Advertisement

Karkala: ದೂರವಾಣಿ ಕರೆ ಮಾಡಿ ಹಣ ಲೂಟಿ

12:57 AM Dec 31, 2024 | Team Udayavani |

ಕಾರ್ಕಳ: ದುರ್ಗಾ ಗ್ರಾಮದ ತೆಳ್ಳಾರು ನಿವಾಸಿ ಸುರಕ್ಷಾ ಅವರಿಗೆ ಆನ್‌ಲೈನ್‌ ವಂಚಕರು ಡಿ.29ರಂದು 67,500 ರೂ. ವಂಚಿಸಿದ್ದಾರೆ. ಅಪರಿಚಿತ ನಂಬರ್‌ನಿಂದ ಕರೆ ಬಂದಿದ್ದು, ಸುರಕ್ಷಾ ಕರೆ ಸ್ವೀಕರಿಸಿದಾಗ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಅವರು ಕೆನರಾ ಬ್ಯಾಂಕ್‌ ತೆಳ್ಳಾರು ಶಾಖೆಯಲ್ಲಿ ಹೊಂದಿರುವ ಖಾತೆಯಿಂದ 2 ಹಂತಗಳಲ್ಲಿ ಒಟ್ಟು 67,500 ರೂ. ಕಡಿತಗೊಂಡ ಸಂದೇಶ ಬಂದಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next