ಕಾರ್ಕಳ: ಆಟವಾಡುತ್ತಿದ್ದಾಗ ಸೀರೆಯ ಜೋಕಾಲಿಯು ಕುತ್ತಿಗೆಗೆ ಬಿಗಿದು ಶಾಲಾ ಬಾಲಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕೆಮ್ಮಣ್ಣಿನಲ್ಲಿ ಮೇ 26ರಂದು ಸಂಭವಿಸಿದೆ.
ಅಂತೊಟ್ಟು ಲಕ್ಷ್ಮಣ ಪೂಜಾರಿ ಅವರ ಪುತ್ರಿ, ಕೆಮ್ಮಣ್ಣು ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಮಾನ್ವಿ (9) ಮೃತಪಟ್ಟವಳು ಈಕೆ ಮನೆ ಸಮೀಪದಲ್ಲಿ ಸೀರೆಯ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ದುರಂತ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಅವಳನ್ನು ಸ್ಥಳಿಯ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement