Advertisement
ಆಡಳಿತ – ವಿಪಕ್ಷ ನಾಯಕರ ನಡುವೆ ಸುಗಮ ಕಲಾಪಕ್ಕಾಗಿ ಸಭಾಪತಿ ಮತ್ತು ಸ್ಪೀಕರ್ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಎರಡೂ ಕಡೆ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ, ಗಲಾಟೆ-ಗದ್ದಲದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಂತಾಯಿತು.
Related Articles
ವಿಧಾನಪರಿಷತ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕಲಾಪ ಆರಂಭವಾಗು ತ್ತಿದ್ದಂತೆ ಹಿರಿಯ ಚಿತ್ರನಟ ರಾಜೇಶ್ ಅವರಿಗೆ ಸಂತಾಪ ಸೂಚಿಸಿದ ಬಳಿಕ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿ ದರು. ಗದ್ದಲದ ನಡುವೆಯೇ ಸಭಾಪತಿ ಪ್ರಶ್ನೋತ್ತರ ಕೈಗೆತ್ತಿಕೊಂಡರು. ಆದರೆ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಪ್ರತಿಯಾಗಿ ಬಿಜೆಪಿ ಸದಸ್ಯರೂ ಘೋಷಣೆ ಕೂಗಿದರು. ಇದರ ನಡುವೆ ಒಂದೆರಡು ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದರು.
Advertisement
ಬಳಿಕವೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಅಪರಾಹ್ನಕ್ಕೆ ಮುಂದೂಡಲಾಯಿತು. ಅನಂತರವೂ ಸ್ವಲ್ಪಕಾಲ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆದು ಮಂಗಳವಾರಕ್ಕೆ ಮುಂದೂಡಲಾಯಿತು. ಎರಡೂ ಕಡೆ ಕಾಂಗ್ರೆಸ್ ಸದಸ್ಯರು ಸೋಮವಾರವೂ ಅಹೋರಾತ್ರಿ ಧರಣಿ ಮುಂದುವರಿಸಿದರು.
ಆರೆಸ್ಸೆಸ್ ವಿರುದ್ಧ ಘೋಷಣೆ: ಸ್ಪೀಕರ್ ಗರಂಪ್ರತಿಭಟನೆ ವೇಳೆ ಆರೆಸ್ಸೆಸ್ ಹೆಸರು ಪ್ರಸ್ತಾವವಾದುದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು. ನಿಮ್ಮ ರಾಜಕೀಯಕ್ಕೆ ಆರೆಸ್ಸೆಸ್ ಹೆಸರು ಯಾಕೆ ಎಳೆದು ತರುತ್ತೀರಿ. ಅದು ಒಂದು ಸೇವಾ ಸಂಘಟನೆ. ಇಲ್ಲಿ ಪದೇ ಪದೆ ಆರೆಸ್ಸೆಸ್ ಹೆಸರು ಪ್ರಸ್ತಾವಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು, “ಕೈಗೊಂಬೆ ಕೈಗೊಂಬೆ ಆರೆಸ್ಸೆಸ್ ಕೈಗೊಂಬೆ’ ಎಂದು ಘೋಷಣೆ ಕೂಗಿದ್ದು, ಸ್ಪೀಕರ್ ಸಿಟ್ಟಿಗೆ ಕಾರಣವಾಯಿತು.