Advertisement

Karnataka: 9 ಹೊಸ ಕೈಗಾರಿಕೆಗಳ ಬಂಡವಾಳ ಹೂಡಿಕೆಗೆ ಅಸ್ತು

11:36 PM Dec 12, 2023 | Team Udayavani |

ಬೆಳಗಾವಿ: ರಾಜ್ಯದಲ್ಲಿ ವಿವಿಧ ಪ್ರಕಾರದ ಒಂಭತ್ತು ಹೊಸ ಕೈಗಾರಿಕೆಗಳ ಬಂಡವಾಳ ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಕೈಗಾರಿಕಾ ಸಮಿತಿ ಒಪ್ಪಿಗೆ ನೀಡಿದ್ದು, ಇದರೊಂದಿಗೆ ಸರಿ ಸುಮಾರು 34 ಸಾವಿರ ಕೋಟಿ ರೂ.ಬಂಡವಾಳ ಹರಿದುಬರುವುದರ ಜತೆಗೆ ಸುಮಾರು 14,702 ಉದ್ಯೋಗಾವಕಾಶದ ನಿರೀಕ್ಷೆ ಇದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ನೀಡಲಾದ ಕೈಗಾರಿಕೆಗಳ ಸ್ಥಾಪನೆಯಲ್ಲಿ ಹೊಸ ಹೂಡಿಕೆ, ಹೆಚ್ಚುವರಿ ಹೂಡಿಕೆ, ವಿಸ್ತರಣೆಯೂ ಸೇರಿದೆ.

ಸಭೆಯ ಅನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌, ಪ್ರಮುಖವಾಗಿ ಇಂಧನ, ಸ್ಟೀಲ್‌, ಆಟೋಮೊಬೈಲ್‌ ಮತ್ತಿತರ ಕ್ಷೇತ್ರಗಳಿಗೆ ಸೇರಿದ ಕೈಗಾರಿಕೆಗಳ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ. ಮೂರು ಕೈಗಾರಿಕೆಗಳ ಪರವಾನಗಿ ನೀಡುವುದನ್ನು ಮಾತ್ರ ಮುಂದೂಡಲಾಗಿದೆ. ಇವು ಮುಖ್ಯವಾಗಿ ಸಕ್ಕರೆ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದವುಗಳಾಗಿವೆ ಎಂದರು.

ಯಾರ್ಯಾರ ಹೂಡಿಕೆ?
ಪ್ರಮುಖವಾಗಿ ಜೆಎಸ್‌ಡಬ್ಲು ರಿನ್ಯೂವೇಬಲ್‌ ಎನರ್ಜಿ ಲಿ., 4,960 ಕೋಟಿ ಹೂಡಿಕೆಗೆ ಮುಂದಾಗಿದ್ದು, 60 ಜನರಿಗೆ ಉದ್ಯೋಗ ದೊರೆಯಲಿದೆ. ಜಾನಕಿ ಕಾರ್ಪ್‌ ಲಿ., 618 ಕೋಟಿ ರೂ. ಹೂಡಿಕೆ ಮಾಡಿ, 618 ಜನರಿಗೆ ಉದ್ಯೋಗ, ಜೆಎಸ್‌ಡಬ್ಲು ಸ್ಟೀಲ್‌ ಲಿ., 3,804 ಕೋಟಿ ರೂ. ಹೂಡಿಕೆಯೊಂದಿಗೆ 2,800 ಉದ್ಯೋಗ, ಟಾಟಾ ಕಂಪನಿಯ ಸ್ಟೀಲ್‌ ಬೆಂಗಳೂರು 3,270 ಕೋಟಿ ಹೂಡಿಕೆ ಮಾಡಿ, 5,500 ಉದ್ಯೋಗ ದೊರೆಯಲಿದೆ.

ಎಂಬಸ್ಸಿ ಪ್ರೈ.ಲಿ., 700 ಕೋಟಿ ರೂ.ಹೂಡಿಕೆಯೊಂದಿಗೆ 600 ಉದ್ಯೋಗ, ಟೊಯೊಟ ಕಿರ್ಲೋಸ್ಕರ್‌ ಆಟೋ ಲಿ., 3,237 ಕೋಟಿಯೊಂದಿಗೆ 2,037 ಉದ್ಯೋಗ, ಕಿರ್ಲೋಸ್ಕರ್‌ನ ಆಟೋ ಪಾರ್ಟ್ಸ್ ಲಿ., 458 ಕೋಟಿ ಹೂಡಿಕೆಯೊಂದಿಗೆ 2,43 ಉದ್ಯೋಗ, ಕೇನ್ಸ್‌ ಸರ್ಕುಟ್‌ ಇಂಡಿಯಾ ಪ್ರç.ಲಿ., 950 ಕೋಟಿ ಹೂಡಿಕೆಯೊಂದಿಗೆ 830 ಜನರಿಗೆ ಉದ್ಯೋಗ, ಕೇನ್ಸ್‌ ಸೆಮಿಕಾನ್ಸ್‌ 1,381 ಕೋಟಿ ಹೂಡಿಕೆ ಮಾಡಿ 560 ಉದ್ಯೋಗ, ಓರಿಯಂಟ್ಸ್‌ ಲಿ., 80 ಕೋಟಿಯೊಂದಿಗೆ 60 ಉದ್ಯೋಗ ಸೃಷ್ಟಿಸಲಿದೆ. ಇವೆಲ್ಲವುಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.

Advertisement

ಇನ್ನು ಫಾಕ್ಸ್‌ಕಾನ್‌ ಟೆಕ್ನಾಲಜೀಸ್‌ ಒಂದೇ ತನ್ನ ಹೂಡಿಕೆಯನ್ನು ಒಂದೂವರೆಪಟ್ಟು ಹೆಚ್ಚಿಸಿದೆ. ಅಂದರೆ ಈ ಮೊದಲು ಎಂಟು ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಹೆಚ್ಚುವರಿಯಾಗಿ 13 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದೆ ಬಂದಿದೆ. ಅದೇ ರೀತಿ, ಬಾಗ¾ನೆ ಡೆವಲಪರ್ 361 ಕೋಟಿ, ವಿಕಾಸ್‌ ಟೆಲಿಕಾಂ 100 ಕೋಟಿ, ಪಟೇಲ್‌ ಎಂಜಿನಿಯರಿಂಗ್‌ 290 ಕೋಟಿ ರೂ. ಹೆಚ್ಚುವರಿ ಹೂಡಿಕೆ ಮಾಡಲಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next