Advertisement
ಕಾರ್ಕಳ ತಾ|ನ ಜಯಂತಿನಗರ ಪುಟ್ಟ ಮನೆಯೊಂದರಲ್ಲಿ ಮಗನ ಜತೆ ವಾಸವಿರುವ ವೃದ್ಧೆ ರತ್ನಾವತಿ ಕಾಮತ್‌ರಿಗೆ ಈಗ ವಯಸ್ಸು 80 ದಾಟಿದೆ. ಪತಿ ನಾರಾಯಣ ಕಾಮತ್ ಅವರು ತೀರಿಕೊಂಡು 6 ವರ್ಷಗಳಾಗಿವೆ. ಶ್ರಮ ಜೀವಿ ರತ್ನಾವತಿ ಕಾಮತ್ ಅವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿ ಯ ರು ಸಹಿತ ಮೂರು ಮಂದಿ ಮಕ್ಕಳು. 8 ಸೆಂಟ್ಸ್ ಜಾಗದಲ್ಲಿ ಪುತ್ರನ ಜತೆ ಇವರ ವಾಸ. ಮಗ ಸುಬ್ರಹ್ಮಣ್ಯ ಕಾಮತ್ ಖಾಸಗಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಶ್ರಮ ಜೀವಿಯಾದ ವೃದ್ಧೆಯ ದೇಹಕ್ಕೆ ವಯಸ್ಸಾಗಿದೆ. ಆದರೇ ಜೀವನೋತ್ಸಾಹ ಕಳೆದುಕೊಂಂಡಿಲ್ಲ. ಮುಪ್ಪಿನ ಸಮಸ್ಯೆ ಬಾಧಿಸಿಲ್ಲ. ಕೆಲವು ಸಂದರ್ಭದಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಎದುರಾಗಿದ್ದು ಬಿಟ್ಟರೆ ಹೆಚ್ಚೇನೂ ಸಮಸ್ಯೆಯಿಲ್ಲ. ನಮ್ಮನ್ನು ಶ್ರಮಜೀವಿಯಾಗಿ ಬೆಳೆಸಿದ ಅಮ್ಮ ಇಂದು ಲವಲವಿಕೆಯಿಂದಲೇ ಸ್ವಾವಲಂಬಿ ಜೀವನ ಮಾಡುತ್ತಿದ್ದಾರೆ. ಅವರಿಗೆ ನಾವೂ ನೆರವಾಗುತ್ತೇವೆ. ಅವರು ಸ್ಫೂರ್ತಿಯ ಚಿಲುಮೆ ಎನ್ನುತ್ತಾರೆ ಪುತ್ರಿ ವೀಣಾ.
Related Articles
ದೇಹದಲ್ಲಿ ಶಕ್ತಿ ಇರುವಷ್ಟು ದಿನ ಸ್ವಾವಲಂಬಿಯಾಗಿ ಬದುಕುವೆ ಎನ್ನುವ ಧೋರಣೆ ರತ್ನಾವತಿಯವರದ್ದು. ಇದಕ್ಕಾಗಿ ಅವರು ಮನೆ ಕೆಲಸಗಳ ಜತೆಗೆ ಕೊಟ್ಟೆ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನಕ್ಕೆ 50ರಿಂದ 100ರ ತನಕ ಕೊಟ್ಟೆ ಕಟ್ಟಿ ಮಾರಾಟ ಮಾಡುತ್ತಾರೆ. ಮೊದಲೆಲ್ಲ ಕಡ್ಡಿ ಮತ್ತು ಹಲಸಿನ ಎಲೆಗಳನ್ನು ತರಲು ಅವರೇ ಹೋಗುತ್ತಿದ್ದರು. ಈಗ ಮಕ್ಕಳು ತಂದು ಕೊಟ್ಟು ಸಹಕರಿಸುತ್ತಿದ್ದಾರೆ.
Advertisement