Advertisement
ಕಳೆದ ಐದು ವರ್ಷಗಳ ಹಿಂದೆ ಸುಮಾರು 29 ಕಿ.ಮೀ. ಉದ್ದದ ಕಾರ್ಕಳ -ಪಡುಬಿದ್ರೆ ರಾಜ್ಯ ಹೆದ್ದಾರಿಯ ಸುಂದರ ರಸ್ತೆ ನಿರ್ಮಾಣದ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಾಗತೊಡಗಿತು.ಬಳಿಕ ಗುತ್ತಿಗೆದಾರರು ವಿಶೇಷ ತಂಡದಿಂದ ರಸ್ತೆ ಸರ್ವೆ ಕಾರ್ಯ ನಡೆಸಿ ಅತ್ಯಂತ ಹೆಚ್ಚು ಅಪಘಾತ ನಡೆಯುವ ಸ್ಥಳಗಳಿಗೆ ಹಂಪ್ಸ್‌ಗಳನ್ನು ನಿರ್ಮಾಣ ಮಾಡಿದ್ದರು. ಅದರಂತೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಹಾಗೂ ಸುಮಾರು 10ಕ್ಕೂ ಅಧಿಕ ದೊಡ್ಡ ಗಾತ್ರದ ಹಂಪ್ಸ್ ಗಳನ್ನು ನಿರ್ಮಾಣ ಮಾಡಿ ಅದಕ್ಕೆ ಸುಣ್ಣ -ಬಣ್ಣ ಬಳಿಯಲಾಗಿತ್ತು. ಆದರೆ ಇದೀಗ ರಸ್ತೆ ಹಂಪ್ಸ್‌ಗಳು ಬಣ್ಣ ಕಳೆದುಕೊಂಡು ಸವಾರರಿಗೆ ಗೋಚರಕ್ಕೆ ಬಾರದೆ ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಬೆಳ್ಮಣ್, ಕೆದಿಂಜೆ, ನಿಟ್ಟೆ , ಹಾಳೆಕಟ್ಟೆ , ನಂದಳಿಕೆ ಲಕ್ಷ್ಮೀ ಜನಾರ್ದನ ಶಾಲೆಯ ಬಳಿ ಹಾಗೂ ಅಡ್ವೆ, ನಂದಿಕೂರು , ಕಾಂಜರ ಕಟ್ಟೆಯ ಬಳಿಯಲ್ಲಿ ನಿರ್ಮಿಸಿರುವ ಹಂಪ್ಸ್‌ಗಳಿಂದಾಗಿ ನಿತ್ಯ ಒಂದಲ್ಲ ಒಂದು ಅವಘಡ ನಿರಂತರ ನಡೆಯುತ್ತಿವೆ. ಬೆಳ್ಮಣ್ ಪೇಟೆಯಿಂದ ಅನತಿ ದೂರದಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಹಂಪ್ಸ್‌ನಿಂದಾಗಿ ಹಾಗೂ ಚರ್ಚ್ ಬಳಿಯಲ್ಲಿರುವ ಹಂಪ್ಸ್ ನಿಂದಾಗಿ ಈಗಾಗಲೇ ಹಲವು ಅಪಘಾತ ನಡೆದಿವೆ.
Related Articles
Advertisement
ಇಲಾಖೆಗೆ ತಿಳಿಸಲಾಗುವುದು ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗುವುದು.
-ಸುಧಾಕರ್ ಕಾರ್ಕಳ,ಪಂಚಾಯತ್‌ರಾಜ್ ಇಂಜಿನಿಯರ್, ಕಾರ್ಕಳ ಹಂಪ್ಸ್ ಗೋಚರಿಸುತ್ತಿಲ್ಲ
ಕಾರ್ಕಳ -ಪಡುಬಿದ್ರೆ ರಸ್ತೆಯಲ್ಲಿ ಪದೇ ಪದೇ ಬ್ರೇಕ್ ಹೊಡೆಯುವುದರಿಂದ ,ಹಂಪ್ಸ್‌ಗಳು ಬಣ್ಣವಿಲ್ಲದೆ ಗೋಚರಕ್ಕೆ ಬಾರದೆ ಎಡವಟ್ಟು ಮಾಡಿಕೊಳ್ಳುವಂತಾಗಿದೆ.
-ರಾಜೇಶ್ ,ಬಸ್ ಚಾಲಕ ಆ್ಯಂಬುಲೆನ್ಸ್‌ಗಳಿಗೆ ತೊಂದರೆ
ನಿತ್ಯ ಈ ರಸ್ತೆಯಲ್ಲಿ ಅದೆಷ್ಟೋ ವಾಹನಗಳ ಸಹಿತ ಆ್ಯಂಬುಲೆನ್ಸ್ ಗಳು ಕೂಡ ಓಡಾಡುತ್ತವೆ.ಆದರೆ ಹಂಪ್ಸ್‌ಗಳು ಬಣ್ಣ ಕಳೆದುಕೊಂಡ ಪರಿಣಾಮ ವಾಹನ ಸವಾರರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಈ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ. -ನಿರಂಜನ್,ಬೆಳ್ಮಣ್ ನಾಗರಿಕ