Advertisement
ಕಳೆಕಟ್ಟಿದ ಸಂಭ್ರಮರವಿವಾರ ಸಂಜೆ 3 ಗಂಟೆಗೆ ಕಾರ್ಕಳ ಬಂಡಿಮಠ ಬಸ್ ನಿಲ್ದಾಣದಿಂದ ವಿವಿಧ ಜಿಲ್ಲೆಗಳಿಗೆ ಬಸ್ ಸೌಲಭ್ಯವಿದೆ ಎಂದು ತಿಳಿದ ಉಭಯ ತಾಲೂಕಿನಲ್ಲಿದ್ದ ಹೊರ ಜಿಲ್ಲೆಯ ಕೂಲಿ ಕಾರ್ಮಿಕರು ಮಧ್ಯಾಹ್ನವೇ ನಗರದತ್ತ ಧಾವಿಸಿದರು. ಆಟೋ, ಟ್ಯಾಕ್ಸಿ ಸೇವೆ ಇಲ್ಲದ ಪರಿಣಾಮ ದೂರದೂರಿನಿಂದಲೂ ನಡೆದುಕೊಂಡೇ ಬಂಡಿಮಠ ಬಸ್ ನಿಲ್ದಾಣದತ್ತ ಸಾಗಿದ ಹೊರ ಜಿಲ್ಲೆಯ ವಲಸಿ ಕಾರ್ಮಿಕರ ಮುಖದಲ್ಲಿ ಸಂಭ್ರಮ ಕಳೆಕಟ್ಟಿತ್ತು. ಅದೆಷ್ಟೋ ದಿನಗಳಿಂದ ಈ ಸಮಯಕ್ಕಾಗಿ ಕಾಯುತ್ತಿದ್ದ ಅವರು ಊರಿನತ್ತ ತೆರಳುವ ಖುಷಿ ಒಂದೆಡೆಯಾದರೆ, ಕೆಎಸ್‌ಆರ್‌ಟಿಸಿ ಉಚಿತ ಬಸ್ ಸೌಲಭ್ಯ ಕಲ್ಪಿಸಿರುವುದು ಖುಷಿಯನ್ನು ಇಮ್ಮಡಿಗೊಳಿಸಿತು.
ಶಾಸಕ ವಿ. ಸುನಿಲ್ ಕುಮಾರ್, ತಹಶೀಲ್ದಾರ್‌ಗಳಾದ ಪುರಂದರ ಹೆಗ್ಡೆ, ಮಹೇಶ್ಚಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಕಂದಾಯ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ವಲಸೆ ಕಾರ್ಮಿಕರನ್ನು ಬೀಳ್ಕೊಟ್ಟರು.