Advertisement

ಬಿಜೆಪಿಯಲ್ಲಿ ಬಿಸಿ; ಅಸಮಾಧಾನ ಶಮನ ಯತ್ನ

06:40 AM Apr 10, 2018 | |

ಬೆಂಗಳೂರು: ಬಿಜೆಪಿ ಮೊದಲ ಹಂತದ 72 ಕ್ಷೇತ್ರಗಳ ಪಟ್ಟ ಹೊರಬೀಳುತ್ತಿದ್ದಂತೆ ಟಿಕೆಟ್‌ ವಂಚಿತರ ಅಸಮಾಧಾನ ಭುಗಿಲೆದ್ದಿದೆ.

Advertisement

ಕಳೆದ ಚುನಾವಣೆಯಲ್ಲಿ ಕೆಜೆಪಿ ಹಾಗೂ ಬಿಎಸ್‌ಆರ್‌ ಪಕ್ಷಗಳಿಂದ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣರಾಗಿ ನಂತರ ಬಿಜೆಪಿ ಸೇರಿದ್ದ ಐವರಿಗೂ ಟಿಕೆಟ್‌ ಕೊಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೆಜೆಪಿ, ಬಿಎಸ್‌ಆರ್‌, ಜೆಡಿಎಸ್‌, ಕಾಂಗ್ರೆಸ್‌ ಸೇರಿ ವಲಸೆ ಬಂದ ಹತ್ತು ಮಂದಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್‌ ಘೋಷಿಸಿರುವುದು ನಿಷ್ಠಾವಂತರು ಹಾಗೂ ಮೂಲ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದೆ.

ಕೆ.ಎಸ್‌. ಈಶ್ವರಪ್ಪ ಅವರಿಗೆ ಟಿಕೆಟ್‌ ನೀಡಲಾಗಿರುವ ಶಿವಮೊಗ್ಗ, ವಿ.ಸೋಮಣ್ಣ ಅವರು ಸ್ಪರ್ಧಿಸಲಿರುವ ಗೋವಿಂದರಾಜನಗರ, ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಸೇರಿ ಬೈಲಹೊಂಗಲ, ಮೊಳಕಾಳೂ¾ರು, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎನ್‌.ಆರ್‌.ರಮೇಶ್‌ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸಚಿವ ಅನಂತಕುಮಾರ್‌ ಅವರೇ ನನಗೆ ಟಿಕೆಟ್‌ ತಪ್ಪಲು ಕಾರಣ. 48 ಗಂಟೆ ಕಾಲಾವಕಾಶ ಕೊಡುತ್ತೇನೆ. ಪಕ್ಷದ ನಾಯಕರು ತೀರ್ಮಾನ ಬದಲಿಸಲಿ ಎಂದು ಗಡುವು ಸಹ ನೀಡಿದ್ದಾರೆ. ಪಕ್ಷದ ವಕ್ತಾರ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ.

ಮತ್ತೂಂದೆಡೆ ಬೈಲಹೊಂಗಲದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜಗದೀಶ್‌ ಮೆಟಗುಡ್ಡ ಅವರಿಗೆ ಟಿಕೆಟ್‌ ತಪ್ಪಿದ್ದು
ಕೆಜೆಪಿಯಿಂದ ಬಂದಿದ್ದ ವಿಶ್ವನಾಥ ಪಾಟೀಲ್‌ಗೆ ಟಿಕೆಟ್‌ ನೀಡಿರುವುದು ಮೆಟಗುಡ್ಡ ಬೆಂಬಲಿಗರನ್ನು ಕೆರಳಿಸಿದೆ. ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಡೆ ತೀರ್ಮಾನಿಸಿರುವುದಾಗಿ ಮೆಟಗುಡ್ಡ ತಿಳಿಸಿದ್ದಾರೆ.

Advertisement

ಶ್ರೀರಾಮುಲು ಅವರಿಗೆ ಮೊಳಕಾಳೂ¾ರು ಕ್ಷೇತ್ರಕ್ಕೆ ಟಿಕೆಟ್‌ ನೀಡಿರುವುದರಿಂದ ಆ ಕ್ಷೇತ್ರದ ಹಾಲಿ ಶಾಸಕ ಬಿಎಸ್‌ಆರ್‌ನಿಂದ ರಾಮುಲು ಜತೆಗೆ ಬಿಜೆಪಿಗೆ ಬಂದಿದ್ದ ತಿಪ್ಪೇಸ್ವಾಮಿ ಬೇಸರಗೊಂಡಿದ್ದು, ಸೋಮವಾರ ುಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ನಡುವೆ, ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಗೆ ಗೈರು ಹಾಜರಾಗುವ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಹಾಗೂ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ರುದ್ರೇಗೌಡರು ಅತೃಪ್ತಿ ಹೊರಹಾಕಿದ್ದಾರೆ. ವಿಜಯಪುರದಲ್ಲಿ ಅಪ್ಪು ಪಟ್ಟಣಶೆಟ್ಟಿ,ಮುದ್ದೆಬಿಹಾಳದಲ್ಲಿ ಮಂಗಳಾದೇವಿ ಸಹ ಟಿಕೆಟ್‌ ಸಿಗದ ಕಾರಣ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಶಿಗ್ಗಾಂವ್‌ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ನೀಡಿರುವುದು ಮತ್ತೋರ್ವ ಟಿಕೆಟ್‌ ಆಕಾಂಕ್ಷಿ ಸೋಮಣ್ಣ ಬೇವಿನಮರದ ಅವರಲ್ಲಿ ಆಕ್ರೋಶ ಮೂಡಿಸಿದೆ. ವಿರಾಜಪೇಟೆ ಕ್ಷೇತ್ರಕ್ಕೆ ಬೋಪಯ್ಯ ಅವರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್‌ ಸಿಗದ ಕಾರಣ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಬೆಂಗಳೂರಿಗೆ ಬಂದು ಯಡಿಯೂರಪ್ಪ, ಬಿ.ಎಲ್‌.ಸಂತೋಷ್‌ ಸೇರಿದಂತೆ ರಾಜ್ಯ ನಾಯಕರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ, ಬಸವನಗುಡಿಯಲ್ಲಿ ಆಕಾಂಕ್ಷಿಯಾಗಿದ್ದ ಕಟ್ಟೆ ಸತ್ಯನಾರಾಯಣ, ಮಲ್ಲೇಶ್ವರದ ಪ್ರಕಾಶ್‌, ರಾಜರಾಜೇಶ್ವರಿ ನಗರದ ರಾಮಚಂದ್ರ ಸಹ ಟಿಕೆಟ್‌ ಸಿಗದ ಬಗ್ಗೆ ನಾಯಕರ ಮುಂದೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಹಂತದಲ್ಲಿ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಶ್ರೀರಾಮುಲು ಅವರಿಗೆ ವಿಶೇಷ ಕಾರಣಕ್ಕೆ ಟಿಕೆಟ್‌ ನೀಡಲಾಗಿದೆ. ಉಳಿದಂತೆ ಬೇರೆ ಯಾವ ಸಂಸದರಿಗೂ ಟಿಕೆಟ್‌ ಇಲ್ಲ. ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ, 
ಅಸಮಾಧಾನಗೊಂಡವರನ್ನು ಕರೆಸಿ ಮಾತನಾಡಲಾಗುವುದು. ಏ.11 ರಂದು 65 ರಿಂದ 70 ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಲಿದೆ.

–  ಬಿ.ಎಸ್‌.ಯಡಿಯೂರಪ್ಪ ,ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next