ಹೈನುಗಾರರ ಪಾಲಿಗೆ ವರದಾನ ಆಗಿದ್ದ ಪಶುಭಾಗ್ಯ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನವೇ ಇಡದೇ ಹಾಲುತ್ಪಾದನೆಗೆ ಪ್ರೋತ್ಸಾಹ ಕೊರತೆ ಉಂಟಾಗಿದೆ. ಭೂ ರಹಿತರಿಗೂ ಸಾಲದ ನೆರವಾಗಿದ್ದ ಯೋಜನೆಗೆ ಈಗ ಕೋಕ್ ಸಿಕ್ಕಿದ್ದು, ಹೈನುಗಾರರ ಕೆಂಗಣ್ಣಿಗೂ ಗುರಿಯಾಗಿದೆ.
Advertisement
ಎರಡೇ ವರ್ಷದ ಭಾಗ್ಯ!: ಸಿದ್ದರಾಮಯ್ಯ ಅವರ ಸರಕಾರ ಇದ್ದಾಗ 2018ರ ಆಗಸ್ಟ್ 10 ರಂದು ಅಂದಿನ ಸರಕಾರ ಪಸಂಮೀ 166 ಪಪಯೋ 2018 ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಪಶು ಭಾಗ್ಯ ಯೋಜನೆ ಇಡೀ ರಾಜ್ಯಕ್ಕೆ ಅನುಷ್ಠಾನಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. 2018ರ ಬಜೆಟ್ ಯೋಜನೆ ರೈತರ ಮನೆಯಂಗಳಕ್ಕೆ ಬಂದಿತ್ತು. ದಿನಕ್ಕೆ 10 ಲೀ. ಹಾಲು ಹಿಂಡುವ ಎರಡುಆಕಳನ್ನು ಒಂದು ಯುನಿಟ್ ಎಂದು ಗುರುತಿಸಿ 1 ಲ.ರೂ., ವಿಮೆ 5 ಸಾವಿರ, ಸಾಗಾಣಿಕಾ ವೆಚ್ಚ 5 ಸಾವಿರ, ಪಶು ಆಹಾರ, ಲವಣ ಮಿಶ್ರಣ ಎಂದು 10 ಸಾವಿರ ರೂ. 1.20 ಲ.ರೂ. ಯುನಿಟ್ ವೆಚ್ಚ ಎಂದು ಪ್ರಕಟಿಸಿತು. ಇಡೀ ರಾಜ್ಯದ 30 ಜಿಲ್ಲೆಗಳ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ, ಪರಿಶಿಷ್ಟ ಜಾತಿ ಪಂಗಡಗಳ ಫಲಾನುಭವಿಗಳಿದ್ದರೆ ಅದರಲ್ಲೂ ಅಲ್ಪ ಸಂಖ್ಯಾತರಿಗೆ, ವಿಕಲಚೇತನರಿಗೆ, ವಿಶೇಷ ಚೇತನರಿಗೆ ಆದ್ಯತೆ ಕೊಡಬೇಕು. ಸಾಮಾನ್ಯವಾಗಿ ಫಲಾನುಭವಿಗಳ ಆಯ್ಕೆ ಆಯಾ ಶಾಸಕರು ಆಯ್ಕೆ ಮಾಡುತ್ತಾರೆ ಎಂದೂ ಹೇಳಲಾಗಿತ್ತು. ಆದರೂ ಈ ಯೋಜನೆ ಈಗಿಲ್ಲ!
ಹೈನುಗಾರಿಕೆ ಆರಂಭಿಸಬಹುದಿತ್ತು. ಅದಕ್ಕೂ ಅಗತ್ಯ ಗೈಡ್‌ಲೈನ್ ಇತ್ತು. ಸಾಮಾನ್ಯ ವರ್ಗಕ್ಕೆ ಶೇ.25ರ ತನಕ ಹಾಗೂ ಪರಿಶಿಷ್ಟ ಜಾತಿ ಪಂಗಡಗಳಿಗೆ ಶೇ.50ರ ಸಹಾಯಧನ ಇವರ ಖಾತೆಗೆ ಬಂದು ಬೀಳುತ್ತಿತ್ತು. ಆಕಳು, ಎಮ್ಮೆಗಳಿಗೂ ಈ ಯೋಜನೆ ಲಭ್ಯತೆ ಇತ್ತು. ಈ ಯೋಜನೆಯ ಲಾಭ ಪಡೆದು ಹೈನುಗಾರಿಕೆ ಆರಂಭಿಸಿ ಸುಸ್ಥಿರ ಬದುಕು ನಡೆಸಲು ನೆರವಾಗಿತ್ತು. ಆರ್ಥಿಕವಾಗಿ ಹಿಂದುಳಿದವರಿಗೆ ಹಣಕಾಸಿನ ಚೈತನ್ಯ ಕೊಡುತ್ತಿದ್ದವು. ಬದಲಾಯ್ತು ಯೋಜನೆ: ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಈ ಯೋಜನೆ ಕಳೆದ ವರ್ಷದ ಆಗಸ್ಟ್ 16ಕ್ಕೆ ಕೊಂಚ ಬದಲಾಯಿಸಿ ಆದೇಶ ಬಂತು. ಹೈನುಗಾರಿಕೆ, ಕುರಿ, ಮೇಕೆಗಳ ಸಾಕಾಣಿಕೆಗೂ ನೆರವಾಗುವಂತೆ ಯೋಜಿಸಲಾಯಿತು.
ಒಂದು ಆಕಳು ಅಥವಾ ಒಂದು ಎಮ್ಮೆಗೆ ಒಂದು ಘಟಕ ಎಂದು ಪರಿಗಣಿಸಿ 60 ಸಾವಿರ ರೂ. ನಿಗದಿ ಮಾಡಲಾಗಿತ್ತು. ಎಸ್‌ಸಿಎಸ್‌ಟಿಗೆ ಶೇ.90ರ ವರೆಗೆ, ಸಾಮಾನ್ಯ ವರ್ಗಕ್ಕೆ ಶೇ.50 ಸಹಾಯಧನ ನೀಡಲು ಸರಕಾರ ಮುಂದಾಯಿತು. ಒಂದು ಆಕಳು ಎಸ್‌ಸಿಎಸ್‌ಟಿ ಫಲಾನುಭವಿ ಖರೀದಿಸಿದರೆ 54 ಸಾ.ರೂ., 6 ಸಾ.ರೂ. ಬ್ಯಾಂಕ್ ಸಾಲ, ಸಾಮಾನ್ಯ ವರ್ಗದವರಿಗೆ 30 ಸಾವಿರ
ರೂ. , ಸಾಲ ಮತ್ತ 30 ಸಾವಿರ ರೂ. ಸಿಗುತ್ತಿತ್ತು.
Related Articles
ಮೂರನೇ ವರ್ಷ ಬಿಜೆಪಿ ಸರಕಾರ ಬಂತು. ಸರಕಾರ ಬದಲಾದಂತೆ ಯೋಜನೆಯೂ ಹೋಯ್ತು.
Advertisement
ಪಶು ಭಾಗ್ಯ ಯಜನೆ ಇರಬಕಿತ್ತು. ಕೊರೊನಾ ಕಷ್ಟದಲ್ಲಿ ಹೈನುಗಾರಿಕೆಗೆ ಒಂದೊಳ್ಳೆ ದಾರಿ ಆಗಿತ್ತು ಬದುಕಿಗೆ . ರೈತರ ಸರಕಾರ ಎನ್ನುತ್ತಾರೆ, ಯೋಜನೆ ಯಾಕೆ ನಿಲ್ಲಿಸ್ತಾರೆ?– ಮೋಹನ ನಾಯ್ಕ, ಹೈನುಗಾರ – ರಾಘವೇಂದ್ರ ಬೆಟಕೊಪ್ಪ