Advertisement

ಕಾರ್ಕಳ: ಆಧಾರ್‌ ತಿದ್ದುಪಡಿಗೆ ಜನಸಂದಣಿ

01:05 PM Jul 18, 2019 | sudhir |

ಕಾರ್ಕಳ: ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಇಂದು ಆಧಾರ್‌ ಕಾರ್ಡ್‌ ಅಗತ್ಯ. ಪ್ರತಿಯೊಬ್ಬರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಕಾರ್ಕಳದಲ್ಲಿ ಸಾಕಷ್ಟು ಸಮಯ ಕಾಯುವಂತಾಗಿದೆ.

Advertisement

ವೋಟರ್‌ ಐಡಿ, ಆರ್‌ಟಿಸಿ ನೋಂದಣಿ, ಪಾಸ್‌ ಪೋರ್ಟ್‌ ಪಡೆಯುವಿಕೆ, ಅಡುಗೆ ಅನಿಲ ಸಂಪರ್ಕಕ್ಕಾಗಿ, ಶಾಲಾ ದಾಖಲಾತಿ, ವಿವಿಧ ಪರವಾನಿಗೆ, ಪಿಎಫ್ ಪಡೆಯಲು, ವಸತಿ ಯೋಜನೆಗಳಿಗಾಗಿ ಹೀಗೆ ಅನೇಕ ಕಾರ್ಯಗಳಿಗೆ ಆಧಾರ್‌ ಅಗತ್ಯ. ಕಾರ್ಕಳ ತಾಲೂಕು ಕಚೇರಿಯಲ್ಲಿ ಮಾತ್ರ ಹೊಸತಾಗಿ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಸಾಧ್ಯವಾಗುತ್ತಿರುವ ಕಾರಣ ಸಾರ್ವಜನಿಕರು ತಾಲೂಕು ಕಚೇರಿಯನ್ನೇ ಅವಲಂಬಿಸಬೇಕಿದೆ.

ಸರ್ವರ್‌ ಸಮಸ್ಯೆ ಜೊತೆಗೆ ಇದಕ್ಕೆ 25ರಿಂದ 30 ಮಂದಿಗೆ ಆಧಾರ್‌ ತಿದ್ದುಪಡಿಯಾಗುತ್ತಿದ್ದು ತಾಲೂಕು ಕಚೇರಿಗೆ ದಿನವೊಂದಕ್ಕೆ ನೂರಾರು ಮಂದಿ ಆಗಮಿಸುತ್ತಿದ್ದಾರೆ.

ಗ್ರಾ.ಪಂ. ನಲ್ಲಿ ಸ್ಥಗಿತ
ಅಂಚೆ ಕಚೇರಿ, ಗ್ರಾಮ ಪಂಚಾಯತ್‌ಗಳಲ್ಲಿ ಹೊಸ ಆಧಾರ್‌ ಕಾರ್ಡ್‌ ಅಥವಾ ಆಧಾರ್‌ ತಿದ್ದುಪಡಿ ಕಾರ್ಯವಾಗದೇ ಇರುವುದರಿಂದ ಸಾರ್ವಜನಿಕರು ತಾಲೂಕು ಕಚೇರಿಯನ್ನೇ ನೆಚ್ಚಿಕೊಳ್ಳುವುದು ಅನಿವಾರ್ಯ.

ಅಧಿಕಾರಿಗಳು ಗಮನ ಹರಿಸಿ
ಆಧಾರ್‌ ತಿದ್ದುಪಡಿ ಅಥವಾ ಹೊಸ ಆಧಾರ್‌ ಕಾರ್ಡ್‌ ಮಾಡಿಸುವವರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲಿ.
-ಆದಿರಾಜ ಅಜ್ರಿ, ಸಾಮಾಜಿಕ ಕಾರ್ಯಕರ್ತರು

Advertisement

ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂಚೆ ಕಚೇರಿ, ಕೆಲವೊಂದು ಬ್ಯಾಂಕ್‌ಗಳಲ್ಲಿ ಆಧಾರ್‌ ತಿದ್ದುಪಡಿ ಕಾರ್ಯವಾಗುತ್ತಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಆಧಾರ್‌ ತಿದ್ದುಪಡಿ ಕಾರ್ಯ ಸ್ಥಗಿತವಾದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.
– ಪುರಂದರ ಹೆಗ್ಡೆ , ತಹಶೀಲ್ದಾರರು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next