Advertisement

NayantharaVsDhanush: ಕರ್ಮ ಬಡ್ಡಿ ಸಮೇತ ಬರುತ್ತೆ..: ಧನುಷ್‌ ಗೆ ಟಾಂಗ್‌ ಕೊಟ್ಟ ನಯನತಾರಾ

11:49 AM Dec 01, 2024 | Team Udayavani |

ನಟಿ ನಯನತಾರಾ ಹಾಗೂ ನಟ, ನಿರ್ಮಾಪಕ ಧನುಶ್‌ ಅವರ ನಡುವಿನ ಮನಸ್ತಾಪ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ದಿನೇ ಕಳೆದಂತೆ ಅದು ಹೊಸ ರೂಪ ಪಡೆಯುತ್ತಿದೆ. ನೆಟ್‌ ಫ್ಲಿಕ್ಸ್‌ ಒಟಿಟಿಯಲ್ಲಿ ನಯನತಾರಾ ಅವರ ಸಾಕ್ಷ್ಯಚಿತ್ರವೊಂದು ಮೂಡಿಬರುತ್ತಿದ್ದು, ಅದಕ್ಕಾಗಿ ಧನುಶ್‌ ನಿರ್ಮಾಣದ “ನಾನುಂ ರೌಡಿ ದಾನ್‌’ ಸಿನಿಮಾದ ಕೆಲ ದೃಶ್ಯಗಳನ್ನು ಬಳಸಲಾಗಿತ್ತು. ಇದು ಕಾಪಿರೈಟ್‌ ಎಂದು ಧನುಶ್‌, ನಯನತಾರಾ ಅವರಿಗೆ ಕಾನೂನು ನೋಟೀಸ್‌ ನೀಡಿ, 10 ಕೋಟಿ ರೂ. ಪರಿಹಾರ ಕೇಳಿದ್ದರು.

Advertisement

ಇದಕ್ಕೆ ನಯನತಾರಾ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಧನುಷ್‌ ಅವರ ವೈಯಕ್ತಿಕ ಜೀವನ ಸರಿಯಿಲ್ಲ, ಅವರಿಗೆ ವಿಚ್ಛೇದನವಾಗಿದೆ. ಹೀಗಿರುವಾಗಲೇ “ಕರ್ಮ ಬಡ್ಡಿ ಸಮೇತ ಬರುತ್ತದೆ’ ಎಂದು ಬರೆದುಕೊಳ್ಳುವ ಮೂಲಕ ನಯನತಾರಾ, ಧನುಶ್‌ಗೆ ಟಾಂಗ್‌ ಕೊಟ್ಟಿದ್ದಾರೆ.

“ಕರ್ಮ ಹೇಳುತ್ತದೆ, ಸುಳ್ಳುಗಳಿಂದ ನೀವು ಯಾರದ್ದಾದರೂ ಜೀವನವನ್ನು ನಾಶ ಮಾಡಿದರೆ, ಅದನ್ನು ಸಾಲದ ರೀತಿ ಸ್ವೀಕರಿಸು. ನಂತರ, ಬಡ್ಡಿ ಸಮೇತ ಅದು ನಿನಗೆ ಬರುತ್ತದೆ’ ಎಂದು ನಯನತಾರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇತ್ತೀಚೆಗೆ ಧನುಷ್‌ ಹಾಗೂ ಅವರ ಪತ್ನಿ ಐಶ್ವರ್ಯ ರಜನಿಕಾಂತ್‌ ಅವರು ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಸಹ ಅವರ ಅರ್ಜಿಗೆ ಸಮ್ಮತಿಸಿ, ವಿಚ್ಛೇದನ ನೀಡಿದೆ. ಈ ಹಿನ್ನೆಲೆಯಲ್ಲಿ ನಯನತಾರಾ ಅವರು ಈ ರೀತಿ ಪೋಸ್ಟ್‌ ಮಾಡಿರುವುದು ಹಲವು ಚರ್ಚೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next