Advertisement

ಮೊದಲ ದಿನ 35 ನಾಮಪತ್ರ

06:15 AM Apr 18, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಮಂಗಳವಾರ ಚಾಮುಂಡೇಶ್ವರಿ, ವರುಣಾ ಸೇರಿದಂತೆ  26 ಕ್ಷೇತ್ರಗಳಿಂದ 32 ಅಭ್ಯರ್ಥಿಗಳು 35 ನಾಮಪತ್ರ ಸಲ್ಲಿಸಿದ್ದಾರೆ.

Advertisement

ಬೆಳಗಾವಿಯ ಸವದತ್ತಿ  ಎಲ್ಲಮ್ಮ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ವಿಶ್ವನಾಥ್‌ ಚಂದ್ರಶೇಖರ ಮಾಮನಿ ನಾಮಪತ್ರ ಸಲ್ಲಿಸಿದ್ದಾರೆ.

ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿರುವ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂದು ಟಿ.ಬಸವರಾಜ್‌ ನಾಮಪತ್ರ ಸಲ್ಲಿಸಿದ್ದಾರೆ. ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಶಿವಯಾದವ್‌ ನಾಮಪತ್ರ ಸಲ್ಲಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಡಾ.ಕೆ.ಪದ್ಮಾರಾಜ್‌ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳವಾರ ಹಾಗೂ ಅಮಾವಾಸ್ಯೆ ಮರುದಿನ ಎಂಬ ಕಾರಣಕ್ಕೆ ಹೆಚ್ಚಿನವರು ನಾಮಪತ್ರ ಸಲ್ಲಿಸಿಲ್ಲ. ಬುಧವಾರ ಅಕ್ಷಯ ತೃತೀಯ ಅಂಗವಾಗಿ ನಾಮಪತ್ರಗಳ ಮಹಾಪೂರ ಹರಿದು ಬರುವ ಸಾಧ್ಯತೆಯಿದೆ.

ಮೊದಲ ದಿನ ನಾಮಪತ್ರ ಸಲ್ಲಿಕೆ ವಿವರ
– ರಾಯಬಾಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಭಾಕರ ಹನುಮಂತ ಗಗ್ಗರಗಿ,
– ಬೈಲಹೊಂಗಲದಿಂದ  ಪಕ್ಷೇತರ ಅಭ್ಯರ್ಥಿಯಾಗಿ ಶಂಕರ ಭರಮಪ್ಪ ಮಾಡಲಗಿ,
– ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಬಿಜೆಪಿಯ ವಿಶ್ವನಾಥ ಚಂದ್ರಶೇಖರ ಮಾಮನಿ
– ತೆರದಾಳದಿಂದ ನಮ್ಮ ಕಾಂಗ್ರೆಸ್‌ ಪಕ್ಷದ ಆರ್‌.ವೀರೇಶ್‌ ಪ್ರಸಾದ್‌,
– ವಿಜಯಪುರ ನಗರದಿಂದ ಸ್ವತಂತ್ರ ಅಭ್ಯರ್ಥಿ ಕಲ್ಲಪ್ಪ ಆರ್‌. ಕಡೆಚೂರು
– ನಾಗಠಾಣದಿಂದ ಪಕ್ಷೇತರ ಅಭ್ಯರ್ಥಿ ಕಟಕದೊಂಡ ದೀಪಕ್‌ ಗಂಗಾರಾಂ
– ಸಿಂಧಗಿಯಿಂದ ಪಕ್ಷೇತರ ಅಭ್ಯರ್ಥಿ ಮುರಗೆಪ್ಪಗೌಡ ಸಿದ್ದನಗೌಡ ರಡ್ಡೆವಾಡಗಿ,
– ಲಿಂಗಸುಗೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಶಿವಪುತ್ರ ಚಲವಾದಿ
– ಬ್ಯಾಡಗಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ರುದ್ರಯ್ಯ ಅಂದಾನಯ್ಯ ಸಾಲಿಮಠ
– ಹಗರಿಬೊಮ್ಮನಹಳಿಯಿಂದ ಸಿಪಿಎಂ ಅಭ್ಯರ್ಥಿ ಮಲ್ಲಮ್ಮ
– ಬಳ್ಳಾರಿ ನಗರದಿಂದ ಸ್ವತಂತ್ರ ಅಭ್ಯರ್ಥಿ ಪಿ. ನಾರಾಯಣಮೂರ್ತಿ
– ಸಂಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ರಾಮಾಂಜನಪ್ಪ
– ಚಳ್ಳಕೆರೆುಂದ ಪಕ್ಷೇತರ ಅಭ್ಯರ್ಥಿ ಕೆ.ಪಿ ಭೂತಯ್ಯ
– ಚಿತ್ರದುರ್ಗದಿಂದ ಕಾಂಗ್ರೆಸ್‌ ನ ಶಿವಯಾದವ್‌
– ತುರವೆಕೆರೆಯಿಂದ ಎಂ.ಜಿ. ರಮೇಶ್‌
– ಗೌರಿಬಿದನೂರಿನಿಂದ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷದ .ಜಿ. ಸಚ್ಚಿದಾನಂದಮೂರ್ತಿ
– ಬಾಗೆಪಲ್ಲಿಯಿಂದ ಸ್ವತಂತ್ರ ಅಭ್ಯರ್ಥಿ ಎಚ್‌. ಈಶ್ವರಪ್ಪ
– ಶಿಡ್ಲಘಟ್ಟದಿಂದ ಸ್ವತಂತ್ರ ಅಭ್ಯರ್ಥಿ ಅಂಜನಪ್ಪ
– ಮುಳಬಾಗಿಲಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮಾರಪ್ಪ
– ಕೆ.ಅರ್‌. ಪುರದಿಂದ ಸಿಪಿಎಂನ ಎಚ್‌.ಎನ್‌. ಗೋಪಾಲಗೌಡ
– ಶಾಂತಿನಗರದಿಂದ ಆಮ್‌ ಆದ್ಮಿ ಪಕ್ಷದಿಂದ ರೇಣುಕ ವಿಶ್ವನಾಥನ್‌, ಸ್ವತಂತ್ರ ಅಭ್ಯರ್ಥಿ ಎ.ಎ. ಸಂತೋಷ್‌
– ಗೋವಿಂದರಾಜನಗರದಿಂದ ಪಕ್ಷೇತರ ಅಭ್ಯರ್ಥಿ ಎಂ. ಉಮಾಶಂಕರ್‌
– ಜಯನಗರದಿಂದ ಕರುನಾಡ ಪಾರ್ಟಿಯಿಂದ ಬಿ.ಪಿ ಬುದ್ಯ
– ಬೊಮ್ಮನಹಳಿಯಿಂದ ಸ್ವತಂತ್ರ ಅಭ್ಯರ್ಥಿ ಡಾ. ಪಿ. ಅನಿಲಕುಮಾರ್‌
– ರಾಮನಗರದಿಂದ ಸ್ವತಂತ್ರ ಅಭ್ಯರ್ಥಿ ಜೆ. ಮಂಜುನಾಥ್‌
– ಶ್ರೀರಂಗಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿ ಮೋಹನ್‌ ಕುಮಾರ್‌
– ಬಂಟ್ವಾಳದಿಂದ ಜೆಡಿಯು ಅಭ್ಯರ್ಥಿ ಬಾಲಕಷ್ಣ ಪೂಜಾರಿ
– ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಡಾ.ಕೆ.ಪದ್ಮಾರಾಜ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next