Advertisement

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ

03:56 PM Sep 28, 2020 | keerthan |

ಧಾರವಾಡ: ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಗರದ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಜತೆಗೆ ರೈತ ಸೇನಾ ಕರ್ನಾಟಕ, ಕೆಆರ್‌ಎಸ್ ಮತ್ತು ಗ್ರೀನ್ ಬ್ರಿಗೇಡ್, ದಲಾಲ್ ಮತ್ತು ವರ್ತಕರ ಸಂಘ, ಸಮಾಜ ಪರಿವರ್ತನ ಸಮುದಾಯ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಹೀಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಇದಲ್ಲದೇ ಬಂದ್ ಯಶಸ್ವಿ ಮಾಡಲು ಸಭೆ ಕೈಗೊಂಡು ರೂಪರೇಷೆ ಸಿದ್ದಪಡಿಸಿರುವ ಸಂಘಟನೆಗಳು, ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಆರಂಭಿಸಿವೆ.

ಬಹುತೇಕ ಎಲ್ಲಾ ಸಂಘಟನೆಗಳೂ ಜುಬಿಲಿ ವೃತ್ತದಲ್ಲಿ ಸಂಘಟನೆಗೊಂಡಿದ್ದು ಅಲ್ಲಿಯೇ ಧರಣಿ ರಸ್ತೆ ತಡೆ ನಡೆಸಿವೆ. ರೈತರು ಚಕ್ಕಡಿಯೊಂದಿಗೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ: ಮಂಡ್ಯ: ಸಂಘಟನೆಗಳಿಂದ ಪ್ರತಿಭಟನೆ, ಬಸ್ ಓಡಾಟ ಇದ್ದರೂ ಜನಸಂಚಾರ ವಿರಳ

Advertisement

ನಗರದ ಆಸ್ಪತ್ರೆ, ಔಷಧ ಮಳಿಗೆ, ಹಾಲು, ಹಣ್ಣು, ತರಕಾರಿ ಹೋಟೆಲ್‌ಗಳು ಸೇರಿ ಅಗತ್ಯ ವಸ್ತುಗಳ ಸೇವೆಗೆ ಯಾವುದೇ ಅಡಚಣೆಯಾಗಿಲ್ಲ. ಆದರೆ ನಗರ ಸಾರಿಗೆ, ಬಿಅರ್ಟಿಎಸ್, ಅಂತರ್ ಜಿಲ್ಲಾ ಬಸ್ ಸಂಚಾರ ಸದ್ಯ ಸ್ಥಗಿತಗೊಂಡಿದೆ. ಒಟ್ಟಾರೆ ಬಂದ್ ಗೆ ಉತ್ತಮ ‌ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next