Advertisement

ಕರಾವಳಿಯಲ್ಲಿ ಕಮಲ ಕಾರ್ಯಕರ್ತರ ವಿಜಯೋತ್ಸವ

07:30 AM May 16, 2018 | Team Udayavani |

ಸಾಕಷ್ಟು ಕುತೂಹಲ ಹುಟ್ಟಿಸಿ, ಕರ್ನಾಟಕ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದು, ಮಂಗಳವಾರ ನಡೆದ ಮತ ಎಣಿಕೆ ಪ್ರಕ್ರಿಯೆ ಅಭ್ಯರ್ಥಿಗಳಿಗೆ, ಬೆಂಬಲಿಗರಿಗೆ ಪರೀಕ್ಷೆಯೇ ಎಂಬಂತೆ ಭಾಸವಾಯಿತು. ಬಹಳ ಪ್ರಬಲ ಪೈಪೋಟಿ ಇದ್ದ ಬೆಳ್ತಂಗಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಮಲಕ್ಕೆ ಜನಮತ ಸಾಬೀತಾದಂತೆ ಕಾರ್ಯಕರ್ತರ ಹರ್ಷ ಮೇರೆ ಮೀರಿತು. ಉಭಯ ತಾಲೂಕಿನಾದ್ಯಂತ ಕಾರ್ಯಕರ್ತರು, ವಿಜೇತರ ಅಭಿಮಾನಿಗಳು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿದರು. ಈ ಕುರಿತ ಕೆಲ ಚಿತ್ರಗಳು ಇಲ್ಲಿವೆ.

Advertisement


1. ಬಂಟ್ವಾಳ: ಬಿ.ಸಿ. ರೋಡ್‌ ಬಿಜೆಪಿ ಕಚೇರಿ ಎದುರು ರಾಜೇಶ್‌ ನಾೖಕ್‌ ಉಳ್ಳಿಪಾಡಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ  ಮಾತನಾಡಿದರು.


2. ಪುಂಜಾಲಕಟ್ಟೆ; ಬಿಜೆಪಿ ಕಾರ್ಯಕರ್ತರು ಬೈಕ್‌ ಜಾಥಾ ನಡೆಸಿ ವಿಜಯೋತ್ಸವ ಆಚರಿಸಿದರು.


3. ಬೆಳ್ತಂಗಡಿ: ಬಿಜೆಪಿ ಚುನಾವಣೆ ಕಚೇರಿ ಎದುರು ಕಾರ್ಯಕರ್ತರಿಂದ ಸಂಭ್ರಮ.


4. ವಿಟ್ಲ : ವಿಟ್ಲದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ನಡೆಸಿದರು.

Advertisement


5. ಪುಂಜಾಲಕಟ್ಟೆ : ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.


6. ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ.  


7. ವೇಣೂರು: ಪೂಂಜ ಹೆತ್ತವರಾದ ಮುತ್ತಣ್ಣ  ಪೂಂಜ, ನಳಿನಿ ಎಂ. ಪೂಂಜ ದಂಪತಿ ಶ್ರೀ ನಂದಿಕೇಶ್ವರ ಕ್ಷೇತ್ರದಲ್ಲಿ
ಪೂಜೆ ಸಲ್ಲಿಸಿದರು.


8. ಮಡಂತ್ಯಾರು: ಸಿಹಿ ಹಂಚಿ ಸಂಭ್ರಮ.


9. ಮಡಂತ್ಯಾರು: ಮಚ್ಚಿನದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲಾಯಿತು. 


10. ಮಡಂತ್ಯಾರು: ಬಿಜೆಪಿ ಬಾವುಟ ಹಿಡಿದು ಕಾರ್ಯಕರ್ತರ ಸಂಭ್ರಮ.


11. ಬಂಟ್ವಾಳ: ರಾಜೇಶ್‌ ನಾೖಕ್‌ ಅವರು ಪೊಳಲಿ ಕ್ಷೇತ್ರಕ್ಕೆ  ಭೇಟಿ ನೀಡಿದರು.


12. ವೇಣೂರು: ಪೂಂಜ ಹೆತ್ತವರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.


13. ಬೆಳ್ತಂಗಡಿ: ಉಜಿರೆ ಬಳಿ ಅಂಗಡಿಯೊಂದರಲ್ಲಿ ಟಿ.ವಿ. ಮೂಲಕ ಚುನಾವಣ ಫಲಿತಾಂಶ ವೀಕ್ಷಿಸಿದ ಜನತೆ.


14. ವಿಟ್ಲ : ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ವಿಟ್ಲದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಪ್ರಮುಖರು, ಕಾರ್ಯಕರ್ತರು ವಿಟ್ಲದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next