರೆ ಪ್ರತಿಭಟಿಸಬಹುದು. ಪ್ರತಿಭಟನೆ ಅವರ ವಿಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್‌ಗೆ ಬೆಂಬಲ ಕೊಟ್ಟಿವೆ.
-ಡಾ| ಜಿ. ಪರಮೇಶ್ವರ್,
ಗೃಹ ಸಚಿವರು. ಕಾವೇರಿ ನದಿ ನೀರು ಬಗ್ಗೆ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಬೆಂಬಲ ಇದೆ. ನಮ್ಮ ಒಕ್ಕೂಟವು ಈ ಹಿಂದೆ ಹಲವು ಬಾರಿ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸಮಸ್ಯೆ ಉಂಟಾದಾಗಲೂ ಕನ್ನಡಪರ ಸಂಘಟನೆಗಳ ಜತೆಗೂಡಿ ಹೋರಾಟ ಮಾಡಿದೆ. ಈಗಲೂ ನಮ್ಮ ಬೆಂಬಲವಿದೆ.
-ಎಂ. ಫ್ರಾನ್ಸಿಸ್, ಅಧ್ಯಕ್ಷ, ಕರ್ನಾಟಕ ತಮಿಳು ಸಂಘಟನೆಗಳ ಒಕ್ಕೂಟ