Advertisement
ಕರ್ನಾಟಕ ಸರಕಾರ, ಜಿ.ಪಂ. ಉಡುಪಿ, ಕೃಷಿ ಇಲಾಖೆ ಕಾರ್ಕಳ ಹಾಗೂ ಕೃಷಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಆತ್ಮ ಯೋಜನೆಯಡಿ ನಡೆದ “ಒಂದು ತಾಲೂಕು ಒಂದು ಉತ್ಪನ್ನ’ ಯೋಜನೆಯಡಿ ಎರಡು ಉತ್ಪನ್ನಗಳ ಬಿಡುಗಡೆ ಕಾರ್ಯ ಕ್ರಮ ನಡೆಯಿತು.
Related Articles
Advertisement
ಸಾಂಕೇತಿಕ ಬಿಡುಗಡೆ :
ಸಾಂಕೇತಿಕವಾಗಿ ಕಾರ್ಲ ಕಜೆ ಹಾಗೂ ಕಾರ್ಕಳ ಬಿಳಿ ಬೆಂಡೆ ಬೀಜ ವಿತರಣೆ ನಡೆಯಿತು. ಕಾರ್ಲ ಕಜೆ ಸಂಸ್ಕರಣೆಯಲ್ಲಿ ಸಹಕರಿಸಿದ ಮಿಲ್‌ನವರಿಗೆ ಗೌರವ ನಡೆಯಿತು. ಭಾರತೀಯ ಕಿಸಾನ್ ಸಂಘದವರು ಸಚಿವರಿಗೆ ಮನವಿ ಮಾಡಿದರು.
ತಳಿಗಳ ಪ್ರದರ್ಶನ :
ಕೃಷಿ ಯಂತ್ರೋಪಕರಣಗಳ ಮಾರಾಟ, ಗೊಬ್ಬರ ಘನ ಜೀವನಾಮೃತ, ಗೇರು ಬೀಜಗಳ ತಳಿ, ತರಕಾರಿ ಬೀಜಗಳ ಪ್ರದರ್ಶನ, ಅಮೃತ ಸಾವಯವ ಉತ್ಪನ್ನ ಮಳಿಗೆ, ಅಡಿಕೆ, ಸೀಯಾಳ, ಬಾಳೆ ವಿವಿಧ ತರಕಾರಿ, ಗೇರು ಬೀಜ ತಳಿಗಳ ಪ್ರದರ್ಶನವಿತ್ತು. ಭತ್ತದ ತಿರಿ, ಭತ್ತದ ತಳಿಗಳ ಪ್ರದರ್ಶನ, ಗೊಬ್ಬರ ಅನಿಲ ಸ್ಥಾವರ. ಕ್ಯಾಶ್ಯೂಸ್, ಟಿಲ್ಲರ್, ಅಡಿಕೆ ಮರ ಏರುವ ಯಂತ್ರ ಮುಂತಾದ ಕೃಷಿ ಸಂಬಂಧಿಸಿದ ಯಂತ್ರೋಪಕರಣಗಳ ಮಳಿಗೆಗಳು ಗಮನ ಸೆಳೆದವು. ಕೃಷಿ ಇಲಾಖೆ ಪ್ರಗತಿಪರ ರೈತರು ಬೆಳೆದ ಬೆಳೆಗಳು ಕಣ್ಮಣ ಸೆಳೆಯಿತು.
ಶಾಸಕ ವಿ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಇತಿಹಾಸ ಸೃಷ್ಟಿಯಾಗಿದೆ. ಸ್ಥಳೀಯ ರೈತರು ಬೆಳೆದ ಉತ್ಪನ್ನ ರಾಜ್ಯ ಮಾರುಕಟ್ಟೆ ಪ್ರವೇಶಿಸಬೇಕು. ಆಗ ತಾ| ರೈತರ ಘನತೆ ಹೆಚ್ಚುತ್ತದೆ. ದೇಶ, ರಾಜ್ಯದ ವಿವಿ ಧೆ ಡೆ ಯ ಅಲ್ಲಿಯ ರೈತರು ಬೆಳೆದ ಉತ್ಪನ್ನ ಬ್ರ್ಯಾಂಡ್ ಆದಂತೆ ಇಲ್ಲಿಯ ಉತ್ಪನ್ನವು ಬ್ರ್ಯಾಂಡ್ ಆಗಿ ವಿಸ್ತರಿಸಬೇಕಿದೆ ಎಂದರು.
ಕೌರವನಿಂದ – ಗೌರವ :
ಬ್ರ್ಯಾಂಡ್ ಉತ್ಪನ್ನ ಅನಾವರಣಗೊಳಿಸಿ ಮಾತನಾಡಿದ ಸಚಿವರು ಭಾಷಣ ಮಧ್ಯೆ ಕರಾವಳಿ ಜಿಲ್ಲೆಯ ಕೃಷಿಕರ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಮಾತುಗಳನ್ನಾಡಿದರು. ಇದೇ ವೇಳೆ ಅವರು ಕಾರ್ಕಳ ಅಕ್ಕಿಗೆ ಸರಕಾರದ ಮಾನ್ಯತೆ ನೀಡುವ ಮೂಲಕ ಕಾರ್ಕಳಕ್ಕೆ ಕೌರವನಿಂದ ಗೌರವ ನೀಡಲಾಗುವುದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಶಾಸಕ ವಿ. ಸುನಿಲ್‌ಕುಮಾರ್ ಅವರು ಭಾಷಣದಲ್ಲಿ 2004ರಲ್ಲಿ ಶಾಸಕರಾಗಿದ್ದ ಬಿ.ಸಿ. ಪಾಟೀಲ್ ಎತ್ತಿನ ಗಾಡಿಯಲ್ಲಿ ವಿಧಾನ ಸಭೆಗೆ ಬರುವ ಮೂಲಕ ಅವರಲ್ಲಿದ್ದ ಕೃಷಿ ಪ್ರೀತಿಯನ್ನು ತೋರ್ಪಡಿಸಿದ್ದರು ಎಂದು ಉಲ್ಲೇಖೀಸಿದರು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಂ.ಕೆ. ನಾಯ್ಕ ಮಾತನಾಡಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಹೆಬ್ರಿ ತಾ.ಪಂ. ಅಧ್ಯಕ್ಷ ರಮೇಶ ಪೂಜಾರಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಜಿ.ಪಂ. ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ, ಉದಯ್ ಎಸ್. ಕೋಟ್ಯಾನ್, ಜ್ಯೋತಿ ಹರೀಶ್ ಪೂಜಾರಿ, ತಾ.ಪಂ. ಉಪಾಧ್ಯಕ್ಷ ಹರೀಶ್ ನಾಯಕ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಉಮಾಕಾಂತ ರಾನಡೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮೋಹನದಾಸ ಶೆಟ್ಟಿ, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಆಂತೋನಿ ಡಿ’ಸೋಜಾ, ಜಿ.ಪಂ. ಸಿಇಒ ಡಾ| ನವೀನ್ ಭಟ್, ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ ವೇದಿಕೆಯಲ್ಲಿದ್ದರು.
ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಸ್ವಾಗತಿಸಿದರು. ನವೀನಚಂದ್ರ ಜೈನ್ ಪ್ರಸ್ತಾವನೆಗೈದರು. ಕೃಷಿ ಅಧಿಕಾರಿ ಶ್ರೀನಿವಾಸ್ ವಂದಿಸಿದರು. ಯೋಗೀಶ್ ಕಿಣಿ ರೈತ ಗೀತೆ ಹಾಡಿದರು.
ಹಾಡುಗಳ ಸುಧೆ :
ಕಾರ್ಲಕಜೆ ಬಿಡುಗಡೆ ಕಾರ್ಯಕ್ರಮಕ್ಕೆ ಮುಂಚಿತ ಕಲಾವಿದ ಯೋಗೀಶ್ ಕಿಣಿ ಹಾಗೂ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕೃಷಿ ಗೀತೆ, ನಾಡಗೀತೆ, ಭಾವಗೀತೆ ಮೊದಲಾದ ಸುಮಧುರ ಹಾಡುಗಳನ್ನು ಶುಶ್ರಾವ್ಯವಾಗಿ ಹಾಡಿ ಗಮನಸೆಳೆದರು.