Advertisement

ಮೂಲಸೌಕರ್ಯವಿಲ್ಲದ ತಾಣ ಕಾರ್ಕಳ ಗಾಂಧಿ ಮೈದಾನ

10:40 PM Nov 21, 2019 | Team Udayavani |

ಕಾರ್ಕಳ: ಮೂಲ ಸೌಕರ್ಯಗಳಿಲ್ಲದೇ ಕಾರ್ಕಳ ಗಾಂಧಿ ಮೈದಾನ
ಸೊರಗುತ್ತಿದೆ. ನಗರಕ್ಕೆ ಹೊಂದಿ ಕೊಂಡಂತಿರುವ ಪುರಸಭಾ ವ್ಯಾಪ್ತಿಯ 18ನೇ ವಾರ್ಡ್‌ನಲ್ಲಿ ಸುಮಾರು 4.77 ಎಕ್ರೆ ವಿಶಾಲವಾಗಿರುವ ಈ ಮೈದಾನ ಅಭಿವೃದ್ಧಿಯಾಗಬೇಕಿದೆ.

Advertisement

ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳು ಇದೇ ಮೈದಾನದಲ್ಲಿ ನಡೆಯುತ್ತಿದ್ದರೂ ಇಂದಿಗೂ ಅಭಿವೃದ್ಧಿಯಾಗಿಲ್ಲ. ಸರಕಾರಿ, ಖಾಸಗಿ ಕಾರ್ಯಕ್ರಮ, ಕ್ರೀಡಾಕೂಟ ನಿರಂತರ ನಡೆಯು ತ್ತಿದ್ದರೂ ಮೂಲ ಸೌಕರ್ಯವೇ ಇಲ್ಲಿಲ್ಲ.

ನೀರಿನ ಸಮಸ್ಯೆ
ಕ್ರೀಡಾಂಗಣಕ್ಕೆ ಅಗತ್ಯವಾಗಿ ಬೇಕಾಗಿದ್ದ ನೀರಿನ ವ್ಯವಸ್ಥೆ ಸಮರ್ಪಕ ರೀತಿಯಲ್ಲಿ ಇಲ್ಲ. ಕ್ರೀಡಾಂಗಣದಲ್ಲೇ ಬಾವಿ ಇದ್ದರೂ ಅದಕ್ಕೆ ಪಂಪ್‌ಸೆಟ್‌ ಮಾತ್ರ ಅಳವಡಿಕೆಯಾಗಿಲ್ಲ.

ಮೈದಾನ ಸುತ್ತ ದೀಪವಿಲ್ಲ
ದಿನಂಪ್ರತಿ ಮುಂಜಾನೆ ಹಾಗೂ ಸಂಜೆ ನೂರಾರು ಮಂದಿ ಜಾಗಿಂಗ್‌, ವಾಕಿಂಗ್‌ಗಾಗಿ ಇಲ್ಲಿ ಹಲವು ಮಂದಿ ಇಲ್ಲಿಗೆ ಅಗಮಿಸುತ್ತಾರೆ. ಅನೇಕ ಹಿರಿಯ ನಾಗರಿಕರು ಈ ಪ್ರಶಾಂತ ಜಾಗಕ್ಕೆ ಬಂದು ಸಮಯ ಕಳೆಯುತ್ತಾರೆ. ಹೀಗಾಗಿ ಅವರ ಅನುಕೂಲಕ್ಕಾಗಿ ಮೈದಾನದ ಸುತ್ತ ದೀಪ ಅಳವಡಿಸ ಬೇಕೆಂಬ ಬೇಡಿಕೆಯಿದೆ.

ರಂಗ ಮಂದಿರ
ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭ ಸರಕಾರದಿಂದ ಪುರಸಭೆಗೆ ದೊರೆತ ವಿಶೇಷ ಅನುದಾನದ ಉಳಿಕೆ ಮೊತ್ತದಲ್ಲಿ ಗಾಂಧಿ ಮೈದಾನದಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಪುರಸಭೆ ಅಂದು 25 ಲಕ್ಷ ರೂ.
ವ್ಯಯ ಮಾಡಿತ್ತು ಎಂದು ಅಂದಿನ ಪುರಸಭಾ ಸದಸ್ಯ ಅಕ್ಷತಾ ರಾವ್‌ ಹೇಳುತ್ತಾರೆ.
ರಂಗ ಮಂದಿರದ ನಿರ್ವಹಣೆಯೂ ಇಲ್ಲದೆ ಅದು ಶೋಚನೀಯ ಸ್ಥಿತಿ ಯಲ್ಲಿದೆ, ಮಳೆ ನೀರು ಸೋರುತ್ತಿದೆ. ರಂಗ ಮಂದಿರದಲ್ಲಿರುವ ಶೌಚಾಲಯ ಬಳಸದ ಸ್ಥಿತಿಯಲ್ಲಿದೆ.

Advertisement

ಗ್ರಂಥಾಲಯವಿದೆ
ಕ್ರೀಡಾಂಗಣದ ಎದುರುಗಡೆ ಸಾರ್ವಜನಿಕ ಗ್ರಂಥಾಲಯವಿದೆ. ಅಲ್ಲಿಗೆ ಆಗಮಿಸಿದ ಓದುಗರು ಗಾಂಧಿ ಮೈದಾನದಲ್ಲಿ ವಾಕಿಂಗ್‌ ತೆರಳುವುದು ಸಾಮಾನ್ಯವಾಗಿದೆ.

ಶೋಚನೀಯ ಸ್ಥಿತಿಯಲ್ಲಿ ಗಾಂಧಿ ಪ್ರತಿಮೆ
2015ರಲ್ಲಿ ಅಂದಿನ ಪುರಸಭೆ ಅಧ್ಯಕ್ಷೆ ರೆಹಮತ್‌ ಶೇಖ್‌  ಹಾಗೂ ಮುಖ್ಯಾಧಿಕಾರಿ ರಾಯಪ್ಪನವರು ಗಾಂಧಿ ಮೈದಾನದಲ್ಲಿ ಗಾಂಧಿ ಪ್ರತಿಮೆ ನಿರ್ಮಿಸುವ ಕಾರ್ಯ ಕೈಗೊಂಡಿದ್ದರು. ಆದರೆ ಅದು ಇದೀಗ ನಿರ್ವಹಣೆ ಇಲ್ಲದೆ ಗಾಂಧಿ ಪ್ರತಿಮೆ ಮಾತ್ರ ಶೋಚನೀಯ ಸ್ಥಿತಿಯಲ್ಲಿದೆ. ಗಾಂಧಿಗೆ 150 ತುಂಬುವ ನಿಟ್ಟಿನಲ್ಲಾದರೂ ಗಾಂಧಿ ಪ್ರತಿಮೆ ನವೀಕರಣವಾಗಲಿ ಎನ್ನುತ್ತಾರೆ ನಿಶಾಂತ್‌.

ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನಿಸುವೆ
ಗಾಂಧಿ ಮೈದಾನದಲ್ಲಿ ದಿನಂಪತ್ರಿ ನೂರಾರು ಮಂದಿ ವಾಕಿಂಗ್‌ಗೆ ಬರುತ್ತಾರೆ. ಹಲವು ಸಂಘ ಸಂಸ್ಥೆಯವರು ಕ್ರೀಡಾಕೂಟ ಆಯೋಜಿಸುತ್ತಾರೆ. ಹೀಗಾಗಿ ಗಾಂಧಿ ಮೈದಾನ ಅಭಿವೃದ್ಧಿಯಾಗಬೇಕಾಗಿದೆ. ಪುರಸಭೆಯಿಂದ ಅನುದಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.
-ಪಲ್ಲವಿ, ಪುರಸಭಾ ಸದಸ್ಯರು, ವಾರ್ಡ್‌ 18

ವಾಕಿಂಗ್‌ ಪಾತ್‌ ನಿರ್ಮಾಣವಾಗಲಿ
ಪುರಸಭೆ ಗಾಂಧಿ ಮೈದಾನದ ನಿರ್ವಹಣೆಗಾಗಿ ಕಾರ್ಯಕ್ರಮ ಆಯೋಜಕರಿಂದ 1 ಸಾವಿರ ರೂ. ಪಡೆಯುತ್ತಿದೆ. ಪುರಸಭೆ ಗಾಂಧಿ ಪ್ರತಿಮೆ, ರಂಗಮಂದಿರವನ್ನು ತುರ್ತಾಗಿ ನವೀಕರಣಗೊಳಿಸಬೇಕು. ಬಳಿಕ ವಾಕಿಂಗ್‌ ಪಾತ್‌ ನಿರ್ಮಿಸುವ ನಿಟ್ಟಿನಲ್ಲಿ ಪುರಸಭೆ ಗಮನಹರಿಸಬೇಕಿದೆ.
-ಪದ್ಮಪ್ರಸಾದ್‌ ಜೈನ್‌, ನಾಗರಿಕ

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next