Advertisement
ಡಿ. 2ರಂದು ಬೆಳಗ್ಗೆ 11ಕ್ಕೆ ಕಾಂತಾವರ ಗ್ರಾಮದ ಗೋಪಿ ಅವರು ಕಾಂತೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸು ಮನೆಗೆ ಬರುತ್ತಿದ್ದಾಗ ಕಾಂತಾವರ ಗ್ರಾಮದ ಅಂಬರೀಶ ಗುಹೆ ಸಮೀಪ, ಬಾರಾಡಿ-ಕಾಂತಾವರಕ್ಕೆ ಹೋಗುವ ರಸ್ತೆಯಲ್ಲಿ ಓರ್ವ ಬೈಕ್ನಲ್ಲಿದ್ದ ಅಪರಿಚಿತ ಹತ್ತಿರಕ್ಕೆ ಬಂದು ತುಳು ಭಾಷೆಯಲ್ಲಿ ಕೊಚ್ಚಿ ಪೊರ್ಬುಲ್ನ ಇಲ್ಲ್ ವೋಲು ಎಂದು ಕೇಳಿದ್ದು, ಅನಂತರ ಅವರನ್ನು ಹಿಡಿದುಕೊಂಡು ಅವರು ಧರಿಸಿದ್ದ ಚಿನ್ನದ ಚೈನ್ ಅನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ. ಗೋಪಿ ಅವರು ಪ್ರತಿರೋಧಿಸಿದ ಸಂದರ್ಭ ಚೈನ್ನ ಒಂದು ತುಂಡು ಅವರ ಕೈಯಲ್ಲಿ ಉಳಿದಿದ್ದು, ಕಳ್ಳ ಬಲವಾಗಿ ತಳ್ಳಿದ ಪರಿಣಾಮ ಗೋಪಿ ಅವರ ಕೈ, ಕುತ್ತಿಗೆಗೆ ಗಾಯವಾಗಿದೆ. ಸುಲಿಗೆಯಾದ ಚಿನ್ನದ ಮೌಲ್ಯ 1.20 ಲಕ್ಷ ರೂ. ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಉಡುಪಿಯಿಂದ ಕಾರ್ಕಳ ಕಡೆಗೆ ಡಿ. 2ರಂದು ಆದರ್ಶ್ (29) ಸ್ಕೂಟರ್ನಲ್ಲಿ ಬರುತ್ತಿದ್ದು, ಅವರಿಗೆ ಹಿಂದಿನಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದ ಲಾರಿ ಢಿಕ್ಕಿ ಹೊಡೆದಿದೆ. ಸ್ಕೂಟರ್ ಸವಾರ ಮತ್ತು ಸಹಸವಾರ ಇಬ್ಬರಿಗೆ ಗಾಯವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.