ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ, 2014 ಮತ್ತು 2015ರಲ್ಲಿ ಕ್ರಮವಾಗಿ 5 ಮತ್ತು 4ನೇ ಸ್ಥಾನ ಪಡೆದುಕೊಂಡಿತ್ತು. 2016ರಲ್ಲಿ 1.54 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನಕ್ಕೆ ಏರಿದ್ದ
ಕರ್ನಾಟಕ, 2017ರ ಜೂನ್ ಅಂತ್ಯದವರೆಗೆ 1.41 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಈ ಸ್ಥಾನ ಉಳಿಸಿಕೊಂಡಿದೆ.
Advertisement
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಕಳೆದ 4 ವರ್ಷಗಳಲ್ಲಿ ಏಕಗವಾಕ್ಷಿ ಸಮಿತಿಗಳಲ್ಲಿ3.34ಕೋಟಿರೂ. ಬಂಡವಾಳಹೂಡಿ ಕೆಗೆ ಸಂಬಂಧಿಸಿದಂತೆ 1,823 ಕೈಗಾರಿಕೆಗಳಿಗೆ ಅನುಮೋದನೆ ನೀಡಲಾಗಿದೆ. 2016ರಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ 1,080 ಹೂಡಿಕೆಗಳಿಗೆಸಂಬಂಧಿಸಿದಂತೆ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಈ ಪೈಕಿ 4,500 ಕೋಟಿ ರೂ. ಹೂಡಿಕೆಯ 62 ಕೈಗಾರಿಕೆಗಳು ಕಾರ್ಯಾರಂಭಗೊಂಡಿವೆ. 1.69 ಕೋಟಿ ರೂ. ಹೂಡಿಕೆಯ 942 ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದು, ವಿವಿಧ ಕಾರಣಗಳಿಂದ 76 ಒಪ್ಪಂದಗಳು ರದ್ದುಗೊಂಡಿವೆ ಎಂದು ವಿವರಿಸಿದರು.
ಸುಮಾರು 6113.29 ಕೋಟಿ ರೂ. ಹೂಡಿಕೆಗೆ 13 ಕಂಪನಿಗಳು ಮುಂದೆ ಬಂದಿದ್ದು, 12,787 ಮಂದಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿವೆ. ಈ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡಲಾಗುವುದು ಎಂದರು. ಎಂಎಸ್‌ಎಂಇ ಬೆಳವಣಿಗೆಗೆ ಸಮಾವೇಶ:
ಕೈಗಾರಿಕಾ ಕ್ಷೇತ್ರದ ಅಭಿವೃದಿಟಛಿ, ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆ, ಕೈಗಾರಿಕಾ ಪ್ರದೇಶ ಮತ್ತು ಎಸ್ಟೇಟ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಿದ ಸಚಿವ ದೇಶಪಾಂಡೆ,
ಭಾರೀ ಕೈಗಾರಿಕೆಗಳ ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಬೆಳವಣಿಗೆಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ನವೆಂಬರ್ 23 ಮತ್ತು
24ರಂದು ರಾಷ್ಟ್ರೀಯ ಮಾರಾಟಗಾರರ ಮತ್ತು
ಬಂಡವಾಳ ಹೂಡಿಕೆದಾರರ ಸಮಾವೇಶ
ಹಮ್ಮಿಕೊಳ್ಳಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ
ಕೈಗಾರಿಕೆಗಳು ಹಾಗೂ ಬೃಹತ್ ಕೈಗಾರಿಕೆಗಳನ್ನು
ಒಂದೆಡೆ ತಂದು ಸಣ್ಣ ಮತ್ತು ಮಧ್ಯಮ
ಕೈಗಾರಿಕಾ ಘಟಕಗಳಿಗೆ ಮಾರುಕಟ್ಟೆ ಬೆಂಬಲ
ಸೇವೆ ನೀಡುವ ಉದ್ದೇಶದಿಂದ ಈ ಸಮಾವೇಶ
ಹಮ್ಮಿಕೊಳ್ಳಲಾಗಿದೆ ಎಂದರು.