ವಿಜಯವಾಡ: ಲೆಗ್ ಸ್ಪಿನ್ನರ್ ಕಣ್ì ಶರ್ಮ ಮತ್ತು ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ ಅವರ ಬಿಗು ದಾಳಿಯಿಂದಾಗಿ ಭಾರತ “ಎ’ ತಂಡವು ಪ್ರವಾಸಿ ನ್ಯೂಜಿಲ್ಯಾಂಡ್ “ಎ’ ತಂಡದೆದುರು ನಡೆದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 31 ರನ್ನಿನಿಂದ ಜಯ ಸಾಧಿಸಿದೆ.
ನ್ಯೂಜಿಲ್ಯಾಂಡಿನ 142 ರನ್ನಿಗೆ ಉತ್ತರವಾಗಿ ಭಾರತ “ಎ’ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 320 ರನ್ ಗಳಿಸಿ ಆಲೌಟಾಯಿತು. ಇದರಿಂದಾಗಿ ಭಾರತ “ಎ’ 173 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ನ್ಯೂಜಿಲ್ಯಾಂಡ್ “ಎ ‘ ಆಟಗಾರರು ಭಾರತೀಯ ಬೌಲರ್‌ಗಳ ದಾಳಿಯನ್ನು ನಿಭಾಯಿಸಲು ವಿಫಲರಾದರು. ಕಣ್ì ಶರ್ಮ ಮತ್ತು ಶಾಬಾಜ್ ನದೀಮ್ ಅಮೋಘ ದಾಳಿ ಸಂಘಟಿಸಿ ಮೇಲುಗೈ ಸಾಧಿಸಿದರು. ಇದರಿಂದಾಗಿ ನ್ಯೂಜಿಲ್ಯಾಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 142 ರನ್ನಿಗೆ ಆಲೌಟಾಗಿ ಇನ್ನಿಂಗ್ಸ್ ಸೋಲು ಅನುಭವಿಸಿತು.
ಈ ಗೆಲುವಿನಿಂದ ಭಾರತ “ಎ’ ತಂಡ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಇದೇ ಮೈದಾನದಲ್ಲಿ ಸೆ. 30ರಿಂದ ಅ. 3ರ ವರೆಗೆ ನಡೆಯಲಿದೆ.
ನ್ಯೂಜಿಲ್ಯಾಂಡಿನ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಣ್ì ಮತ್ತು ನದೀಮ್ ತಲಾ ನಾಲ್ಕು ವಿಕೆಟ್ ಉರುಳಿಸಿದರು. ಒಟ್ಟಾರೆ ಈ ಪಂದ್ಯದಲ್ಲಿ ಕಣ್ì 120 ರನ್ನಿಗೆ 8 ಮತ್ತು ನದೀಮ್ 79 ರನ್ನಿಗೆ 8 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್ “ಎ’ 147 ಮತ್ತು 142 (ಜಾರ್ಜ್ ವೋರ್ಕರ್ 35, ಕಣ್ì ಶರ್ಮ 62ಕ್ಕೆ 2, ಶಾಬಾದ್ ನದೀಮ್ 51ಕ್ಕೆ 4); ಭಾರತ “ಎ’ 320.